ಸಿಹಿ ಜೊತೆ ಕೆನಡಾಕ್ಕೆ ಹೊರಟ ಶ್ಯಾಮ್- ಶಾಲಿನಿ... ಜೈಲಿಂದ ಬಿಡುಗಡೆಯಾದ ಸೀತಾಗೆ ಮತ್ತೊಂದು ಆಘಾತ!

First Published | Nov 15, 2024, 3:36 PM IST

ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಶ್ಯಾಮ್ ಮತ್ತು ಶಾಲಿನಿ ಸಿಹಿಯನ್ನು ಕರೆದುಕೊಂಡು ಕೆನಡಾಕ್ಕೆ ಹೊರಟಿದ್ದಾರೆ, ಮುದ್ದಿನ ಮಗಳನ್ನು ಕಳೆದುಕೊಂಡ ಸೀತಾ- ರಾಮ ಮುಂದೇನು ಮಾಡ್ತಾರೆ? 
 

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಸೀತಾ ರಾಮ ಸೀರಿಯಲ್ ನಲ್ಲಿ ಭಾರ್ಗವಿಯ ಕುತಂತ್ರಕ್ಕೆ ಒಳಗಾಗಿ ಸೀತಾ ಜೈಲು ಸೇರುವಂತಾಗಿತ್ತು. ಭಾರ್ಗವಿ ಮಾತು ಕೇಳಿ, ಸಿಹಿ ಮನೆಯಿಂದ ಹೊರ ಹೋಗುವಂತೆ ಮಾಡಿದ ಶಾಲಿನಿ, ನಂತ್ರ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟು ಸೀತಾ ಅರೆಸ್ಟ್ ಆಗುವಂತೆ ಮಾಡಿದ್ದಾಳೆ. 
 

ಶಾಲಿನಿ ಮಾಡಿದ ತಂತ್ರವನ್ನು ಅರಿತ ಶ್ಯಾಮ್, ಸೀತಾ ನೋಡಲು ಮಗಳು ಸಿಹಿ ಜೊತೆ ಸ್ಟೇಷನ್ ಗೆ ಬರ್ತಾನೆ. ಜೈನಲ್ಲಿರುವ ಸೀತಮ್ಮನನ್ನು ನೋಡಿ ಕಣ್ಣೀರಿಡುವ ಸಿಹಿ, ಅಮ್ಮನ ತಪ್ಪಿಲ್ಲ, ಎಲ್ಲಾ ನಂದೇ ತಪ್ಪು, ನಾನು ಮನೆ ಬಿಟ್ಟು ಸೀತಮ್ಮನ ಬಳಿ ಓಡಿ ಹೋದದ್ದು, ಅಮ್ಮಂದು ತಪ್ಪಿಲ್ಲ, ನನ್ನನ್ನು ಜೈಲಿಗೆ ಹಾಕಿ ಅಂತಾಳೆ. ಸಿಹಿಗೆ ಮನವರಿಕೆ ಮಾಡಿದ ರಾಮ ಆಕೆಯನ್ನು ಮನೆಗೆ ಕಳುಹಿಸಿದ್ದು ಆಗಿದೆ. 
 

Tap to resize

ರಾಮ ತನ್ನ ಪವರ್ ಉಪಯೋಗಿಸಿ ಜೈಲಿನಿಂದ ಸೀತಾಳನ್ನು ಬಿಡಿಸಿ, ಸಿಹಿಯನ್ನು ನೋಡಲು ಅಶೋಕ್, ಪ್ರಿಯಾ, ಅಜ್ಜ, ಅಜ್ಜಿ, ಸೀತಾ ಅತ್ತಿಗೆ ಜೊತೆ ಹೊರಟಿರೋವಾಗ, ಬಂದ ಕರೆಯನ್ನು ಸ್ವೀಕರಿಸಿ ಶಾಕ್ ಆಗಿದ್ದಾರೆ ರಾಮ್, ರಾಮ್ ಕೈಯಿಂದ ಮೊಬೈಲ್ ತೆಗೆದು ಮಾತನಾಡಿದ ಅಶೋಕ್ ಕೂಡ ಶಾಕ್ ಆಗ್ತಾನೆ. ಇದೆಲ್ಲವನ್ನು ನೋಡಿ, ಮನೆಯವರಿಗೆ ಏನಾಗ್ತಿದೆ ಅನ್ನೋ ಗಾಬರಿ. 
 

