ವೈಷ್ಣವಿಯ ಧಾರಾವಾಹಿ ಬಗ್ಗೆ ಹೇಳುವುದಾದರೆ ಸೀತಾ ರಾಮ ಧಾರಾವಾಹಿಯಲ್ಲಿ (Sita Rama serial) ಸಿಹಿಯ ಮುದ್ದಿನ ಸೀತಮ್ಮನಾಗಿ ನಟಿಸುತ್ತಿರುವ ವೈಷ್ಣವಿ ಗೌಡ, ಸದ್ಯಕ್ಕಂತೂ ತನ್ನ ಮಗಳು ಎಲ್ಲಿ ತನ್ನ ಕೈತಪ್ಪಿ ಹೋಗುತ್ತಾಳೋ ಎನ್ನುವ ಚಿಂತೆಯಲ್ಲಿದ್ದಾರೆ. ಮೇಘಶ್ಯಾಮ ದಂಪತಿಗಳು ಬಾಡಿಗೆ ತಾಯಿಯ ಮೂಲಕ ಮಗು ಪಡೆಯೋದಕ್ಕೆ ಪ್ರಯತ್ನಿಸಿದ್ದು, ಈಗ ಮಗುವಿನ ಹುಡುಕಾಟವೂ ಅಂತಿಮವಾಗಿದೆ. ಇದೀಗ ಸ್ವತಃ ಸಿಹಿ ತಮ್ಮ ಮಗಳೆಂದು ಗೊತ್ತಾಗಿದ್ದು, ಈಗ ಸಿಹಿಯನ್ನು ಕಾನೂನಾನತ್ಮಕವಾಗಿ ಪಡೆಯಲು ಮುಂದಾಗಿದ್ದಾರೆ. ಇದೀಗ ಶ್ಯಾಮ್‌ಗೆ ರಾಮ್ ಕೂಡ ಮಗು ಹುಡುಕಲು ಸಹಾಯ ಮಾಡಿದ್ದು, ಸಿಹಿಯೇ ತಮ್ಮ ಮಗಳು ಎಂದು ಶ್ಯಾಮನಿಗೆ ತಿಳಿದ ನಂತರ ರಾಮನೇ ತನಗೆ ಮೋಸ ಮಾಡಿದ್ದಾನೆಂದು ತಿಳಿದು ಸ್ನೇಹವನ್ನೂ ಕಡಿದುಕೊಳ್ಳಲು ಮುಂದಾಗಿದ್ದಾನೆ. ಆದರೆ, ಇದೀಗ ಸಿಹಿಗೆ ಕಾರು ಅಪಘಾತ ಆಗಿದ್ದು, ಯಾರ ಮಡಿಲಿಗೆ ಸೇರುತ್ತಾಳೆ ಎಂಬುದು ಕುತೂಹಲ ಮೂಡಿಸಿದೆ. ಆದರೆ, ಸಿಹಿ ಸೀತಾಳಿಗೆ ಸೇರಬೇಕು ಎನ್ನುವುದು ವೀಕ್ಷಕರ ಆಶಯವಾಗಿದೆ.