Shravani Subramanya Serial ಮುಗಿಯುತ್ತಲೇ ಆ ಹುಡುಗಿಯ ನೆನಪು ಶೇರ್​ ಮಾಡಿದ ಸುಬ್ಬು

Published : Aug 08, 2026, 05:16 PM IST

ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಶ್ರಾವಣಿ ಸುಬ್ರಹ್ಮಣ್ಯ' ಎರಡು ವರ್ಷಗಳ ನಂತರ ಮುಕ್ತಾಯದ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ, ನಾಯಕ ನಟ ಅಮೋಘ್ (ಸುಬ್ಬು) ಅವರು ಸೀರಿಯಲ್ ಪಯಣ, ಅಭಿಮಾನಿಗಳಿಂದ ಸಿಕ್ಕ ಪ್ರೀತಿ ಮತ್ತು ಸಹನಟಿಯೊಂದಿಗಿನ ಮೊದಲ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ.

PREV
16
ಮುಕ್ತಾಯ ಹಂತದಲ್ಲಿ ಶ್ರಾವಣಿ ಸುಬ್ರಹ್ಮಣ್ಯ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್​ ಮುಕ್ತಾಯ ಆಗುತ್ತಿದೆ. ಈ ಸೀರಿಯಲ್​ 2024ರ ಮಾರ್ಚ್‌ 18ರಿಂದ ಆರಂಭವಾಗಿತ್ತು. ಇದಾಗಲೇ ಎರಡು ವರ್ಷ ಪೂರೈಸಿದೆ ಸೀರಿಯಲ್​. ಇದಾಗಲೇ ಅಂತಿಮ ಎಪಿಸೋಡ್​ಗಳು ಪ್ರಸಾರ ಆಗುತ್ತಿದೆ.

26
ಬರುತ್ತಾ ಕುಸಿದ ಟಿಆರ್​ಪಿ

ಆರಂಭದಲ್ಲಿ ಸಿಕ್ಕಾಪಟ್ಟೆ ಟಿಆರ್​ಪಿ ಕಂಡಿದ್ದ ಸೀರಿಯಲ್​ ಬರಬರುತ್ತಾ ವೀಕ್ಷಕರ ಸಂಖ್ಯೆಯಲ್ಲಿ ಕುಸಿತ ಕಂಡುಬಂತು. ಇದಕ್ಕೆ ಒಂದು ಕಾರಣ, ವೇಳೆಯ ಬದಲಾವಣೆ ಎಂದು ಹೇಳಲಾಗುತ್ತಿದೆಯಾದರೂ, ಕಾರಣಗಳು ಬೇರೆ ಬೇರೆ ಇರಬಹುದು. ಅದೇನೆ ಇದ್ದರೂ ಸೀರಿಯಲ್​ ಅನ್ನು ಈಗ ಮುಕ್ತಾಯ ಮಾಡಲಾಗುತ್ತಿದೆ.

36
ವೀಕ್ಷಕರ ಪ್ರೀತಿ

ಇದೀಗ ಸುಬ್ಬು ಪಾತ್ರಧಾರಿ ಅಮೋಘ್​ ಅವರು ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡು ಆ ಹುಡುಗಿ ನೆನಪು ಮಾಡಿಕೊಂಡಿದ್ದಾರೆ. ಕಲಾವಿದರೊಬ್ಬರಿಗೆ ವೀಕ್ಷಕರು ನೀಡುವ ಪ್ರೀತಿಯೇ ದೊಡ್ಡ ಉಡುಗೊರೆ. ಅಂಥದ್ದರಲ್ಲಿ ಮೈಸೂರಿನಿಂದ ನಟ ಅಮೋಘ್​ ಅವರನ್ನು ಭೇಟಿ ಮಾಡಲು ಬಂದ ಹುಡುಗಿಯೊಬ್ಬಳು, ಅವರಿಗೆ ವಾಚ್ ಗಿಫ್ಟ್​ ಕೊಟ್ಟಿರುವುದನ್ನು ನಟ ನೆನಪಿಸಿಕೊಂಡಿದ್ದಾರೆ.