ರಾಮನಿಗೆ ಪಾಸ್ ಪೋರ್ಟ್ ಆಫೀಸ್ ನಿಂದ ಕರೆ ಬಂದಿದ್ದು, ಶ್ಯಾಮ್ ಸಿಹಿ ಹೆಸರಿನಲ್ಲಿ ಪಾಸ್ ಪೋರ್ಟ್ ಮಾಡಿಸಿದ್ದು, ಸಿಹಿಯನ್ನು ತಮ್ಮೊಂದಿಗೆ ಕರೆದುಕೊಂಡು ಶ್ಯಾಮ್ ಮತ್ತು ಶಾಲಿನಿ ಈಗಾಗಲೇ ಕೆನಾಡಕ್ಕೆ ತೆರಳಲು ರೆಡಿಯಾಗಿದ್ದಾರೆ ಅನ್ನೋದು ಗೊತ್ತಾಗಿ ಮನೆಯವರೆಲ್ಲರಿಗೂ ಶಾಕ್ ಆಗುತ್ತೆ.
 

ಸಿಹಿಯನ್ನು ಕೆನಡಾಕ್ಕೆ ಕರೆದುಕೊಂಡು ಹೋಗುವ ಶ್ಯಾಮ್ -ಶಾಲಿನಿ ಪ್ಲ್ಯಾನ್ ಬಗ್ಗೆ ಸೀತಾಗೆ ಯೋಚಿಸೋದಕ್ಕೂ ಭಯ, ತನ್ನ ಮಗಳು ತನ್ನಿಂದ ದೂರ ಹೋಗ್ತಿದ್ದಾಳೆ, ಅನ್ನೋದನ್ನು ತಿಳಿದ ಸೀತಾ, ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಸಿಹಿ ದೂರ ಹೋಗೊದು ಅಂದ್ರೆ, ಅದು ಸೀತಾ -ರಾಮ ಇಬ್ಬರಿಗೂ ದೊಡ್ಡ ಆಘಾತವೇ ಸರಿ, ಹಾಗಿದ್ರೆ ಮುಂದೆ ಏನ್ಮಾಡ್ತಾರೆ ಸೀತಾ ರಾಮ? ಸಿಹಿಯನ್ನು ಕೆನಡಾಕ್ಕೆ ಹೋಗೋದರಿಂದ ತಡೆಯೋದಕ್ಕೆ ಸಾಧ್ಯಾನ? ಸಿಹಿ ಶಾಶ್ವತವಾಗಿ ಸೀತಾ ರಾಮರಿಂದ ದೂರ ಆಗ್ತಾಳ? ಎನ್ನುವ ಕುತೂಹಲ ಈಗ ವೀಕ್ಷಕರಲ್ಲಿ ಮನೆ ಮಾಡಿದೆ. 
 

ತುಂಬಾನೆ ಕುತೂಹಲ ಮೂಡಿಸಿರುವ ಪ್ರೊಮೋ ನೋಡಿ ವೀಕ್ಷಕರು ಸಖತ್ ಥ್ರಿಲ್ ಆಗಿದ್ದಾರೆ. ಮುಂದೇನು ಆಗಬಹುದು? ಅನ್ನೊದನ್ನ ನೋಡಲು ಕಾಯ್ತಿದ್ದಾರೆ ಜನ. ಇನ್ನೂ ಕೆಲವರು ಅಲ್ಲ ಒಂದೇ ರಾತ್ರಿಲಿ ಪಾಸ್ ಪೋರ್ಟ್ ಹೇಗೆ ಸಿಕ್ತು? ನಾವು ಹಗಲು ರಾತ್ರಿ ಕಷ್ಟಪಟ್ರು ವೀಸಾ, ಪಾಸ್ ಪೋರ್ಟ್ ಏನೂ ಸಿಗಲ್ಲ ಅಂತಿದ್ದಾರೆ. ಪಾಸ್ ಪೋರ್ಟ್ ಸಿಗೋದು ಇಷ್ಟೊಂದು ಸುಲಭ ಅಂತ ಗೊತ್ತಿರಲಿಲ್ಲ ಅಂತಾನೂ ಹೇಳ್ತಿದ್ದಾರೆ ಜನ. 
 

Latest Videos

click me!