ನಗು ನಗುತ್ತಾ ಫೋಟೋ ಹಾಕಿ, ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ ಅಂತಿದ್ದಾರಲ್ಲ ಶ್ವೇತಾ ಚಂಗಪ್ಪ!

First Published | Aug 28, 2024, 5:39 PM IST

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ನಿರೂಪಕಿಯಾಗಿ ಮಿಂಚಿದ ಶ್ವೇತಾ ಚಂಗಪ್ಪ, ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊ ಶೇರ್ ಮಾಡಿದ್ದು, ಮುದ್ದಾಗಿ ಕಾಣಿಸ್ತಿದ್ದಾರೆ. 
 

ಕನ್ನಡ ಕಿರುತೆರೆಗೆ ನಟಿಯಾಗಿ ಎಂಟ್ರಿ ಕೊಟ್ಟು ಈಗ ಸಿನಿಮಾಗಳಲ್ಲಿ, ಹಾಗೂ ನಿರೂಪಣೆಯಲ್ಲಿ ಬ್ಯುಸಿಯಾಗಿರುವ ಶ್ವೇತಾ ಚಂಗಪ್ಪ, (Shwetha Changappa) ಸದ್ಯ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ರಿಯಾಲಿಟಿ ಶೋದಲ್ಲಿ ಜಡ್ಜ್ ಕೂಡ ಆಗಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ನಟಿ, ಹೆಚ್ಚಾಗಿ ತಮ್ಮ ಮಗನ ಜೊತೆಗೆ, ಗಂಡ ಹಾಗೂ ಫ್ಯಾಮಿಲಿ ಜೊತೆಗಿನ ಫೋಟೊ, ತಮ್ಮ ಟ್ರಾವೆಲ್ ಫೋಟೊಗಳು ಹಾಗೂ ತಮ್ಮ ಫೋಟೊ ಶೂಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. 
 

Tap to resize

ಈಗ ಶ್ವೇತಾ ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ (instagram page) ಬ್ಯೂಟಿಫೈಬೈಚೈ ಡಿಸೈನ್ ಮಾಡಿರುವ ಉದ್ದವಾದ ಲಂಗ ಮತ್ತು ಕ್ರಾಪ್ ಟಾಪ್ ಧರಿಸಿದ್ದು, ಲೆಹೆಂಗಾ ರೀತಿಯ ಈ ಡ್ರೆಸಲ್ಲಿ ಶ್ವೇತಾ ತುಂಬಾನೆ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. 
 

ಶ್ವೇತಾ ತಮ್ಮ ಮುದ್ದಾದ ಲುಕ್ ಗೆ ಕಾರಣರಾದವರ ಹೆಸರನ್ನೂ ಕೂಡ ಬರೆದುಕೊಂಡಿದ್ದು, ಕೀರ್ತಿ ರಾಮ್ ಮೇಕಪ್ ಮಾಡಿದ್ದು, ಶಶಿ ಅವರ ಹೇರ್ ಸ್ಟೈಲ್ ನಲ್ಲಿ ಸಖತ್ ಕ್ಯೂಟ್ ಆಗಿ ಕಂಡು ಬಂದಿದ್ದಾರೆ. ಅವರ ಅಂದಕ್ಕೆ ಕಳಸವಿಟ್ಟಂತೆ, ಶ್ವೇತಾ ನಗು ಕೂಡ ಫೋಟೊವನ್ನ ಮತ್ತಷ್ಟು ಹೈಲೈಟ್ ಮಾಡುತ್ತಿದೆ. 
 

ಫೋಟೊದ ಜೊತೆಗೆ ಕ್ಯಾಪ್ಶನ್ ಕೂಡ ಬರೆದಿದ್ದು, ನಗು ನಗು. ನಾವು ನಗುವನ್ನ ಹಂಚೋಣ… ಜೀವನದಲ್ಲಿ ಯಾವುದು ಶಾಶ್ವತ ಅಲ್ಲ. ಹಾಗಿದ್ದಾಗ ದ್ವೇಷ ಅಸೂಯೆ ಯಾಕೆ. ನಗುವನ್ನ ಪ್ರೀತಿಯನ್ನ ಹಂಚಿ ಬದುಕಿ ಬಾಳೋಣ ಎಂದು ಬರೆದುಕೊಂಡಿದ್ದಾರೆ. 
 

ಶ್ವೇತಾ ಕ್ಯೂಟ್ ಲುಕ್ ನೋಡಿ ನೆಟ್ಟಿಗರು ಬ್ಯೂಟಿಫುಲ್, ಗೊಂಬೆ, ಸುಂದರಿ, ನೀವೇ ಚೆಂದ ನಿಮ್ಮ ನಗು ಅದಕ್ಕಿಂತ ಚೆಂದ, ಬ್ಯೂಟಿ ಕ್ವೀನ್, ಬ್ಯೂಟಿಫುಲ್ ಸ್ಮೈಲ್, ಗಾರ್ಜಿಯಸ್, ನಿಮಗೆ ನೀವೇ ಸಾಟಿ, ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಶ್ವೇತಾ ಚಂಗಪ್ಪಾ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟು  20 ವರ್ಷಗಳಿಗೂ ಹೆಚ್ಚಾಗಿದೆ.. ಸುಮಾರು ಎರಡು ದಶಕಗಳಿಂದಲೂ ಶ್ವೇತಾ ತನ್ನ ನಟನೆ, ನಿರೂಪಣೆಯಿಂದ ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ. 'ಕಾದಂಬರಿ' ಧಾರಾವಾಹಿ (Kadambari Serial) ಮೂಲಕ ಶ್ವೇತಾ ಚಂಗಪ್ಪ ಫೇಮಸ್ ಆಗಿದ್ದರು. ಸೃಜನ್ ಲೋಕೇಶ್ ಮಜಾ ಟಾಕೀಸ್‌ನಲ್ಲಿ ರಾಣಿಯಾಗಿ ಜನಪ್ರಿಯತೆ ಪಡೆದರು.  ಸದ್ಯ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಪ್ಟನ್ ಆಗಿ ಮಿಂಚುತ್ತಿದ್ದಾರೆ.
 

Latest Videos

click me!