ಬಿಗ್ ಬಾಸ್ ಸೀಸನ್ 11ರಲ್ಲಿ ಹೆಚ್ಚು ಹೈಲೈಟ್ ಆದವರು ಧನರಾಜ್ ಆಚಾರ್ ಮತ್ತು ಭವ್ಯಾ ಗೌಡ. ಅಣ್ಣ ಜಿಂಕೆ ತಂಗಿ ಜಿಂಕೆ ಅನ್ಕೊಂಡು ಓಡಾಡುತ್ತಿದ್ದರು.
ಈ ಅಣ್ಣ ತಂಗಿ ಸಂಬಂಧ ನಿಜಕ್ಕೂ ವೀಕ್ಷಕರಿಗೂ ಸಖತ್ ಇಷ್ಟವಾಗಿದೆ. ಹೀಗಾಗಿ ಅವರಿಬ್ಬರು ಮಾತ್ರವಲ್ಲ ಯಾರೂ ಅವರನ್ನು ನೋಡಿದರೂ ಜಿಂಕೆ ಎಂದೇ ಕರೆಯುತ್ತಿದ್ದಾರೆ.
ಇತ್ತೀಚಿಗೆ ರಜತ್ ಕಿಶನ್ ಪತ್ನಿ ಅಕ್ಷಿತಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಆಗ ಧನರಾಜ್ ಮತ್ತು ಭವ್ಯಾ ಗೌಡ ಭೇಟಿ ಮಾಡಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ.
'ತಂಗಿ ಜಿಂಕೆ, ಅಣ್ಣ ಜಿಂಕೆ...ಎಂದೂ ಹೀಗೆ ಇರುವಂತೆ' ಎಂದು ಧನರಾಜ್ ಬರೆದುಕೊಂಡಿದ್ದಾರೆ. ಈ ಫೋಟೋ ಅತಿ ಹೆಚ್ಚು ಪಾಸಿಟಿವ್ ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.
ನೀನು ತಂಗಿ ಜೊತೆ ಪೋಸ್ ಕೊಡುವುದು ಬಿಟ್ಟು ಮೊದಲು ಆಕೆಗೆ ಒಂದ ಗಂಡು ಹುಡುಕೋ ಮಾರಾಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕಪ್ಪು ಬಣ್ಣದ ಮ್ಯಾಕ್ಸಿ ಆಂಡ್ ಕಪ್ಪು ಬ್ಯಾಗ್ ಹಿಡಿದು ಭವ್ಯಾ ಬಂದ್ರೆ, ರಾಮಾ ಗ್ರೀನ್ ಬಣ್ಣದ ಟೀ-ಶರ್ಟ್‌ಗೆ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ ಧನರಾಜ್.
Vaishnavi Chandrashekar