ಮುಂದಿನ ತಿಂಗಳು ನನ್ನ ಮದ್ವೆ ಎನ್ನುತ್ತಲೆ... ಮದುವೆಗೆ ಬರೋರಿಗೆ ಕಂಡೀಶನ್ ಹಾಕಿದ ನಟಿ ಸಾರಾ ಅಣ್ಣಯ್ಯ

Published : Aug 24, 2024, 05:41 PM IST

ಅಮೃತಧಾರೆ ನಟಿ ಸಾರಾ ಅಣ್ಣಯ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮದುವೆಗೆ ಬರೋರಿಗೆ ಒಂದು ಕಂಡೀಶನ್ ಕೂಡ ಹಾಕಿದ್ದಾರೆ.   

PREV
17
ಮುಂದಿನ ತಿಂಗಳು ನನ್ನ ಮದ್ವೆ ಎನ್ನುತ್ತಲೆ... ಮದುವೆಗೆ ಬರೋರಿಗೆ ಕಂಡೀಶನ್ ಹಾಕಿದ ನಟಿ ಸಾರಾ ಅಣ್ಣಯ್ಯ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಸಹೋದರ ಜೀವನ್ ಹೆಂಡ್ತಿ ಹಾಗೂ ಗೌತಮ್ ದಿವಾನ್ ಮಹಿಮಾ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ಮಾಡರ್ನ್ ಸೊಸೆ ಸಾರಾ ಅಣ್ಣಯ್ಯ (Sara Annaiah). ಇವರಿಗೆ ಯಾವ ಪಾತ್ರ ಕೊಟ್ರೂ ಅದಕ್ಕೆ ತಕ್ಕಂತೆ ಸಖತ್ತಾಗಿಯೇ ನಟಿಸೋ ಸುಂದರಿ ಇವರು. 
 

27

ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟಿವ್ ಆಗಿರುವ ಕನ್ನಡ ಕಿರುತೆರೆಯ ಬೋಲ್ಡ್ ಬ್ಯೂಟಿ (bold beauty) ಹೆಚ್ಚಾಗಿ ಸಖತ್ ಹಾಟ್, ಬೋಲ್ಡ್ ಆಗಿ ಮಾಡರ್ನ್ ಡ್ರೆಸ್ ಗಳಲ್ಲೇ ಹೆಚ್ಚಾಗಿ ಫೋಟೊಗಳನ್ನು ಶೇರ್ ಮಾಡ್ತಿರ್ತಾರೆ. ಇದೀಗ ಮತ್ತೊಂದಿಷ್ಟು ಫೋಟೊಗಳನ್ನು ನಟಿ ಶೇರ್ ಮಾಡಿದ್ದಾರೆ. 
 

37

ಬ್ಲ್ಯಾಕ್ ಆಂಡ್ ವೈಟ್ ಬಣ್ಣದ ಝೀಬ್ರಾ ಪ್ರಿಂಟ್ ಸ್ಲೀವ್ ಲೆಸ್ ಗೌನ್ ಧರಿಸಿರುವ ಸಾರಾ ತುಂಬಾನೆ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. ಇದರ ಜೊತೆಗೆ ಸಾರಾ ನೀನು ಖುಷಿಯಾಗಿರಲು ಅರ್ಹಳು, ಟಯರ್ಡ್, ದುಃಖದಿಂದ ಇರೋದಕ್ಕೆ ಅಲ್ಲ, ಜಸ್ಟ್ ಹ್ಯಾಪಿ (You deserve to be happy! Not tired, not hurt, JUST HAPPY.) ಎಂದು ಕ್ಯಾಪ್ಶನ್ ಹಾಕಿದ್ದಾರೆ. 
 

47

ಈಗ ವಿಷ್ಯ ಇರೋದೆ ಬೇರೆ.. ಏನಪ್ಪಾ ವಿಷ್ಯ ಅಂದ್ರೆ ಸಾರಾ ಅಣ್ಣಯ್ಯ ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ತಮಗೆ ಮದುವೆ ಫಿಕ್ಸ್ ಆಗಿರೋ ಬಗ್ಗೆ ಬರ್ಕೊಂಡಿದ್ದಾರೆ. ಜೊತೆಗೆ ಎಲ್ಲರನ್ನೂ ಆಹ್ವಾನಿಸಿದ್ದಾರೆ, ಆದರೆ ಅದರ ಜೊತೆಗೊಂದು ಕಂಡೀಶನ್ ಕೂಡ ಹಾಕಿದ್ದಾರೆ. ಏನ್ ಗೊತ್ತಾ? 
 

57

ನಿಜವಾಗ್ಲೂ ಸಾರಾ ಅಣ್ಣಯ್ಯ ಮದ್ವೆ ಆಗ್ತಿದ್ದಾರ? ಹಾಗಿದ್ರೆ ಅಮೃತಧಾರೆಯಲ್ಲಿ ಇನ್ನು ಸಾರಾ ನಟಿಸೋದಿಲ್ವಾ? ಇನ್ನು ಮುಂದೆ ಅವರು ಸೀರಿಯಲ್, ಸಿನಿಮಾಗಳಲ್ಲಿ ನಟಿಸೋದಿಲ್ವಾ? ಹೀಗೆ ನೂರಾರು ಪ್ರಶ್ನೆ ಕೇಳೋ ಮುನ್ನ ಸಾರಾ ತಮ್ಮ ಇನ್’ಸ್ಟಾ ಸ್ಟೋರಿಯಲ್ಲಿ ಬರೆದಿರೋದು ಏನು ಅನ್ನೋದನ್ನ ತಿಳಿಯಿರಿ. 
 

67

ಸಾರಾ ಪೋಸ್ಟ್ ನಲ್ಲಿ ಹೀಗಿದೆ… ನಾನು ಮುಂದಿನ ತಿಂಗಳು ಮದುವೆಯಾಗಲಿದ್ದೇನೆ. ಇದೊಂದು ಸಣ್ಣ ಪಾರ್ಟಿ, ಕೆಲವೇ ಕೆಲವು ಜನರನ್ನ ಆಹ್ವಾನಿಸಲಾಗಿದೆ. ಆದ್ರೆ ಬರೋವಾಗ ಗಿಫ್ಟ್ ತರಬೇಡಿ, ಬದಲಾಗಿ ನನ್ನನ್ನು ಮದುವೆಯಾಗೋದಕ್ಕೆ ತಯಾರಿರುವವರನ್ನು ಕರೆದುಕೊಂಡು ಬನ್ನಿ ಎಂದಿದೆ ಆ ಪೋಸ್ಟ್ ನಲ್ಲಿ. 
 

77

ಅಷ್ಟಕ್ಕೂ ಇದೇನೂ ಸಾರಾ ತಮ್ಮ ಮದ್ವೆ ಬಗ್ಗೆ ಹೇಳಿರೋ ಸೀರಿಯಸ್ ಪೋಸ್ಟ್ ಅಲ್ವೇ ಅಲ್ಲಾ… ಸಾರಾ ಹೆಚ್ಚಾಗಿ ಏನಾದರೊಂದು ತಮಾಷೆಯ ವಿಡಿಯೋ, ವರ್ಡಿಂಗ್ಸ್ ಗಳನ್ನ ತಮ್ಮ ಸ್ಟೊರಿಯಲ್ಲಿ ಶೇರ್ ಮಾಡುತ್ತಿರುತ್ತಾರೆ. ಈ ಬಾರಿಯೂ ತಮಾಷೆಗಾಗಿ ಇದನ್ನ ಹಾಕಿದ್ದಾರೆ. 
 

Read more Photos on
click me!

Recommended Stories