ಭಾವಿ ಪತಿ ಫೋಟೋ ರಿವೀಲ್ ಮಾಡಿದ 'ಲಕ್ಷ್ಮಿ ನಿವಾಸ' ಚಂದನಾ ಅನಂತಕೃಷ್ಣ; ಅತ್ತೆ-ಮಾವ ಕನ್ನಡ ಚಿತ್ರರಂಗದವರೇ!

Published : Nov 15, 2024, 09:34 AM ISTUpdated : Nov 15, 2024, 09:37 AM IST

ದೊಡ್ಡ ಕುಟುಂಬಕ್ಕೆ ಸೇರುತ್ತಿದ್ದಾರೆ ಚಂದನಾ ಅನಂತಕೃಷ್ಣ. ಇದೇ ತಿಂಗಳು ಮದುವೆ ಅಂತಿದ್ದಾರೆ ಅಭಿಮಾನಿಗಳು......

PREV
16
ಭಾವಿ ಪತಿ ಫೋಟೋ ರಿವೀಲ್ ಮಾಡಿದ 'ಲಕ್ಷ್ಮಿ ನಿವಾಸ' ಚಂದನಾ ಅನಂತಕೃಷ್ಣ; ಅತ್ತೆ-ಮಾವ ಕನ್ನಡ ಚಿತ್ರರಂಗದವರೇ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಜಾನವಿ ಪಾತ್ರದಲ್ಲಿ ಮಿಂಚುತ್ತಿರುವ ಚಂದನಾ ಅನಂತಕೃಷ್ಣ ಮದುವೆ ಆಗುತ್ತಿದ್ದಾರೆ. 

26

ಆಗಲೇ ಮದುವೆ ಆಗಿದೆ ಅಲ್ವಾ ಅಂತ ಪ್ರಶ್ನೆ ಮಾಡುತ್ತಿರುವವರಿಗೆ ಇಲ್ಲಿದೆ ಕ್ಲಾರಿಟಿ. ರೀಲ್‌ನಲ್ಲಿ ಮದುವೆ ಆಗಿರುವ ಚಂದನಾ ಇದೀಗ ರಿಯಲ್ ಆಗಿ ಮದುವೆ ಆಗುತ್ತಿದ್ದಾರೆ.

36

ಚಂದನಾ ಅನಂತಕೃಷ್ಣ ಮತ್ತು ಪ್ರತ್ಯಕ್ಷ್ ಇದೇ ನವೆಂಬರ್ 28ರಂದು ಮದುವೆ ಆಗುತ್ತಿದ್ದಾರೆ. ಭಾವಿ ಪತಿ ಪ್ರತ್ಯಕ್ಷ್‌ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

46

ಕನ್ನಡ ಚಿತ್ರರಂಗದಲ್ಲಿ ಸಖತ್ ಹೆಸರು ಮಾಡಿದ್ದ ದಿವಂಗತ ನಟ ಉದಯ್ ಹುತ್ತಿನಗದ್ದೆ ಮತ್ತು ನಟಿ ಲಲಿತಾಂಜಲಿ ದಂಪತಿಯ ಜೇಷ್ಠ ಪುತ್ರನೇ ಪ್ರತ್ಯಕ್ಷ್.

56

ಅಗ್ನಿಪರ್ವ, ಶುಭ ವಿಲನ, ಜಯಭೇರಿ, ಉದ್ಭವ, ಅಮೃತ ಬಿಂದು, ಶಿವಯೋಗಿ ಅಕ್ಕಮಹಾದೇವಿ, ಉಂಡು ಹೋದ ಕೊಂಡು ಹೋದ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಉದಯ್ ನಟಿಸಿದ್ದರು.

66

ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರು ನಟಿ ಲಲಿತಾಂಜಲಿ ಕಿನ್ನರಿ ಮತ್ತು ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಹೀಗಾಗಿ ಚಂದನಾ ಕಲಾವಿದರ ಕುಟುಂಬವನ್ನು ಸೇರಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories