ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾದ ಮಧು ಗೌಡ ಹಾಗೂ ನಿಖಿಲ್ ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ. ಈ ಬಗ್ಗೆ ಮಧು ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪ್ರತಿಫೋಟೋವನ್ನೂ ಟ್ರೋಲ್ ಮಾಡಲಾಗುತ್ತಿದೆ.
ಕೆಲ ತಿಂಗಳ ಹಿಂದೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಈ ತಿಂಗಳ ಅಂತ್ಯದಲ್ಲಿ ಹಸೆಮಣೆ ಏರಲಿದೆ. ಈ ಬಗ್ಗೆ ಮಧು ಗೌಡ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್‌ಗಳನ್ನು ನೀಡುತ್ತಿದ್ದರು.
ಯೂಟ್ಯೂಬ್ ವಿಡಿಯೋಗಳು ಹಾಗೂ ಇನ್ಸ್‌ಟಾಗ್ರಾಮ್ ರೀಲ್‌ಗಳ ಮೂಲಕ ಮದುವೆಯ ಪ್ರತಿ ವಿಚಾರವನ್ನೂ ಈಕೆ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ವ್ಯಕ್ತಿಗಳು, ಅಂಬಾನಿ ಮಕ್ಕಳ ಮದುವೆಯನ್ನೂ ಕಂಡಿದ್ದೇವೆ. ಆದರೆ, ಅವರು ಯಾರೂ ಹಿಂಗೆಲ್ಲಾ ಆಡಿರ್ಲಿಲ್ಲ. ಒಂದು ಸಾರಿ ನಿಮ್ಮ ಮದುವೆ ಆದ್ರೆ ಸಾಕು ಎಂದು ಕಾಮೆಂಟ್ ಮಾಡಿದ್ದಾರೆ.
ಮಧು ಗೌಡ ಹಾಗೂ ನಿಖಿಲ್ ವಿವಾಹ ಅಕ್ಟೋಬರ್ 27ಕ್ಕೆ ನಡೆಯಲಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅವರ ಫಾಲೋವರ್ಸ್‌ಗಳು ಅಡ್ವಾನ್ಸ್ ಆಗಿ ಮದುವೆಯ ವಿಶ್ ಮಾಡುತ್ತಿದ್ದಾರೆ. ಮದುವೆಯ ದಿನಾಂಕ ತಿಳಿಸಿದಾಗಲೂ, ಎಲ್ಲಾ ವಿಲಾಗ್ ಮಾಡ್ತೀರಿ ಪರ್ವಾಗಿಲ್ಲ. ಫರ್ಸ್ಟ್ ನೈಟ್‌ದು ವಿಲಾಗ್ ಮಾಡೋಕೆ ಹೋಗ್ಬೆಡಿ ಎಂದು ಕಾಲೆಳೆದಿದ್ದಾರೆ.
'ಪ್ರಪಂಚದಲ್ಲಿ ಇವಳು ಒಬ್ಬಳೇ ಮದ್ವೆ ಆಕ್ತಿರೋಧು... ತುಂಬಾ ಒವರ್ ಆಯ್ತು' , 'ಇನ್ನು ಆಗಿರೋದು ಎಂಗೇಜ್ಮೆಂಟ್ ಆದ್ರೆ ಈ ಪಿಕ್ ಪ್ರಗ್ನೆಟ್ ಅಲ್ಲಿ ಫೋಟೋ ಶೊಟ್ ಮಾಡಿರೋ ಫೋಟೋ ತರ ಇದೆ..' ಎನ್ನುವ ಕಾಮೆಂಟ್‌ಗಳೂ ಇವರಿಗೆ ಬಂದಿವೆ.