Nanna Devru Serial: ಭಾರಿ ಕುತೂಹಲ‌ ಮೂಡಿಸಿದ್ದ ನನ್ನ ದೇವ್ರು ಧಾರಾವಾಹಿ ಶುರುವಾಗಿ 2 ತಿಂಗಳಲ್ಲೇ ಮುಕ್ತಾಯ !

First Published | Aug 28, 2024, 6:12 PM IST

ಎರಡು ತಿಂಗಳ ಹಿಂದೆ ಆರಂಭವಾಗಿದ್ದ ಮಯೂರಿ ಖ್ಯಾತರಿ ಅಭಿನಯದ ನನ್ನ ದೇವ್ರು ಧಾರಾವಾಹಿ ಶೀಘ್ರದಲ್ಲಿ ಕೊನೆಗೊಳ್ಳಲಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. 
 

ಹಲವಾರು ಜನಪ್ರಿಯ ಧಾರಾವಾಹಿಗಳನ್ನು ನೀಡಿರುವ ಕಲರ್ಸ್ ಕನ್ನಡದಲ್ಲಿ ಕೆಲವು ಧಾರಾವಾಹಿಗಳು ಜನರನ್ನು ರಂಜಿಸೋಕೆ ಸಾಧ್ಯವಾಗದೇ ಆರಂಭವಾದ ವರ್ಷದೊಳಗೆ ಮುಗಿಸಿದ್ದೂ ಇದೆ. ಗೃಹಪ್ರವೇಶ, ಗಂಡ-ಹೆಂಡತಿ, ಅಷ್ಟೇ ಯಾಕೆ ವೃಂದಾವನ ಸೀರಿಯಲ್ ಆರು ತಿಂಗಳೊಳಗೆ ಮುಗಿದಿತ್ತು, ಇದೀಗ ಆ ಸಾಲಿಗೆ ಮತ್ತೊಂದು ಧಾರಾವಾಹಿ ಸೇರುತ್ತಿದೆ, ಅದು ನನ್ನ ದೇವ್ರು (Nanna Devru). 
 

ಹೌದು, ಇತ್ತೀಚೆಗೆ ಅಂದ್ರೆ ಜುಲೈ 8ರಿಂದ ಪ್ರಸಾರ ಆರಂಭವಾದ ನನ್ನ ದೇವ್ರು ಧಾರಾವಾಹಿ (Serial), ಆರಂಭದಲ್ಲಿ ಕುತೂಹಲ ಮೂಡಿಸಿತ್ತು, ಆದರೆ ನಿಧಾನವಾಗಿರೋ ಕಥೆ, ಹಳೆ ಕಥೆ, ಅಷ್ಟಾಗಿ ವೀಕ್ಷಕರನ್ನು ಸೆಳೆದಿರಲಿಲ್ಲ. ಇದೀಗ ಸೀರಿಯಲ್ ಶೀಘ್ರದಲ್ಲೇ ಮುಗಿಯಲಿದೆ ಎನ್ನುವ ಸುದ್ದಿ ಬಂದಿದ್ದು, ಇದು ನಿಜಾನ? ಯಾವ ಕಾರಣಕ್ಕೆ ಮುಗಿಯಲಿದೆ ಅನ್ನೋದು ತಿಳಿದು ಬಂದಿಲ್ಲ. 

Tap to resize

ಅವಿನಾಶ್ ದಿವಾಕರ್ (Avinash Divakar), ಮಯೂರಿ, ವಿ ಮನೋಹರ್, ಯುಕ್ತಾ ಮಲ್ನಾಡ್, ಸ್ವಾತಿ, ರೇಖಾ ದಾಸ್, ನಿಶ್ಚಿತಾ ಗೌಡ, ಯಮುನಾ ಶ್ರೀನಿಧಿ, ಮಾಲತಿ ಸುಧೀರ್, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್ ನಟಿಸಿರುವ ಈ ಧಾರಾವಾಹಿಯನ್ನು ರಮೇಶ್ ಇಂದಿರಾ ನಿರ್ದೇಶನ ಮಾಡುತ್ತಿದ್ದರೆ, ಶ್ರುತಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ.  
 

‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ ಮಯೂರಿ (Mayuri Khyatari) ಅನೇಕ ವರ್ಷಗಳ ನಂತರ, ಮದುವೆ ಮಗು ಆದ ಬಳಿಕ ನನ್ನ ದೇವ್ರು ಧಾರಾವಾಹಿ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಿದ್ದರು. ಉತ್ತಮ ಪಾತ್ರ ಸಿಕ್ಕಿರೋ ಬಗ್ಗೆ, ಸೀರಿಯಲ್ ಬಗ್ಗೆ ಭರವಸೆ ಸಹ ವ್ಯಕ್ತಪಡಿಸಿದ್ದರು. 
 

ಮಯೂರಿ ಕ್ಯಾತರಿ ಈ ಧಾರಾವಾಹಿಯಲ್ಲಿ ಸಣ್ಣ ಊರಿನ ಮಲತಾಯಿಯ ಶೋಷಣೆಯನ್ನು ಅನುಭವಿಸುತ್ತಾ, ಬೆಳೆಯುವ ಬಡ ಕುಟುಂಬದ ಹುಡುಗಿ ಮಯೂರಿಯಾಗಿ ನಟಿಸುತ್ತಿದ್ದರು. ಇಡೀ ಊರಿಗೆ ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದ ಪಾತ್ರದಲ್ಲಿ ಅವಿನಾಶ್ ದಿವಾಕರ್ ನಟಿಸುತ್ತಿದ್ದಾರೆ. ಸಚ್ಚಿಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಯೂರಿ ಕೆಲಸ ಮಾಡುತ್ತಿರುತ್ತಾಳೆ. 
 

ತನ್ನ ದೇವ್ರು ಎಂದು ನಂಬಿರುವ ಸಚ್ಚಿದಾನಂದನ ವಿರುದ್ಧ ಯಾವುದೇ ಆರೋಪ ಬರೋದಕ್ಕೆ ಬಿಡದ ಹುಡುಗಿ ಮಯೂರಿ,  ಸಚ್ಚಿದಾನಂದರಿಗೆ ಯಾವುದೇ ಸಮಸ್ಯೆ ಬಂದರೂ ಅದನ್ನು ತಾನೇ ಅನುಭವಿಸುವ ಹುಡುಗಿ. ಹೀಗೆ ಕಥೆ ಸಚ್ಚಿ ಮತ್ತು ಮಯೂರಿಯನ್ನು ಹತ್ತಿರ ಸೇರಿಸುತ್ತೆ. ಆದರೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಸಚ್ಚಿದಾನಂದನ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನ ತಾಯಿ ಸಾವಿಗೆ ಅಪ್ಪನೇ ಕಾರಣ ನಂಬಿರುವ ಮಗಳು, ತನಗೆ ಇಷ್ಟ ಬಂದ ಜೀವನ ಸಾಗಿಸುತ್ತಾ ಅಪ್ಪನಿಂದ, ಕುಟುಂಬದಿಂದ ದೂರವಾಗಿ ಬೆಳೆಯುತ್ತಿದ್ದಾಳೆ. 
 

ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಪಡೆಯಲು ಸಚ್ಚಿದಾನಂದ ಪ್ರಯತ್ನಿಸುತ್ತಿದ್ದು, ಈ ಸಮಯದಲ್ಲಿ ಸಚ್ಚಿ ಜೀವನಕ್ಕೆ ಎಂಟ್ರಿ ಕೊಡುವ ಮಯೂರಿ, ತನ್ನ ದಣಿಗಳ ಬದುಕು ಸರಿ ಹೋಗಲು  ಯಾವ ರೀತಿ ಸಹಾಯ ಮಾಡುತ್ತಾಳೆ ಅನ್ನೋದೆ ಕಥೆಯಾಗಿತ್ತು. ಈಗಷ್ಟೇ ಕಥೆ ಆರಂಭವಾಗಿತ್ತು, ಇನ್ನೇನು ಆಗಲಿದೆ ಎನ್ನುವಷ್ಟರಲ್ಲಿ ಕಥೆ ಮುಗಿಯುವ ಸುದ್ದಿ ಬಂದಿದೆ. ಕಥೆಯನ್ನ ಹೇಗೆ ಮುಗಿಸ್ತಾರೆ ಅನ್ನೋದು ಕಾದು ನೋಡಬೇಕು. 
 

Latest Videos

click me!