ಮುನ್ನ ಮಾಡಿದ ಪಾಪ ಯಾರ ತಾತನ ಗಂಟು... ಅಂತಿರೋದ್ಯಾಕೆ ಪವಿತ್ರಾ ಗೌಡ

Published : May 16, 2025, 12:10 PM ISTUpdated : May 16, 2025, 12:20 PM IST

ನಟಿ, ಮಾಡೆಲ್ ಆಗಿರುವ ಪವಿತ್ರಾ ಗೌಡ, ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಅಲ್ಲಿನ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.   

PREV
18
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು... ಅಂತಿರೋದ್ಯಾಕೆ ಪವಿತ್ರಾ ಗೌಡ

ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ, ದರ್ಶನ್ ಗೆಳತಿ ಪವಿತ್ರಾ ಗೌಡ (Pavithra Gowda) ಸದ್ಯಕ್ಕಂತೂ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ನಡೆಸೋದರಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಡಿಸೈನರ್ ವೇರ್ ಗಳ ಪ್ರದರ್ಶನ ಕೂಡ ಮಾಡುತ್ತಿರುತ್ತಾರೆ. 
 

28

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಪವಿತ್ರಾ ಗೌಡ, ಜೈಲಿನಿಂದ ಬಂದ ಮೇಲಂತೂ ತಮ್ಮ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಮಾಡೆಲ್ಸ್ ಗಳ ಜೊತೆ ತಮ್ಮ ಬ್ರಾಂಡ್ ಡಿಸೈನರ್ ವೇರ್ ಶೂಟ್ ಮಾಡುತ್ತಲೇ ರಿಉತ್ತಾರೆ. ಹಾಗೂ ಅವುಗಳನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
 

38

ಇದರ ಜೊತೆಗೆ ಜೊತೆಗೆ ಪವಿತ್ರಾ ಗೌಡ ಟೆಂಪಲ್ ರನ್ ಕೂಡ ಜೋರಾಗಿಯೇ ನಡೆಯುತ್ತಿದೆ. ಇದೀಗ ಪವಿತ್ರಾ ಗೌಡ ಮಂತ್ರಾಲಯ(Mantralaya) ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದಿದ್ದು, ಅದರ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

48

ರಾಘವೇಂದ್ರ ಸ್ವಾಮಿ (Raghavendra swamy)ದೇಗುಲದ ವರಾಂಡದಲ್ಲಿ ಕುಳಿತುಕೊಂಡು ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದರ ಜೊತೆಗೆ ಪವಿತ್ರಾ ಬ್ಯಾಕ್ ಗ್ರೌಂಡಲ್ಲಿ ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ..ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ಎನ್ನುವ ಹಾಡನ್ನು ಹಾಕಿದ್ದಾರೆ. 
 

58

ಹಸಿರು ಬಣ್ಣದ ಸೀರೆಯುಟ್ಟು ಓಂ ಶ್ರೀ ರಾಘವೇಂದ್ರಾಯ ನಮಃ ಎನ್ನುವ ಮಂತ್ರವನ್ನು ಕ್ಯಾಪ್ಶನ್ ನಲ್ಲಿ ಹಾಕಿ, ಹಿನ್ನೆಲೆಯಲ್ಲಿ ರಾಘವೇಂದ್ರ ಸ್ವಾಮಿಯ ಹಾಡನ್ನು ಹಾಕಿ, ತಾವೆಲ್ಲೋ ಬೇಸರದಲ್ಲಿ ಇರುವಂತೆ ತೋರಿಸಿಕೊಂಡಿದ್ದಾರೆ ಪವಿತ್ರಾ. 
 

68

ಪವಿತ್ರಾ ಫೋಟೊ ನೋಡಿ ಅಭಿಮಾನಿಗಳು ಸಹ ಮರುಗಿದ್ದು, ಪಾಪ ಪವಿತ್ರಾ ಮೇಡಂ ದರ್ಶನ್ ಸರ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅನಿಸುತ್ತಿದೆ. ಬೇಜಾರು ಮಾಡಬೇಡಿ ಮೇಡಂ ರಾಘವೇಂದ್ರ ಸ್ವಾಮಿ ಸದಾ ನಿಮ್ಮೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ. 
 

78

ಅಷ್ಟೇ ಅಲ್ಲ ಹಾಲಾಲ್ಲದರು ಹಾಕು.. ನಿರಲ್ಲದರು ಹಾಕು.. ಆದ್ರೆ ಡಿ ಬಾಸ್ ಹೃದಯದಿಂದ ಮಾತ್ರ ತೆಗೆದು ಹಾಕಬೇಡ ರಾಘವೇಂದ್ರ.. ಯಾಕಂದ್ರೆ ಪ್ರೀತಿ ಮಾಡಿ ಮೋಸ ಮಾಡೋ ಈ ಕಾಲದಲ್ಲಿ.. ಪ್ರೀತಿಗೋಸ್ಕರ ಜೈಲಿಗೆ ಹೋಗೊ ಅಂತ ಪ್ರಿಯತಮನೆಲ್ಲಿ ಸಿಗುವನು ರಾಘವೇಂದ್ರ.. ಜೈಲಿಗೆ ಹೋಗಿ ಬಂದ್ಮೇಲೆ ಒಂದು ಸಣ್ಣ ಕಾಮೆಂಟ್ ಕೂಡ ಮಾಡಿಲ್ಲ ಬಾಸ್.. ಬೇರೆ ಯಾರಾದ್ರೂ ಹಾಗಿದ್ರೆ ಇಷ್ಟೊತ್ತಿದೆ ನರಕತೋರಿಸ್ತಿದ್ರು.. ಕನ್ನಡದ ಹುಡುಗರ ಅಪ್ಪಟ ಪ್ರೀತಿಗೆ ದರ್ಶನ್ ಗಿಂತ ಸಾಕ್ಷಿ ಬೇಕಾ.. ದೇವರು ನಿಮ್ಮ ಜೊತೆಯಲ್ಲಿದ್ದಾನೆ ಎಂದು ಸಹ ಪವಿತ್ರಾ ಗೌಡ ಮೇಲೆ ಅನುಕಂಪ ತೋರಿಸಿದ್ದಾರೆ ಜನ. 
 

88

ಅಷ್ಟೇ ಅಲ್ಲ, ಅತ್ತಿಗೆ ನೀವು ತುಂಬಾನೆ ಸ್ಟ್ರಾಂಗ್ ಮಹಿಳೆ. ಶೀಘ್ರದಲ್ಲೇ ನೀವು ಮತ್ತೆ ಖುಷಿಯಾಗಿರುವಿರಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಎಲ್ಲವೂ ಸರಿಯಾಗುತ್ತೆ. ನಿಮ್ಮ ಪ್ರೀತಿ ನಿಮಗೆ ಮತ್ತೆ ಸಿಕ್ಕೇ ಸಿಗುತ್ತೆ ಎಂದು ಸಹ ಕಾಮೆಂಟ್ ಮೂಲಕ ಹೇಳಿದ್ದಾರೆ ಜನ. 
 

Read more Photos on
click me!

Recommended Stories