ಕನ್ನಡ ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಇವರ ಹುಟ್ಟುಹಬ್ಬಕ್ಕೆ ನಟ ಹಾಗೂ ಬಿಗ್ ಬಾಸ್ ಸ್ನೇಹಿತ ಶಿಶಿರ್ ಶಾಸ್ತ್ರಿ ಶುಭ ಕೋರಿದ್ದಾರೆ.
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡು, ಬಿಗ್ ಬಾಸ್ ಮನೆಮಗಳು ಎಂದೇ ಖ್ಯಾತಿ ಪಡೆದಿದ್ದ ನಟಿ ಐಶ್ವರ್ಯ ಸಿಂಧೋಗಿ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಒಬ್ಬರು ಶುಭಾಶಯ ಕೋರಿದ್ದಾರೆ.
27
ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯ ಜೊತೆ ಶಿಶಿರ್ ಶಾಸ್ತ್ರೀ ಉತ್ತಮ ಸ್ನೇಹವನ್ನು ಹೊಂದಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಸಹ ಇಬ್ಬರ ಸ್ನೇಹ ಮುಂದುವರೆದಿದೆ.ಇಬ್ಬರು ಜೋಡಿಗಾಗಿ ಹಲವೆಡೆ ಟ್ರಾವೆಲ್ ಕೂಡ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.
37
ಅಷ್ಟೇ ಅಲ್ಲ ಈ ಜೋಡಿ ಹಲವಾರು ಡ್ಯಾನ್ಸ್ ವಿಡಿಯೋಗಳಿಗೂ ಸಹ ಜೊತೆಯಾಗಿ ಹೆಜ್ಜೆ ಹಾಕಿದ್ದರು. ಇವರಿಬ್ಬರ ಡ್ಯಾನ್ಸ್ ರೀಲ್ಸ್ ವೈರಲ್ ಕೂಡ ಆಗಿದ್ದವು. ಇಬ್ಬರು ಜೊತೆಯಾಗಿ ಹಂಪಿ ಎಕ್ಸ್ ಪ್ಲೋರ್ ಕೂಡ ಮಾಡಿ ಬಂದಿದ್ದರು. ಇದೀಗ ಶಿಶಿರ್ ತಮ್ಮ ಗೆಳತಿಗೆ ಸ್ಪೆಷಲ್ ಬರ್ತ್ ಡೇ ವಿಶಸ್ ತಿಳಿಸಿದ್ದಾರೆ.
ಇದೀಗ ಶಿಶಿರ್ ತಮ್ಮ ಗೆಳತಿ ಐಶ್ವರ್ಯಾ (Aishwarya Sindhogi) ಬರ್ತ್ ಡೇಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ತಮ್ಮ ಇನ್’ಸ್ಟಾಗ್ರಾಂನಲ್ಲಿ ಇಬ್ಬರ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದು, ಅತ್ಯಂತ ಭಾವಪೂರ್ಣ, ಸುಂದರ ಮತ್ತು ಸಿಹಿ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು! ಜಗತ್ತಿನ ಎಲ್ಲಾ ಸಂತೋಷಕ್ಕೂ ನೀವು ಅರ್ಹರು. ತುಂಬ ಖುಶಿಯಾಗಿರು ಎಂದು ಹಾರೈಸಿದ್ದಾರೆ.
57
ಇಬ್ಬರ ಹಲವು ಅನ್ ಸೀನ್ ಫೋಟೊಗಳನ್ನು ಸಹ ಶೇರ್ ಮಾಡಿದ್ದು, ಇವರಿಬ್ಬರ ನಡುವೆ ಲವ್ವಿ, ಡವ್ವಿ ಏನಾದರೂ ನಡೆಯುತ್ತಿದೆಯೇ? ಎನ್ನುವ ಸಂಶಯ ಕೂಡ ಜನರಲ್ಲಿ ಶುರುವಾಗಿದೆ. ಅಭಿಮಾನಿಗಳಂತೂ ಮೇಡ್ ಫಾರ್ ಈಚ್ ಅದರ್, ಬ್ಯೂಟಿಫುಲ್ ಜೋಡಿಗಳು ಎಂದು ಕಾಮೆಂಟ್ ಮಾಡಿವೆ.
67
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಇದೀಗ ಐಶ್ವರ್ಯ ಬ್ಯುಸಿಯಾಗಿದ್ದಾರೆ. ಕೊಂಚ ಸಮಯ ನಟನೆಯಿಂದ ದೂರ ಉಳಿದಿದ್ದ ಐಶ್ವರ್ಯ ಇದೀಗ ಸ್ಟಾರ್ ಸುವರ್ಣ ವಾಹಿನಿಯ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ಸಿನಿಮಾ ಆಫರ್ ಗಳು ಕೂಡ ಬಂದಿವೆ ಎನ್ನಲಾಗುತ್ತಿದೆ.
77
ಇನ್ನು ಶಿಶಿರ್ ಶಾಸ್ತ್ರಿ (Shishir Shastry) ಬಿಗ್ ಬಾಸ್ ಬಳಿಕ ಮುಂದೇನು ಮಾಡ್ತಾರೆ? ಬಿಗ್ ಬಾಸ್ ಗಾಗಿ ಸೇವಂತಿ ಸೀರಿಯಲ್ ಬಿಟ್ಟು ಹೋದ ಶಿಶಿರ್ ಮುಂದೆ ಯಾವ ಧಾರಾವಾಹಿಯಲ್ಲಿ ನಟಿಸುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತಿತ್ತು, ಅದಕ್ಕೂ ಈಗ ಉತ್ತರ ದೊರಕಿದ್ದು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಗಂಧದಗುಡಿ ಸೀರಿಯಲ್ ಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ ಶಿಶಿರ್.