'Lakshmi Nivasa serial cast change: ಲಕ್ಷ್ಮೀ ನಿವಾಸ' ಧಾರಾವಾಹಿಯಿಂದ ಹಿರಿಯ ನಟಿ ಹೊರಬಂದಿದ್ದಾರೆ. ತಮ್ಮ 'ರೇಣುಕಾ' ಪಾತ್ರವು ಸಕಾರಾತ್ಮಕತೆಯಿಂದ ನಕಾರಾತ್ಮಕತೆಗೆ ತಿರುಗಿದ್ದಕ್ಕೆ ಅಸಮಾಧಾನಗೊಂಡು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಕಲಾವಿದರು ಒಬ್ಬೊಬ್ಬರಾಗಿಯೇ ಹೊರ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಸೀರಿಯಲ್ ಸಾಗುತ್ತಿರುವ ಕಥೆ ಹಿರಿಯ ನಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೇಸರದ ಬೆನ್ನಲ್ಲೇ ನಟಿ ಲಕ್ಷ್ಮೀ ನಿವಾಸದಿಂದ ಆಚೆ ಬಂದಿದ್ದಾರೆ.
27
ಹಿರಿಯ ನಟಿ ಅಂಜಲಿ ಸುಧಾಕರ್
ಇತ್ತೀಚೆಗೆ ಸಂದರ್ಶನದಲ್ಲಿ ಹಿರಿಯ ನಟಿ ಅಂಜಲಿ ತಮ್ಮ ಪಾತ್ರದ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಸುಮಾರು 21 ವರ್ಷದ ಬಳಿಕ ಅಂಜಲಿ ಸುಧಾಕರ್, ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕಲರ್ಸ್ ಕನ್ನಡ ರಾಮಾಚಾರಿ, ಜೀ ಕನ್ನಡದ ಲಕ್ಷ್ಮೀ ನಿವಾಸ ಮತ್ತು ಸ್ಟಾರ್ ಪ್ಲಸ್‌ನ ವಸುದೇವ ಕುಟುಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
37
ಎರಡು ದಶಕಗಳ ಬಳಿಕ ಕಂಬ್ಯಾಕ್
ಮದುವೆ ಬಳಿಕ ಅಂಜಲಿ ಸುಧಾಕರ್ ದುಬೈನಲ್ಲಿ ಸೆಟೆಲ್ ಅಗಿದ್ದರು. ಎರಡು ದಶಕಗಳ ಬಳಿಕ ಹಿಂದಿರುಗಿದ ಅಂಜಲಿ ಸುಧಾಕರ್ ಅವರನ್ನು ಕಿರುತೆರೆ ಅದ್ಧೂರಿಯಿಂದ ಸ್ವಾಗತಿಸಿದ್ದರು. ಒಳ್ಳೆಯ ಅತ್ತೆ, ಅಮ್ಮನ ಪಾತ್ರದ ಮೂಲಕ ಅಂಜಲಿಯರವನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದರು.
ರಾಮಾಚಾರಿ ಸೀರಿಯಲ್ ಅಂತಿಮ ಹಂತಕ್ಕೆ ತಲುಪಿದ್ರೆ, ಲಕ್ಷ್ಮೀ ನಿವಾಸದಿಂದ ಅಂಜಲಿ ಸುಧಾಕರ್ ಹೊರ ಬಂದಿದ್ದಾರೆ. ಸ್ಟಾರ್ ಪ್ಲಸ್‌ನ ವಸುದೇವ ಕುಟುಂಬ ಆರಂಭವಾಗಿ ಕೆಲವೇ ದಿನಗಳು ಆಗಿವೆ. ಚಂದನವನದ ಹಿರಿಯ ನಟ ಅವಿನಾಶ್ ಈ ಸೀರಿಯಲ್‌ನ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಅವಿನಾಶ್ ಅವರಿಗೆ ಅಂಜಲಿ ಸುಧಾಕರ್ ಜೋಡಿಯಾಗಿದ್ದಾರೆ.
57
ಲಕ್ಷ್ಮೀ ನಿವಾಸದಲ್ಲಿ ಬದಲಾಗುತ್ತಿರೋ ಪಾತ್ರಗಳು
ಈ ಹಿಂದೆ ಒಂದು ಗಂಟೆ ಪ್ರಸಾರವಾಗುತ್ತಿದ್ದ ಲಕ್ಷ್ಮೀ ನಿವಾಸ ಇದೀಗ ಅರ್ಧ ಗಂಟೆ ಪ್ರಸಾರವಾಗುತ್ತಿದೆ. ಕಲಾವಿದರು ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿದ್ದಾರೆ. ಪದೇ ಪದೇ ಕಲಾವಿದರು ಬದಲಾಗುತ್ತಿರೋದರಿಂದ ವೀಕಕ್ಷಕರು ಸಹ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಶ್ವನ ಪಾತ್ರ ಬದಲಾಗಿತ್ತು.
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಅಂಜಲಿ ಸುಧಾಕರ್ ಅವರು ರೇಣುಕಾ ಪಾತ್ರದಲ್ಲಿ ನಟಿಸುತ್ತಿದ್ದರು. ಆರಂಭದಲ್ಲಿ ರೇಣುಕಾ ಪಾತ್ರ ಪಾಸಿಟಿವ್ ಆಗಿ ಕಾಣಿಸುತ್ತಿತ್ತು. ಆದರೆ ಈ ಪಾತ್ರ ನೆಗೆಟಿವ್ ಆಗಿ ಟರ್ನ್ ಆಗುತ್ತಿದೆ. ಕಾರಣವಿಲ್ಲದೇ ಪಾತ್ರ ಬದಲಾಗುತ್ತಿರೋದಕ್ಕೆ ಅಂಜಲಿ ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.