Amruthadhaare Serial: ಈತ ಕೊಟ್ಟ ಮಲ್ಲಿಗೆ, ಆಕೆ ಕೊಟ್ಟಳು ಜಾಮೂನು: ತಾಳ ತಪ್ಪಿದ ಎದೆಬಡಿತ- ಅರಳಿತು ಪ್ರೀತಿ

Published : Sep 25, 2025, 12:13 PM IST

ಗಂಡ ಗೌತಮ್ ಸತ್ಯ ಮುಚ್ಚಿಟ್ಟಿದ್ದಕ್ಕೆ ಮನನೊಂದು ಮನೆಬಿಟ್ಟಿರುವ ಭೂಮಿಕಾಳನ್ನು  ಒಂದುಗೂಡಿಸಲು  ಮಗ ಆಕಾಶ್ ಸೇತುವೆಯಾಗಿದ್ದಾನೆ. ಅಪ್ಪ-ಅಮ್ಮನ ಅರಿಯದೆ ಒಂದು ಮಾಡಲು ಹೊರಟಿರುವ ಆಕಾಶ್ ಪ್ರಯತ್ನ, ಗುಲಾಬ್ ಜಾಮೂನ್ ಮತ್ತು ಮಲ್ಲಿಗೆ ಹೂವಿನ ಮೂಲಕ ಗೌತಮ್-ಭೂಮಿಕಾಳ ಮುನಿಸು ಕರಗುವಂತೆ ಮಾಡುತ್ತಿದೆ.

PREV
16
ಕ್ಷಣ ಕ್ಷಣಕ್ಕೂ ಕುತೂಹಲದ ತಿರುವು

ಅಮೃತಧಾರೆ ಸೀರಿಯಲ್​ (Amruthadhaare Serial) ಕ್ಷಣ ಕ್ಷಣಕ್ಕೂ ಕುತೂಹಲದ ತಿರುವು ಪಡೆದುಕೊಳ್ಳುತ್ತಲೇ ಇದೆ. ಪ್ರೀತಿ ಎಂದರೆ ಹಾಗೆನೇ. ಏನೋ ಆ ಕ್ಷಣದ ಮುನಿಸು ಏನೇನೋ ಕೆಟ್ಟ ನಿರ್ಧಾರ ಮಾಡಿಸಿಬಿಡುತ್ತದೆ. ಹಾಗೆಂದು ಜೀವಕ್ಕೆ ಜೀವವಾಗಿರೋ ಸಂಗಾತಿಯನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲವಲ್ಲ. ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ಪತಿ ಆತ, ಜೀವಕ್ಕೆ ಜೀವಕೊಟ್ಟ ಗೆಳೆಯನಾತ, ಅರೆಕ್ಷಣವೂ ಮನಸ್ಸನ್ನು ನೋಯಿಸದ ರೀತಿಯಲ್ಲಿ ನಡೆದುಕೊಂಡ ಗಂಡನನ್ನು ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಬಿಟ್ಟು ಬಂದವಳು ಭೂಮಿಕಾ.

26
ಮನೆಬಿಟ್ಟಿದ್ದ ಭೂಮಿಕಾ ಮೇಲೆ ಕೋಪ

ಗಂಡ ಸುಳ್ಳೇ ಹೇಳುವುದಿಲ್ಲ ಎಂದುಕೊಂಡು ಆತನ ಮೇಲೆ ವಿಭಿನ್ನ ರೀತಿಯಲ್ಲಿಯೇ ಭರವಸೆ ಇಟ್ಟುಕೊಂಡಿದ್ದ ಭೂಮಿಕಾಳಿಗೆ ಮಗಳ ಕುರಿತು ಆತ ಮುಚ್ಚಿಟ್ಟ ಸತ್ಯವೇ ಭಾರಿ ಆಘಾತ ಕೊಟ್ಟಿತು. ತನ್ನ ಗಂಡ ತನಗೆ ಮೋಸ ಮಾಡಿದ ಎನ್ನುವುದು ಒಂದೆಡೆಯಾದರೆ, ತಮ್ಮನ್ನು ಸಾಯಿಸಲು ಬಂದಿರೋ ಅತ್ತೆ ಶಕುಂತಲಾ ವಿರುದ್ಧ ಮಾತನಾಡಿದಾಗಲೂ ಅದನ್ನು ಗೌತಮ್​ ಒಪ್ಪದೇ ಇದ್ದುದು ಇನ್ನೊಂದೆಡೆ. ಶಕುಂತಲಾ ಮಗಳ ವಿಷಯ ಹೇಳಿದಾಗ ತನ್ನ ಗಂಡ ಸತ್ಯ ಮುಚ್ಚಿಡಲು ಸಾಧ್ಯನೇ ಇಲ್ಲ ಎಂದಿದ್ದ ಭೂಮಿಕಾಗೆ ಅದರ ಅರಿವಾದಾಗ ಮನಸ್ಸು ಕಹಿಯಾಗಿ ಹೋಗಿತ್ತು.

