ಹಸಿರು ಸೀರೆಯಲ್ಲಿ ಅರಗಿಣಿಯಂತೆ ಕಂಡ ಮೌನ : ಅಂದ ಅಂದರೇನು ನೀನೆ ಎಂದು ಕವನ ಗೀಚಿದ ಫ್ಯಾನ್ಸ್!

Published : Mar 19, 2024, 06:00 PM IST

ರಾಮಾಚಾರಿ ಖ್ಯಾತಿಯ ಮೌನ ಗುಡ್ಡೆಮನೆ ಹಸಿರು ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು,  ಅರಗಿಣಿಯಂತೆ ತುಂಬಾನೆ ಮುದ್ದು ಮುದ್ದಾಗಿ ಕಾಣಿಸ್ತಿದ್ದಾರೆ ನಟಿ.   

PREV
17
ಹಸಿರು ಸೀರೆಯಲ್ಲಿ ಅರಗಿಣಿಯಂತೆ ಕಂಡ ಮೌನ : ಅಂದ ಅಂದರೇನು ನೀನೆ ಎಂದು ಕವನ ಗೀಚಿದ ಫ್ಯಾನ್ಸ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ಪಾತ್ರದಲ್ಲಿ ನಟಿಸುತ್ತಿರುವ ಮೌನ ಗುಡ್ಡೆಮನೆ (Mouna Guddemane) ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 
 

27

ಧಾರಾವಾಹಿಯಲ್ಲಿ ಸದಾ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಳ್ಳುವ ಚಾರು, ಹೆಚ್ಚಾಗಿ ತಮ್ಮ ಸೋಶಿಯಲ್ ಮಿಡಿಯಾದಲ್ಲೂ (social media) ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡು ಶೇರ್ ಮಾಡುತ್ತಿರುತ್ತಾರೆ. 
 

37

ಈ ಬಾರಿ ಚಾರು ಗಿಳಿ ಹಸಿರು ಬಣ್ಣದ ಸೀರೆ (green saree), ಅದಕ್ಕೊಪ್ಪು ನೇರಳೆ ಬಣ್ಣದ ಬ್ಲೌಸ್ ಧರಿಸಿದ್ದು, ಅರಗಿಣಿಯಂತೆ ಕಾಣಿಸುತ್ತಿದ್ದಾರೆ, ಮುದ್ದಿನ ಗಿಣಿಮರಿ ಎಂದು ಅಭಿಮಾನಿಗಳೇ ಕಾಮೆಂಟ್ ಮಾಡಿದ್ದಾರೆ. 
 

47

ಇನ್ನೂ ಹಲವರು ಕಾಮೆಂಟ್ ಮಾಡಿ ಕವನಗಳನ್ನೇ ಗೀಚಿದ್ದು, ಅಂದ ಅಂದರೇನು ನೀನೆ ಅಂದೆ ನಾನು ಎಂದರೆ ಮತ್ತೆ ಕೆಲವರು ನೀವು ಸೀರೆಯುಟ್ರೆ ತುಂಬಾನೆ ಚೆನ್ನಾಗಿ ಕಾಣಿಸ್ತೀರಿ ಅಂದಿದ್ದಾರೆ, ಇನ್ನೂ ಕೆಲವರು ಚಂದಕ್ಕೆ ಮತ್ತೊಂದು ಹೆಸರೇ ಮೌನ ಎಂದಿದ್ದಾರೆ. 
 

57

ರಾಮಾಚಾರಿ (Ramachari) ಸೀರಿಯಲ್ ನಲ್ಲಿ ಚಾರು ಅದ್ಭುತ ನಟನೆ ನೋಡಿ ಅಭಿಮಾನಿಗಳು ನೀವು ಚಂದ, ನಿಮ್ಮ ಅಭಿನಯ ಅಂತೂ ಇನ್ನೂ ಚಂದ, ಪ್ರತಿದಿನ ನಿಮ್ಮನ್ನು ನೋಡೋಕೆ ಕಾಯ್ತಿದ್ದೀವಿ ಅಂದಿದ್ದಾರೆ. 
 

67

ರಾಮಾಚಾರಿ -ಚಾರುಗಳಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದ್ದು, ಅಭಿಮಾನಿಗಳಂತೂ ಇಬ್ಬರನ್ನೂ ಸದಾ ಜೊತೆಯಾಗಿ ನೋಡಲು ಕಾಯ್ತಿರ್ತಾರೆ. ಇಲ್ಲೂ ಸಹ ನೀವು ಚೆನ್ನಾಗಿ ಕಾಣಿಸ್ತಿದ್ದೀರಾ, ನಿಮ್ಮ ಜೊತೆ ನಮ್ಮ ರಾಮಾಚಾರಿ ರಿತ್ವಿಕ್ (Rithvik) ಇರ್ತಿದ್ರೆ ಮತ್ತೂ ಚೆನ್ನಾಗಿ ಕಾಣಿಸ್ತಿದ್ರು ಎಂದು ತಿಳಿಸಿದ್ದಾರೆ.
 

77

ಸೀರಿಯಲ್ ಬಗ್ಗೆ ಹೇಳೋದಾದರೆ ಚಾರು ಸಾವಿನ ಕದ ತಟ್ಟಿರೋ ತನ್ನ ಗಂಡನನ್ನು ಎಲ್ಲರಿಂದಲೂ ರಕ್ಷಿಸಿ, ಆಶ್ರಮ ಸೇರಿಸಿ, ಅಲ್ಲಿ ಚಿಕಿತ್ಸೆ ನೀಡುತ್ತಿದ್ದಾಳೆ. ಮತ್ತೊಂದೆಡೆ ಕಿಟ್ಟಿ ತನ್ನ ಅಣ್ಣ, ಅತ್ತಿಗೆಗೆ ರಕ್ಷಕನಾಗಿ, ಕಾವಾಲಾಗಿ ನಿಂತಿದ್ದಾರೆ. 
 

Read more Photos on
click me!

Recommended Stories