ಬಿಗ್ ಬಾಸ್ ನಿರೂಪಕನಾಗಿ ಸಲ್ಮಾನ್ ಖಾನ್ ಮುಂದುವರಿಕೆ, ಕನ್ನಡದಲ್ಲೂ ಹೀಗೆ ಆಗುತ್ತಾ?

Published : May 22, 2025, 12:10 AM IST

ಬಿಗ್ ಬಾಸ್ 19ರ ತಯಾರಿ ಶುರುವಾಗಿದೆ. ಸಲ್ಮಾನ್ ಖಾನ್ ಮತ್ತೊಮ್ಮೆ ಹೋಸ್ಟ್ ಮಾಡುತ್ತಿದ್ದಾರೆ ಅನ್ನೋ ವರದಿ ಬಹಿರಂಗವಾಗಿದೆ. ನಿರೂಪಕ ಸ್ಥಾನದಿಂದ ಹಿಂದೆ ಸರಿಯುವ ಮಾತನಾಡಿದ್ದ ಸಲ್ಮಾನ್ ಇದೀಗ ಹಿಂದಿ ಬಿಗ್ ಬಾಸ್ ಮತ್ತೆ ಹೋಸ್ಟ್ ಮಾಡುತ್ತಿದ್ದಾರೆ. ಕನ್ನಡ ಬಿಗ್ ಬಾಸ್‌ನಲ್ಲೂ ಹೀಗೆ ಆಗುತ್ತಾ? 

PREV
15
ಬಿಗ್ ಬಾಸ್ ನಿರೂಪಕನಾಗಿ ಸಲ್ಮಾನ್ ಖಾನ್ ಮುಂದುವರಿಕೆ, ಕನ್ನಡದಲ್ಲೂ ಹೀಗೆ ಆಗುತ್ತಾ?

ಹಿಂದಿ ಬಿಗ್ ಬಾಸ್ ಶೋ ಸಲ್ಮಾನ್ ಖಾನ್ ಬಿಟ್ಟು ಬೇರೋಬ್ಬರು ಹೋಸ್ಟ್ ಮಾಡಿದರೆ ಈ ಪಾಟಿ ವೀಕ್ಷಕರನ್ನು ಪಡೆಯುತ್ತಾ ಅನ್ನೋದು ಯಕ್ಷ ಪ್ರಶ್ನೆ, ಸಲ್ಮಾನ್ ಖಾನ್ ಕಾರಣಕ್ಕೆ ಬಿಗ್ ಬಾಸ್ ನೋಡುವ ಮಂದಿ ಹೆಚ್ಚಿದ್ದಾರೆ. ಅಷ್ಟರಮಟ್ಟಿದೆ ಸಲ್ಮಾನ್ ಖಾನ್ ಶೋ ಆವರಿಸಿಕೊಂಡಿದ್ದಾರೆ. ಕಳೆದ ಸೀಸನ್ ಅಂತ್ಯದಲ್ಲಿ ಸಲ್ಮಾನ್ ಖಾನ್ ಮುಂದಿನ ಬಾರಿ ಬಿಗ್ ಬಾಸ್ ಹೋಸ್ಟ್ ಮಾಡುವುದಿಲ್ಲ ಅನ್ನೋ ಮಾತು ಕೇಳಿಬಂದಿತ್ತು. ಆದರೆ ವರದಿಗಳ ಪ್ರಕಾರ 19ನೇ ಆವೃತ್ತಿ ಬಿಗ್ ಬಾಸ್ ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

25

19ನೇ ಆವೃತ್ತಿಯಲ್ಲಿ ಸಲ್ಮಾನ್ ಖಾನ್ ನಿರೂಪಕನಾಗಿ ಮುಂದುವರಿಯುತ್ತಿದ್ದಾರೆ. ಇದು ಪ್ರೇಕ್ಷಕರ ಉತ್ಸಾಹ ಹೆಚ್ಚಿಸಿದೆ. ಸಲ್ಮಾನ್ ಖಾನ್ ಹೋಸ್ಟ್ ಸ್ಥಾನದಲ್ಲಿ ಮತ್ತೊಬ್ಬ ಸೆಲೆಬ್ರೆಟಿ ನೋಡಲು ಬಹುತೇಕರು ಇಷ್ಟು ಪಡುವುದಿಲ್ಲ.ಹೇಗೆ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಅಮಿತಾಬ್ ಬಚ್ಚನ್ ಸ್ಥಾನದಲ್ಲಿ ಮತ್ತೊಬ್ಬ ಸೆಲೆಬ್ರೆಟಿಯನ್ನು ನೋಡಲು ಹೇಗೆ ಜನ ಇಷ್ಟಪಡುವುದಿಲ್ಲವೇ, ಬಿಗ್ ಬಾಸ್‌ನಲ್ಲಿ ಅದೇ ರೀತಿ.