36
ಇಬ್ಬರ ಒಂದುಗೂಡಿಸಲು ಮಗನೇ ಸೇತುವೆ

ಒಟ್ಟಿನಲ್ಲಿ ಭೂಮಿಕಾ ಮನೆ ಬಿಟ್ಟು ಬಂದ ಬಗ್ಗೆ ವೀಕ್ಷಕರಲ್ಲಿ ಭಾರಿ ಅಸಮಾಧಾನ ಇದ್ದರೂ, ಸೀರಿಯಲ್​ ಮುಂದುವರೆಯಲು ಇವೆಲ್ಲಾ ಸಾಮಾನ್ಯವಾಗಿ ಬೇಕೇ ಬೇಕಲ್ಲವೆ? ಅದೇನೇ ಇದ್ದರೂ, ಇದೀಗ ಮತ್ತೆ ಅಪ್ಪ-ಅಮ್ಮನ ಪ್ರೀತಿಗೆ ಸೇತುವೆಯಾಗಿ ನಿಂತಿದ್ದಾನೆ ಮರಿಡುಮ್ಮ ಅರ್ಥಾತ್​ ಆಕಾಶ್​.

46
ಅನಿರೀಕ್ಷಿತ ತಿರುವಿನಲ್ಲಿ ಅಪ್ಪ-ಮಗನ ಭೇಟಿ

ಅನಿರೀಕ್ಷಿತ ತಿರುವಿನಲ್ಲಿ ಅಪ್ಪ-ಮಗನ ಭೇಟಿಯಾಗಿದೆ. ಅಮ್ಮನಿಂದ ಬಚಾವಾಗಲು ಆಕಾಶ್​, ಗೌತಮ್​ನನ್ನೇ ತನ್ನ ಅಪ್ಪ ಎಂದು ಸುಳ್ಳು ಹೇಳಿ ಶಾಲೆಗೂ ಕರೆದುಕೊಂಡು ಹೋಗಿದ್ದ. ಆದರೆ ಕೊನೆಗೆ ಆತನೇ ತನ್ನ ಮಗ ಎನ್ನುವುದು ತಿಳಿದಿದೆ. ಹೇಗಾದರೂ ಭೂಮಿಕಾಳ ಮನಸ್ಸನ್ನು ಓಲೈಸಲು ಆತ ಪ್ರಯತ್ನ ಪಡುತ್ತಿದ್ದಾನೆ.

56
ಹೂವನ್ನು ನೋಡಿ ಭೂಮಿಕಾ ಕಳೆದು ಹೋದಳು

ಮಲ್ಲಿಗೆ ಹೂವನ್ನು ನೋಡಿ ಭೂಮಿಕಾ ಕಳೆದು ಹೋಗಿದ್ದಾಳೆ. ಗೌತಮ್​ನ ನೆನಪು ಆಗಿದೆ. ಎದೆ ಬಡಿತ ತಾಳ ತಪ್ಪಿದೆ. ​ಅದೇ ಇನ್ನೊಂದೆಡೆ, ಗೌತಮ್​ಗೆ ಕೊಡುವುದಕ್ಕಾಗಿಯೇ ಭೂಮಿಕಾ ಕೈಯಲ್ಲಿ ಅವನಿಗೆ ಇಷ್ಟವಾದ ಗುಲಾಬ್​ ಜಾಮೂನು ಮಾಡಿಸಿದ್ದಾಳೆ ಮಲ್ಲಿ. ಅದನ್ನು ಆಕಾಶ್​ ಕೈಗೆ ಕೊಟ್ಟು ಆ ನಿನ್ನ ಫ್ರೆಂಡ್​ಗೆ ಕೊಡು ಎಂದಿದ್ದಾಳೆ. ಅವನೇ ತನ್ನಅಪ್ಪ ಎನ್ನೋದು ಆಕಾಶ್​ಗೆ ಗೊತ್ತಿಲ್ಲ. ಪತ್ನಿ ಮಾಡಿದ ಗುಲಾಬ್​ ಜಾಮೂನು ತಿಂದ ಗೌತಮ್ ಕರಗಿ ಹೋಗಿದ್ದಾನೆ.

66
​Amruthadhaare Part-2 Love story

ಒಟ್ಟಿನಲ್ಲಿ ​Amruthadhaare Part-2 Love story ಶುರುವಾಗಿದೆ. ಇವರಿಬ್ಬರನ್ನು ಮಗನ ಮೂಲಕ ಒಂದಾಗಿಸಲು ಆನಂದ್​ ಮತ್ತು ಮಲ್ಲಿ ಎಷ್ಟು ಸಕ್ಸಸ್​​ ಆಗೋದನ್ನು, ಅತ್ತ ಜೈದೇವ ಮತ್ತು ಶಕುಂತಲಾ ಬೀದಿಗೆ ಬರುವುದನ್ನು ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

Read more Photos on
click me!

Recommended Stories