ಸತ್ಯ ಸೀರಿಯಲ್‌ನ ಸಖತ್ ವಿಲನ್ ಆಗಿ ಮಿಂಚಿದ ಅನು ಜನಾರ್ಧನ್ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಷನ್ ಕಂಟೆಂಟ್ ಕ್ರಿಯೇಟರ್ ಆಗಿ ಮಿಂಚುತ್ತಿದ್ದಾರೆ.
ಪ್ರತಿ ದಿನ ಆಫೀಸ್‌ಗೆ ಹೋಗುವಾಗ ಅನು ಹೇಗೆ ಸ್ಟೈಲ್ ಮಾಡ್ತಾರೆ ಅನ್ನೋದನ್ನು ತಪ್ಪದೆ ತೋರಿಸುತ್ತಾರೆ. ಅಲ್ಲದೆ ತಮ್ಮ ಉಡುಪು ಖರೀದಿಸಿದ ಲಿಂಕ್ ಕೂಡ ಶೇರ್ ಮಾಡ್ತಾರೆ.
ಕೆಲವು ದಿನಗಳ ಹಿಂದೆ ಅನು ಜನಾರ್ಧನ್ ತಮ್ಮ ಬೆನ್ನಿನ ಮೇಲೆ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಿಮ್ಮಪ್ಪನ ನಾಮ, ಶಂಕ ಮತ್ತು ಚಕ್ರವನ್ನು ಹಾಕಲಾಗಿದೆ.
ಕುತ್ತಿಗೆಯ ಕೆಳಗಿನ ಬೆನ್ನ ಮೇಲೆ ಟ್ಯಾಟೂ ಹಾಕಲಾಗಿದೆ. ಕಪ್ಪು ಇಂಕ್‌ನಲ್ಲಿ ವೆಂಕಟೇಶ್ವರನ ಬಿಳಿ ನಾಮ ಮಾಡಲಾಗಿದೆ ಹಾಗೂ ಕೆಂಪು ಇಂಕ್‌ನಲ್ಲಿ ಬಳಸಲಾಗಿದೆ.
ಶಂಕು ಮತ್ತು ಚಕ್ರವನ್ನು ಮರ್ಜ್ ಮಾಡಲಾಗಿದೆ. ಇದನ್ನು ಮಾಡಲು ವೈಟ್ ಇಂಕ್ ಬಳಸಿದ್ದಾರೆ. ಟ್ಯಾಟೂ ನೆಟ್ಟಿಗರ ಗಮನ ಸೆಳೆದಿದೆ.
ದೇವರ ಟ್ಯಾಟೂಗಳನ್ನು ಯಾವತ್ತಿದ್ದರೂ ಮೈ ಮೇಲೆ ಹಾಕಿಸಿಕೊಳ್ಳಬಾರದು ಇದು ತಿಮ್ಮಪ್ಪನಿಗೆ ನೀವು ಮಾಡುತ್ತಿರುವ ಅವಮಾನ. ಒಂದು ವೇಳೆ ಹಾಕಿಸಿಕೊಳ್ಳಬೇಕು ಅಂದ್ರೆ ಬಲಗೈ ಬೆಸ್ಟ್ ಎಂದಿದ್ದಾರೆ ನೆಟ್ಟಿಗರು.