ಸ್ಯಾಂಡಲ್’ವುಡ್ ನಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಆಗಿ ಮಿಂಚಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ. ಇದೀಗ ಕನ್ನಡ ಕಿರುತೆರೆಯ ಮುದ್ದಾದ ಶ್ರಾವಣಿ ಸುಬ್ರಹ್ಮಣ್ಯ (shravani Subramanya) ವೀಕ್ಷಕರ ಫೇವರಿಟ್ ಜೋಡಿಯಾಗಿ ಮೋಡಿ ಮಾಡ್ತಿದ್ದಾರೆ. ಈ ಜೋಡಿ ತೆರೆ ಮೇಲೆ ಬಂತೆಂದರೆ ವೀಕ್ಷಕರು ಖುಷಿ ಪಡ್ತಾರೆ.
ಪ್ರಾಮಾಣಿಕ ಹುಡುಗ, ಯಜಮಾನ್ರು ಹೇಳಿದ್ದನ್ನೆಲ್ಲಾ ಚಾಚು ತಪ್ಪದೆ ಮಾಡುವ ಸುಬ್ರಹ್ಮಣ್ಯ ಒಂದು ಕಡೆಯಾದ್ರೆ, ಮತ್ತೊಂದು ಕಡೆ, ಅಪ್ಪನ ಪ್ರೀತಿಯನ್ನು ಕಾಣದೇ, ತನಗೆ ಎಲ್ಲಾ ರೀತಿಯಲ್ಲೂ ಬೆಂಬಲವನ್ನೂ ನೀಡುವ ಸುಬ್ಬುನಲ್ಲಿ ಅಪ್ಪನ ಪ್ರೀತಿಯನ್ನು ಕಾಣುವ ಮುದ್ದು ಮನಸಿನ, ಬಾಯಿ ತುಂಬಾ ಮಾತನಾಡುವ ಹುಡುಗಿ ಶ್ರಾವಣಿ.
ಇತ್ತೀಚೆಗಂತೂ ಶ್ರಾವಣಿಗೆ ಸುಬ್ಬು ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಅದು ಪಾಸೆಸಿವ್ ನೆಸ್ ಗೂ ತಿರುಗಿದೆ. ಸುಬ್ಬು ಹತ್ರ ಬೇರೆ ಯಾವ ಹುಡುಗಿ ಕೂಡ ಮಾತನಾಡಬಾರದು, ಅದರಲ್ಲೂ ಶ್ರೀವಲ್ಲಿ ಸುಬ್ಬುನಿಂದ ದೂರವೇ ಉಳಿಯಬೇಕೆಂದು ಬಯಸುವ ಶ್ರಾವಣಿ. ಆದರೆ ಸುಬ್ಬುಗೆ ಶ್ರಾವಣೆ ಅಂದ್ರೆ ತಮ್ಮ ಯಜಮಾನರ ಮಗಳು ಎನ್ನುವ ಗೌರವ.
ಧಾರಾವಾಹಿಯಲ್ಲಿ ಯಾವಾಗಲೂ ಕಿತ್ತಾಡಿಕೊಂಡು, ಯಾವಾಗ್ಲೂ ಲವಲವಿಕೆಯಿಂದ ಇರುವ ಈ ಸಿಂಪಲ್ ಜೋಡಿ. ಇದೀಗ ಝೀ ಕುಟುಂಬ ಅವಾರ್ಡ್ಸ್ (Zee Kutumba Awards) ಕಾರ್ಯಕ್ರಮದಕ್ಕೆ ತುಂಬಾನೆ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದು, ಇಬ್ಬರ ಜೋಡಿ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ..
ಸುಬ್ರಹ್ಮಣ್ಯ ಪಾತ್ರದಲ್ಲಿ ನಟಿಸುತ್ತಿರುವ ಅಮೋಘ ಆದಿತ್ಯ (Amogha Adithya) ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ಶ್ರಾವಣಿ ಖ್ಯಾತಿಯ ನಟಿ ಆಸಿಯಾ ಫಿರ್ದೋಸೆ ಜೊತೆ ಕೈ ಕೈ ಹಿಡಿದು ತಮ್ಮ ಮುದ್ದಾದ ನಗು ಬೀರುತ್ತಾ, ತುಂಬಾನೆ ಮುದ್ದಾಗಿ ನಡೆದುಕೊಂಡು ಬರುತ್ತಿದ್ದರೆ, ಅಭಿಮಾನಿಗಳು ಈ ಜೋಡಿಗೆ ದೃಷ್ಟಿ ತೆಗೆಯುತ್ತಿದೆ.
ಅಮೋಘ ಆದಿತ್ಯ ಝೀ ಅವಾರ್ಡ್ಸ್ ಕಾರ್ಯಕ್ರಮಕ್ಕಾಗಿ ಆಫ್ ವೈಟ್ ಪ್ಯಾಂಟ್, ಶರ್ಟ್, ಬ್ಲೇಜರ್ ಧರಿಸಿದ್ರೆ, ಆಸಿಯಾ (Asiya Firsode) ತಿಳಿ ಹಸಿರು ಬಣ್ಣದ ಡಿಸೈನರ್ ಗೌನ್ ಧರಿಸಿದ್ದು, ಕೂದಲನ್ನು ಉದ್ದಕ್ಕೆ ಹೆಣೆದು ಕಟ್ಟಿದ್ದು ತುಂಬಾನೆ ವಿಭಿನ್ನವಾಗಿ ಆದರೆ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.