35

ಪಿಂಕ್‌ವಿಲ್ಲಾ ವರದಿ ಪ್ರಕಾರ ಹಿಂದಿ ಬಿಗ್ ಬಾಸ್ 19ನೇ ಆವೃತ್ತಿ ತಯಾರಿ ಶುರುವಾಗಿದೆ. ಈ ಬಾರಿ ಥೀಮ್ ಸೇರಿದಂತೆ ಇತರ ರೂಪುರೇಶೆಗಳ ಕುರಿತು ಮಹತ್ವದ ಮೀಟಿಗ್ ನಡದಿದೆ. ಎಂಡೆಮಾಲ್ ಶೈನ್ ಇಂಡಿಯಾ ನಿರ್ಮಾಣ ಮಾಡುತ್ತಿದೆ. ಈ ಬಾರಿ ಯಾವ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಅನ್ನೋದು ಖಚಿತಗೊಂಡಿಲ್ಲ.  

45

ಸಿನಿಮಾ ಕಮಿಂಟ್‌ಮೆಂಟ್, ಆರೋಗ್ಯ, ಸುರಕ್ಷತೆ, ಭದ್ರತೆ ಸೇರಿದಂತೆ ಹಲವು ಕಾರಣಗಳಿಂದ ಸಲ್ಮಾನ್ ಖಾನ್ 19ನೇ ಆವೃತ್ತಿ ಬಿಗ್ ಬಾಸ್ ಹೋಸ್ಟ್ ಮಾಡುತ್ತಿಲ್ಲ ಅನ್ನೋ ಮಾತು ಬಲವಾಗಿ ಕೇಳಿಬಂದಿತ್ತು. ಹೊಸ ಸೆಲೆಬ್ರೆಟಿಗಳ ಹುಡುಕಾಟವೂ ನಡೆದಿತ್ತು ಅನ್ನೋ ವರದಿಗಳು ಹರಿದಾಡಿತ್ತು. ಆದರೆ 19ನೇ ಆವೃತ್ತಿ ಬಿಗ್ ಬಾಸ್ ಹೋಸ್ಟ್ ಮಾಡಲು ಸಲ್ಮಾನ್ ಖಾನ್ ಒಪ್ಪಿಕೊಂಡಿದ್ದಾರೆ ಅನ್ನೋ ಮಾಹಿತಿಗಳು ಹೊರಬರುತ್ತಿದೆ.

55

ವರದಿಗಳ ಪ್ರಕಾರ ಸಲ್ಮಾನ್ ಖಾನ್ ಜೂನ್ ಅಂತ್ಯದಲ್ಲಿ 19ನೇ ಆವೃತ್ತಿಯ ಬಿಗ್ ಬಾಸ್ ಶೋನ ಪ್ರೋಮೋ ಶೂಟ್ ಮಾಡಲಿದ್ದಾರೆ. ಇದು 19ನೇ ಆವೃತ್ತಿಯ ಮೊದಲ ಪ್ರೋಮೋ ಶೂಟ್. ಇನ್ನು ಮುಂದಿನ ಬಿಗ್ ಬಾಸ್ ಹಿಂದಿ ಆವೃತ್ತಿ ಜುಲೈ ಅಂತ್ಯದಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಬಿಗ್ ಬಾಸ್ ನಿರೂಪಕ ಜವಾಬ್ದಾರಿಯಿಂದ ಕಿಚ್ಚ ಸುದೀಪ್ ಹಿಂದೆ ಸರಿದಿದ್ದಾರೆ. ಕಳೆದ ಆವೃತ್ತಿ ನಿರೂಪಕನಾಗಿ ಲಾಸ್ಟ್ ಎಂದಿದ್ದಾರೆ.ಆದೆ ಹಿಂದಿ ಬಿಗ್ ಬಾಸ್ ರೀತಿ ಕಿಚ್ಚ ಸುದೀಪ್ ಮುಂದಿನ ಆವೃತ್ತಿಯಲ್ಲಿ ಹೋಸ್ಟ್ ಮಾಡುತ್ತಾರಾ? ಈ ಪ್ರಶ್ನೆಗಳು ಹರಿದಾಡುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories