Bigg Boss Kannada Season 12: ತಮ್ಮ ಎದುರಾಳಿ ಸ್ಪರ್ಧಿ ಈ ಮನೆಯಲ್ಲಿ ಇರಲು ಯಾಕೆ ಯೋಗ್ಯರಲ್ಲ ಎಂದು ಕಾರಣ ನೀಡಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಆಗ ಜಾಹ್ನವಿ ಹಾಗೂ ಅಶ್ವಿನಿ ಗೌಡ ಅವರು ವಾದ-ಪ್ರತಿವಾದ ಮಾಡಿಕೊಂಡು ಜಗಳ ಆಡಿದ್ದಾರೆ, ಅಷ್ಟೇ ಅಲ್ಲದೆ ಸ್ನೇಹ ನಿಲ್ಲಿಸಲು ಮುಂದಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ನಾಲ್ಕು ವಾರಗಳಿಂದ ಅಶ್ವಿನಿ ಗೌಡ, ಜಾಹ್ನವಿ ಅವರು ಸ್ನೇಹಿತರಾಗಿದ್ದರು. ಈಗ ಟಾಸ್ಕ್‌ವೊಂದರಲ್ಲಿ ಜಗಳ ಆಡಿದ್ದಾರೆ. ಇದು ಟಾಸ್ಕ್‌ಗೆ ಅಷ್ಟೇ ಸೀಮಿತವೋ ಮತ್ತೆ ಜಗಳ ಮುಂದುವರೆಯತ್ತಾ ಎಂದು ಕಾದು ನೋಡಬೇಕಿದೆ.
25
ಫ್ರೆಂಡ್‌ಶಿಪ್ ಕಟ್
“ಜಾಹ್ನವಿ ಫ್ರೆಂಡ್‌ಶಿಪ್‌ನಿಂದ ನನಗೆ ಕಳಂಕ ಬಂದಿದೆ. ನನ್ನನ್ನು ಮುಂದೆ ಬಿಟ್ಟು, ನೀವು ಹಿಂದೆ ಇದ್ದು, ತಮಾಷೆ ನೋಡುತ್ತ, ನನ್ನನ್ನು ಬಿಗ್ ಬಾಸ್ ಮನೆಯಿಂದ ಹೊರಗಡೆ ಕಳಿಸಬೇಕು ಅಂತ ಕಾಯ್ತಿದ್ದೀರಾ. ಫ್ರೆಂಡ್‌ಶಿಪ್ ಅಂತ ಹೇಳಿಕೊಂಡು ಬಾವಿ ತೋಡುತ್ತಿದ್ದೀರಾ ಅಂತ ಗೊತ್ತಿರಲಿಲ್ಲ. ಫ್ರೆಂಡ್‌ಶಿಪ್ ಅಂತ ಹೇಳಿಕೊಂಡು, ನೀವು ನನಗೆ ಬಾವಿ ತೋಡ್ತೀರಾ ಅಂತ ಗೊತ್ತಿರಲಿಲ್ಲ. ಇಂಥ ಸ್ನೇಹಕ್ಕೆ ನಾವು ಬ್ರೇಕ್ ಹಾಕೋದು ಒಳ್ಳೆಯದು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
35
ನೀವು ನನ್ನ ಜೊತೆಗಿರೋದು ತಂತ್ರ ಆಗಿರಬಹುದು
“ನಿಮ್ಮ ಆಟವನ್ನು ನೀವು ಆಡ್ತಿದ್ದೀರಾ, ನನ್ನ ಆಟವನ್ನು ನಾನು ಆಡ್ತಿದ್ದೀನಿ. ಕೆಲವರ ಆಟ ಫಾಸ್ಟ್ ಆಗಿ ಕಾಣಬಹುದು, ಇನ್ನೂ ಕೆಲವರ ಅಟ ಸ್ಲೋ ಆಗಿ ಗುರಿ ತಲುಪಬಹುದು. ನೀವು ನನ್ನ ಜೊತೆಗೆ ಇರೋದು ತಂತ್ರ ಇರಬಹುದು” ಎಂದು ಜಾಹ್ನವಿ ಹೇಳಿದ್ದಾರೆ.
ಇಷ್ಟುದಿನಗಳಿಂದ ಜಗಳ ಆದಾಗ, ಅಥವಾ ಇನ್ಯಾವುದೋ ಚರ್ಚೆ ಆಗುವಾಗಲೂ ಇವರಿಬ್ಬರು ಜೊತೆಗಿದ್ದರು. ರಕ್ಷಿತಾ ಶೆಟ್ಟಿ ಜೊತೆ ಜಗಳ ಆದಾಗಲೂ ಕೂಡ ಇವರಿಬ್ಬರು ಜೋಡೆತ್ತುಗಳಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದವರು, ಶತ್ರುಗಳಾಗುತ್ತಾರೆ, ಶತ್ರುಗಳಾಗಿದ್ದವರು, ಸ್ನೇಹಿತರಾಗ್ತಾರೆ. ಈಗ ಈ ಸ್ನೇಹ ಏನಾಗಲಿದೆಯೋ ಏನೋ!
55
ಟಾಸ್ಕ್‌ಗೋಸ್ಕರ ಕಿತ್ತಾಡಿದ್ರಾ?
ಟಾಸ್ಕ್ ಎಂದು ಇವರಿಬ್ಬರು ಜಗಳ ಆಡಿರುವ ಸಾಧ್ಯತೆ ಜಾಸ್ತಿ ಇದೆ. ಇಷ್ಟೆಲ್ಲ ಮಾತನಾಡಿದ್ದಕ್ಕೆ ಕೊನೆಯಲ್ಲಿ ಅಶ್ವಿನಿ ಗೌಡ ಕಣ್ಣೀರು ಹಾಕಿರುವ ಸಾಧ್ಯತೆ ಜಾಸ್ತಿ ಇದೆ. ಆದರೆ ಇವರಿಬ್ಬರ ಮಧ್ಯೆ ಬಿರುಕು ಬಂದಿರೋದು ಡೌಟ್ ಎನ್ನಬಹುದು.