BBK 12: ಬಿಗ್ ಬಾಸ್‌ನಲ್ಲಿ ರಿಷಾ ಗೌಡ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಚಂದ್ರಪ್ರಭ ಫುಲ್ ಆಕ್ಟಿವ್ ಆದರು. ರಿಷಾ ಗೌಡ ಅವರ ಜೊತೆ ಚಂದ್ರಪ್ರಭ ಕ್ಲೋಸ್ ಆದರು, ರಿಷಾ ಗೌಡ ತೊಡೆ ಮೇಲೆ ಮಲಗಿದ್ದರು, ಇಲ್ಲಿ ಗಿಲ್ಲಿ ನಟ ಕೂಡ ಇದ್ದರು. ಚಂದ್ರಪ್ರಭ ಪತ್ನಿಯಿಂದ ವಾರ್ನಿಂಗ್ ಸಿಕ್ಕಿದೆ.
ರಿಷಾ ಜೊತೆ ಡ್ಯಾನ್ಸ್ ಮಾಡಿದ್ದು, ಸ್ವಿಮ್ಮಿಂಗ್‌ಫೂಲ್‌ವೊಳಗಡೆ ಇಳಿದಿದ್ದು, ಎತ್ತಿಕೊಂಡಿದ್ದು ಎಲ್ಲವನ್ನು ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಮತ್ತೊಮ್ಮೆ ವಿಡಿಯೋ ಹಾಕಿ ಪ್ಲೇ ಮಾಡಲಾಯ್ತು. ಅದೇ ಟೈಮ್‌ನಲ್ಲಿ ಚಂದ್ರಪ್ರಭ ಹೆಂಡ್ತಿ ಕೂಡ ಮಾತನಾಡಿರುವ ವಿಡಿಯೋ ಪ್ಲೇ ಆಗಿದೆ.
25
ನಾನು ನಿನ್ನ ಹೆಂಡ್ತಿ, ನೆನಪಿರಲಿ
“ಬಿಗ್ ಬಾಸ್ ಮನೆಯಲ್ಲಿ ನಿನ್ನ ಆಟ, ಅವತಾರ ನೋಡಿ ದಿಲ್ ಖುಷ್ ಆಗಿದೆ ಅಂತ ಅನ್ಕೋಬೇಡ. ನನ್ನ ಸ್ನೇಹಿತರು, ಫ್ಯಾಮಿಲಿ ಕಡೆಯಿಂದ ಫೋನ್ ಬರ್ತಿದೆ. ಮೊದಲ ವಾರದಲ್ಲಿ ಸತೀಶ್ ಸರ್ ಜೊತೆ ಸಾಕು ಪ್ರಾಣಿ ಥರ ಇದ್ಯಾ? ಈಗ ಇನ್ನೊಂದು ಪ್ರಾಣಿಯನ್ನು ಸಾಕೋ ಥರ ಆಗಿದ್ಯಾ. ನಿನಗೆ ನಾನು ನಿನ್ನ ಹೆಂಡ್ತಿ ಎನ್ನೋದು ನೆನಪಿರಲಿ” ಎಂದು ಚಂದ್ರಪ್ರಭ ಪತ್ನಿ ಭಾರತಿ ಹೇಳಿದ್ದಾರೆ.
35
ನಾನ್ಯಾಕೆ ಬಿಗ ಬಾಸ್ ಮನೆಗೆ ಬರೋದು ಬೇಡ?
“ನಿಮ್ಮ ವೈಫ್ ವೈಲ್ಡ್‌ಕಾರ್ಡ್ ಎಂಟ್ರಿ ಬರಲಿ ಎಂದು ಕಿಚ್ಚ ಸುದೀಪ್ ಹೇಳಿದ್ದರು. ನಾನು ಬಿಗ್ ಬಾಸ್ ಮನೆಗೆ ಬಂದ್ರೆ ಏನಾಗತ್ತೆ? ನನ್ನ ಹೆಂಡ್ತಿಯೂ ವೈಲ್ಡ್‌ಕಾರ್ಡ್ ಎಂಟ್ರಿ ಕೊಡಲಿ, ಬಿಗ್ ಬಾಸ್ ಮನೆಗೆ ಬರಲಿ, ಬಿಗ್ ಬಾಸ್ ಮನೆ ನೋಡಲಿ, ಇಷ್ಟಪಡಲಿ ಅಂತ ಅಂದುಕೋ. ಯಾಕೆ ಬೇಡ ಎಂದು ಹೇಳಿದೆ?” ಎಂದು ಭಾರತಿ ಹೇಳಿದ್ದಾರೆ.
“ಯಾವುದೋ ಕಾಯಿನ್ ಗೇಮ್ ನೋಡಿದೆ. ಕಾಕ್ರೋಚ್ ಸುಧಿ ಅವರು ಸ್ವೀಟ್ ಕೊಟ್ಟಾಕ್ಷಣ, ಮುದ್ದು ಮಾಡೋದೇನು, ತಿನ್ನಿಸಿದೇನೋ, ಲವ್ ಸಿಂಬೋಲ್ ತಿನಿಸೋದೇನು? ಕಣ್ಣೀರು ಒರೆಸೋದೇನು. ನೀನು ನನಗೆ ಒಂದು ದಿನ ಆದರೂ ಹೀಗೆ ಮಾಡಿದ್ಯಾ? ನನಗೂ ನಿನ್ನ ಕಣ್ಣಲ್ಲಿ ನೀರು ತರಿಸಬೇಕು ಅಂತ ಅನಿಸ್ತಿದೆ, ಬೇಗ ಮನೆಗೆ ಬಾ” ಎಂದು ಭಾರತಿ ಹೇಳಿದ್ದಾರೆ.
55
ಚಂದ್ರಪ್ರಭ ರಿಯಾಕ್ಷನ್ ಏನು?
“ನನ್ನ ಹೆಂಡ್ತಿ ಮಲೆ ಮಾದೇಶ್ವರ ಬೆಟ್ಟದಲ್ಲಿರೋದು, ಅವಳು ಹೇಗೆ ಇದನ್ನೆಲ್ಲ ನೋಡಿದಳು ಅಂತ ಗೊತ್ತಾಗಲಿಲ್ಲ” ಎಂದು ಚಂದ್ರಪ್ರಭ ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚಂದ್ರಪ್ರಭ ಹೇಗೆ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.