ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಕಥೆ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ನೀಡುತ್ತಿದೆ. ಒಂದೆಡೆ ಶ್ರಾವಣಿಗೆ ಅಮ್ಮನ ದರ್ಶನ, ಮತ್ತೊಂದು ಕಡೆ ಸುಬ್ಬುಗೆ ಡಿವೋರ್ಸ್. ಇನ್ನೊಂದು ಕಡೆ ಬದಲಾಗಿರುವ ಶ್ರೀವಲ್ಲಿ ಸುಬ್ಬು ಪ್ರೀತಿಗೆ ನೆರವು ನೀಡುತ್ತಿದ್ದಾಳೆ.
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಶ್ರಾವಣಿ ಸುಬ್ರಹ್ಮಣ್ಯ. ಈ ಧಾರಾವಾಹಿಯಲ್ಲಿ ಹಲವಾರು ಟ್ವಿಸ್ಟ್ ಗಳು ಬರುತ್ತಿದೆ. ಕೊನೆಗೂ ಶ್ರಾವಣಿ ಸುಬ್ರಹ್ಮಣ್ಯ ಮದುವೆ ಆಯ್ತು ಎನ್ನುವಷ್ಟರಲ್ಲಿ ಸುಬ್ಬು ಮಾಡಿದ ಒಂದು ಸಣ್ಣ ತಪ್ಪಿನಿಂದ ಡಿವೋರ್ಸ್ ವರೆಗೂ ಬಂದು ನಿಂತಿದೆ.
27
ಸುಬ್ಬು ಮಾಡಿದ ತಪ್ಪೇನು?
ಮಿನಿಸ್ಟರ್ ಮಾವ ಮೀಡಿಯಾ ಮುಂದೆ ಮಾತನಾಡುವ ಸಮಯದಲ್ಲಿ ಮಾವನ ಪರ ವಹಿಸಿ ಮಾತನಾಡುವ ಭರದಲ್ಲಿ ನಾನು ಶ್ರಾವಣಿ ಮೇಡಂನ್ನು ಮದುವೆಯಾಗಿದ್ದು, ಕೇವಲ ಸರ್ ಹೇಳಿದ್ದಕ್ಕೆ ಎಂದು ಹೇಳುತ್ತಾನೆ ಈ ಮಾತು ಶ್ರಾವಣಿಗೆ ನೋವನ್ನುಂಟು ಮಾಡುತ್ತೆ.
37
ಡೀವೋರ್ಸ್ ಗೆ ರೆಡಿಯಾದ ಶ್ರಾವಣಿ
ಸುಬ್ಬು ಮಾತನ್ನು ಕೇಳಿ, ಆತ ತನ್ನನ್ನು ಪ್ರೀತಿ ಮಾಡೋದೆ ಇಲ್ಲ ಎಂದು ಅಂದುಕೊಳ್ಳುವ ಶ್ರಾವಣಿ, ನಾನು ಮದುವೆಯಾಗಿ ತಪ್ಪು ಮಾಡಿದೆ ಎಂದು ಯೋಚಿಸಿ, ಆತನಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾಳೆ.
ಇನ್ನೊಂದು ಕಡೆ ಶ್ರೀವಲ್ಲಿ ಸಂಪೂರ್ಣ ಬದಲಾಗಿದ್ದಾಳೆ. ಸುಬ್ಬುನನ್ನು ಅಷ್ಟೊಂದು ಪ್ರೀತಿ ಮಾಡಿ, ಆತನನ್ನು ಪಡೆಯಲು ಏನು ಬೇಕಾದರು ಮಾಡಲು ರೆಡಿಯಾಗಿದ್ದ ಶ್ರೀವಲ್ಲಿ, ಕೊನೆಗೆ ಸುಬ್ಬುನನ್ನು ರೌಡಿಗಳಿಂದ ರಕ್ಷಿಸಿ, ಶ್ರಾವಣಿ ಜೊತೆ ಮದುವೆಯಾಗುವಂತೆ ಮಾಡಿದ್ದಾಳೆ.
57
ಸುಬ್ಬುಗೆ ಲವ್ ಗುರು ಆದ ಶ್ರೀವಲ್ಲಿ
ಈಗ ಶ್ರೀವಲ್ಲಿ ಎಷ್ಟು ಬದಲಾಗಿದ್ದಾಳೆ ಅಂದ್ರೆ, ಸುಬ್ಬುಗೆ ಪ್ರೀತಿ ಪಾಠ ಹೇಳಿಕೊಡುವ ಲವ್ ಗುರು ಆಗಿದ್ದಾಳೆ. ಸುಬ್ಬು-ಶ್ರಾವಣಿ ಮಧ್ಯದಲ್ಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಶ್ರೀವಲ್ಲಿ ಹೇಳಿದ್ದಾಳೆ.
67
ಪ್ರೀತಿ ಹೇಳಿಕೊಳ್ಳಲು ನೆರವು
ನಾನೇ ನಾಚಿಕೆ ಬಿಟ್ಟು ನಿನ್ನ ಬಳಿ ಎಷ್ಟು ಸಲ ಐಲವ್ ಯೂ ಹೇಳಿಲ್ಲ, ನಿಂಗೇನು ಶ್ರಾವಣಿ ಜೊತೆ ನಿನ್ನ ಮನಸ್ಸಲ್ಲಿರೋ ಪ್ರೀತಿನಾ ಹೇಳೋಕೆ. ಆದಷ್ಟು ಬೇಗ ಪ್ರೀತಿ ಹೇಳು, ನಿನ್ನ ಲವ್ ಗುರು ನಾನಾಗ್ತೀನಿ ಎಂದಿದ್ದಾಳೆ ಶ್ರೀವಲ್ಲಿ.
77
ತ್ಯಾಗಕ್ಕೆ ಹೆಸರು ಶ್ರೀವಲ್ಲಿ
ಜನ ಶ್ರೀವಲ್ಲಿ ಪಾತ್ರವನ್ನು ಮೆಚ್ಚಿಕೊಂಡಿದ್ದು, ತ್ಯಾಗಕ್ಕೆ ಇನ್ನೊಂದು ಹೆಸರು ಹೆಣ್ಣು ಅನ್ನೋದನ್ನು ಶ್ರೀವಲ್ಲಿ ತೋರಿಸಿಕೊಟ್ಟರು, ಶ್ರೀವಲ್ಲಿ ಬದಲಾದದ್ದು ತುಂಬಾನೆ ಖುಷಿಯಾಯ್ತು, ಶ್ರೀವಲ್ಲಿ ನೀವು ಗ್ರೇಟ್ ಆಗ್ಬಿಟ್ರಿ, ಲವ್ ಗುರು ಶ್ರೀವಲ್ಲಿ ನಮಗೆ ಇಷ್ಟ ಆಗಿದ್ದಾರೆ ಎಂದು ಜನ ಕಾಮೆಂಟ್ ಮಾಡಿದ್ದಾರೆ.