46
ತುಂಬಾ ಖುಷಿ ಕೊಟ್ಟಿತು

ಇದು ನನಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿತು. ಅವರು ನಮ್ಮ ಸೆಟ್​ ಹುಡುಕಲು ತುಂಬಾ ಶ್ರಮ ಪಟ್ಟಿದ್ದಾರೆ. ಕೊನೆಗೂ ಸೆಟ್​ಗೆ ಬಂದು ವಾಚ್​ ಗಿಫ್ಟ್​ ಮಾಡಿದರು. ಒಬ್ಬ ನಟನಿಗೆ ಇಷ್ಟೊಂದುಪ್ರೀತಿ ಸಿಕ್ಕರೆ ತುಂಬಾ ಖುಷಿಯಾಗುತ್ತದೆ. ನಮ್ಮ ಜನ್ಮ ಸಾರ್ಥಕವಾಗುತ್ತದೆ. ನಟರಿಗೆ ಬೇಕಿರುವುದು ವೀಕ್ಷಕರ ಅಪಾರ ಪ್ರೀತಿ ಎಂದಿದ್ದಾರೆ ಅಮೋಘ್​.

56
ನಟ ಅಮೋಘ್​ ಕುರಿತು

ಇನ್ನು, ನಟ ಅಮೋಘ್​ ಕುರಿತು ಹೇಳುವುದಾದರೆ, ಅಮೋಘ್ ಈ ಮೊದಲು 'ಸತ್ಯ', 'ಅಂತರಪಟ', 'ಲಕ್ಷ್ಮೀ ಟಿಫನ್ ರೂಮ್' ಎಂಬ ಧಾರಾವಾಹಿಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿದ್ದರು. ಮೂರರಲ್ಲೂ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ದರು. 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಗೆ ಲೀಡ್ ರೋಲ್ ಆಗಿ ಕರೆದಾಗ, ಆ 3 ಧಾರಾವಾಹಿಗಳ ಪ್ರೊಡಕ್ಷನ್ ಬಳಿ ಮನವಿ ಮಾಡಿದ್ದರಂತೆ. ನಂಗೆ ಲೀಡ್ ರೋಲ್ ಸಿಕ್ಕಿದೆ. ನನಗೆ ರಿಲೀವ್ ಮಾಡಿ ಎಂದು.

66
ಮೊದಲ ಬಾರಿ ಭೇಟಿ

ಶ್ರಾವಣಿ- ಸುಬ್ಬು ಮೊದಲ ಭೇಟಿ ಶ್ರಾವಣಿಯನ್ನ ಭೇಟಿ ಮಾಡಿದ್ದು ಮಾತ್ರ ಸೆಟ್‌ನಲ್ಲಿಯೇ ಎಂದಿರುವ ಅಮೋಘ್, ಈ ಮೊದಲು ಕಲರ್ಸ್ ಕನ್ನಡದಲ್ಲಿ ನೋಡಿದ್ದೆ. ಅವರು ಆಗ ಸೀರಿಯಲ್ ಒಂದರಲ್ಲಿ ಲೀಡ್ ರೋಲ್ ಮಾಡಿದ್ದರು. ನಾನು ಆಗಿನ್ನು ಹೊಸಬ. ಆಟಿಟ್ಯೂಡ್ ತೋರಿಸ್ತಾರೇನೋ ಎಂದುಕೊಂಡಿದ್ದೆ. ಆದರೆ ಸೆಟ್‌ಗೆ ಹೋದಾಗಲೇ ಗೊತ್ತಾಗಿದ್ದು, ಎಲ್ಲರ ಜೊತೆಗೂ ತುಂಬಾ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಅಂತ' ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories