ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್, ಅಭಿಮಾನಿಗಳಿಂದ ವಿಶ್

First Published | Dec 17, 2023, 7:59 PM IST

ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ ತೇಜಸ್ವಿನಿ ಪ್ರಕಾಶ್  ಮತ್ತು ಫಣಿ ವರ್ಮ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ಸಂತೋಷ ಹೊತ್ತು ಮಗಳು ಬಂದಿರುವ ಬಗ್ಗೆ ಹೇಳಿಕೊಂಡು "ನನ್ನ ಮುದ್ದು ಸುಕುಮಾರಿ" ಎಂದು ತೇಜಸ್ವಿನಿ ಪ್ರಕಾಶ್ ಬರೆದುಕೊಂಡಿದ್ದಾರೆ. 

ಸಿನಿಮಾ ಮತ್ತು ಸೀರಿಯಲ್‌ ಎರಡಲ್ಲೂ ಗುರುತಿಸಿಕೊಂಡ ನಟಿ ತೇಜಸ್ವಿನಿ ಪ್ರಕಾಶ್‌, ಸವಿ ಸವಿ ನೆನಪು, ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ, ರಾಬರ್ಟ್, ಕೃಷ್ಣ ಸೇರಿದಂತೆ ಅನೇಕ ಸಿನೆಮಾಗಳಿಗೆ ಬಣ್ಣ ಹಚ್ಚಿದ್ದಾರೆ.

Tap to resize

ಹಲವು ಧಾರವಾಹಿಗಳಲ್ಲಿ ಮಿಂಚಿರುವ ತೇಜಸ್ವಿನಿ ಪ್ರಕಾಶ್ ಸೀಮಂತ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಅಕ್ಟೋಬರ್‌ನಲ್ಲಿ ನಡೆದಿತ್ತು.

2022ರಲ್ಲಿ ಮಾರ್ಚ್ ತಿಂಗಳಿನಲ್ಲಿ ತೇಜಸ್ವಿನಿ ಮತ್ತು ಫನಿ ವರ್ಮ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಆಗಮಿಸಿದ್ದರು.

Latest Videos

click me!