ಲಂಡನ್‌ನಲ್ಲಿ ದೀಪಿಕಾ ದಾಸ್: ಲೇಡಿ ಸೂಪರ್ ಸ್ಟಾರ್ ಎಂದ ಫ್ಯಾನ್ಸ್

Published : Dec 18, 2023, 03:05 PM IST

ನಾಗಿಣಿ ಮತ್ತು ಬಿಗ್ ಬಾಸ್ ಸೀಸನ್ 7 ಮೂಲಕ ಸದ್ದು ಮಾಡಿದ ನಟಿ ದೀಪಿಕಾ ದಾಸ್ ಇದೀಗ ಲಂಡನ್ ಟ್ರಿಪ್ ಎಂಜಾಯ್ ಮಾಡುತ್ತಿದ್ದು, ಅಲ್ಲಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ.   

PREV
17
ಲಂಡನ್‌ನಲ್ಲಿ ದೀಪಿಕಾ ದಾಸ್: ಲೇಡಿ ಸೂಪರ್ ಸ್ಟಾರ್ ಎಂದ ಫ್ಯಾನ್ಸ್

ಕನ್ನಡ ಕಿರುತೆರೆಯ ಖ್ಯಾತ ನಟಿ ಮತ್ತು ಬಿಗ್ ಬಾಸ್ ಸೀಸನ್ 7ರಲ್ಲಿ ಮಿಂಚಿದ ಬಾಸ್ ಲೇಡಿ ದೀಪಿಕಾ ದಾಸ್ (Deepika Das) ಸದ್ಯ ನಟನೆಯಿಂದ ದೂರ ಇದ್ದರೂ ಸಹ ತಮ್ಮ ಪ್ರವಾಸಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. 
 

27

ದೇಶ, ವಿದೇಶ ಟ್ರಾವೆಲ್ ಮಾಡೋ ಹವ್ಯಾಸ ಹೊಂದಿರುವ ದೀಪಿಕಾ ದಾಸ್ ವರ್ಷ ಪೂರ್ತಿ ಒಂದಲ್ಲ ಒಂದು ತಾಣಗಳಿಗೆ ಟ್ರಾವೆಲ್ ಮಾಡುತ್ತಾ, ಜೀವನವನ್ನು ಸಖತ್ತಾಗಿ ಎಂಜಾಯ್ ಮಾಡುತ್ತಾ, ಸುಮಧುರ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ (social media) ಶೇರ್ ಮಾಡುತ್ತಿರುತ್ತಾರೆ. 
 

37

ಈ ಬಾರಿ ದೀಪಿಕಾ ದಾಸ್ ಲಂಡನ್ ಗೆ ಪ್ರವಾಸ (Travel to London) ಕೈಗೊಂಡಿದ್ದು, ಶೇರ್ಲಾಕ್ ಹೋಮ್, ಬಿಗ್ ಬೆನ್ ಸೇರಿ ಲಂಡನ್ ನ ಹಲವಾರು ಜನಪ್ರಿಯ ಪ್ರವಾಸ ತಾಣಗಳಿಗೆ ತೆರಳಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದು, ಕಳೆದೆರಡು ದಿನಗಳಿಂದ ಅಲ್ಲಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 
 

47

ನೀಲಿ ಬಣ್ಣದ ಡ್ರೆಸ್ ಧರಿಸಿರುವ ದೀಪಿಕಾ ದಾಸ್, ಅದರ ಮೇಲೆ ಕ್ರೀಂ ಬಣ್ಣದ ಓವರ್ ಕೋಟ್, ಜೊತೆಗೆ ನೀ ಹೈ ಶೂ ಕೂಡ ಧರಿಸಿದ್ದಾರೆ. ಜೊತೆಗೆ ಕೈಯಲ್ಲಿ ಗ್ಲೌಸ್, ತಲೆಯಲ್ಲಿ ಮಂಕಿ ಕ್ಯಾಪ್ ಧರಿಸಿದ್ದು, ಚಳಿಯ ಊರಲ್ಲಿ ಕ್ರಿಸ್ಮಸ್ ತಿಂಗಳನ್ನು ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಂತೆ ಕಾಣುತ್ತಿದೆ. 
 

57

ದೀಪಿಕಾ ದಾಸ್ ಪೋಟೊ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅವರು ಒನ್ ಆಂಡ್ ಓನ್ಲಿ ಲೇಡಿ ಸೂಪರ್ ಸ್ಟಾರ್ (lady super star), ತುಂಬಾನೆ ಮುದ್ದಾಗಿ ಕಾಣಿಸ್ತೀರಾ, ನಿಮ್ಮ ಮುದ್ದು ಮಂದಹಾಸ ತುಂಬಾನೆ ಚೆನ್ನಾಗಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

67

ಮೊದಲಿನಿಂದಲೂ ತಮ್ಮ ಫ್ಯಾಷನ್ ಸೆನ್ಸ್‌ಗಾಗಿ ಹೆಸರು ಪಡೆದಿರುವ ದೀಪಿಕಾ ದಾಸ್ ಲಂಡನ್ ಲುಕ್ ನೋಡಿ ಮತ್ತೆ ಫ್ಯಾನ್ಸ್ ಟ್ರೆಂಡ್ ಸೆಟ್ಟರ್, ಫ್ಯಾಷನ್ ಕ್ವೀನ್, ಗಾಡೆಸ್ ಆಫ್ ಫ್ಯಾಷನ್ (Goddess of Fashion) ಎಂದೆಲ್ಲಾ ಹಾಡಿ ಹೊಗಳಿದ್ದಾರೆ. 
 

77

ಸದ್ಯ ಇನ್ ಸ್ಟಾಗ್ರಾಂನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಹೊಂದಿರುವ ದೀಪಿಕಾ ದಾಸ್, ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟೀವ್ ಆಗಿರ್ತಾರೆ. ಇನ್ನೊಂದು ಖುಷಿಯ ವಿಚಾರ ಅಂದ್ರೆ ದೀಪಿಕಾ ಪಾಯಲ್ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಯಾವಾಗ ರಿಲೀಸ್ ಆಗುತ್ತೆ ಅನ್ನೋದನ್ನು ಕಾಡು ನೋಡಬೇಕು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories