ವಾರಗಳ ಹಿಂದಷ್ಟೇ ಝೀ ಕನ್ನಡದಲ್ಲಿ ಆರಂಭವಾದ ಧಾರಾವಾಹಿ ಅಣ್ಣಯ್ಯ (Annayya). ನಾಲ್ಕು ಜನ ತಂಗಿಯರ ಮುದ್ದಿನ ಅಣ್ಣನ ಕಥೆಯೇ ಅಣ್ಣಯ್ಯ. ಪ್ರಮೋದ್ ಶೆಟ್ಟಿ ನಿರ್ಮಾಣದ, ಉತ್ತಮ್ ಮಧು ನಿರ್ದೇಶನದ ಈ ಧಾರಾವಾಹಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಟಿಆರ್ ಪಿ ಕೂಡ ಏರಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ನಾಯಕಿಯಾಗಿ ರೌಡಿ ಬೇಬಿ ಖ್ಯಾತಿಯ ನಿಶಾ ರವಿಕೃಷ್ಣನ್ (Nisha Ravikrishnan) ನಟಿಸುತ್ತಿದ್ದಾರೆ, ನಾಯಕನಾಗಿ ನಟಿಸುತ್ತಿರುವ ನಟನ ಹೆಸರು ವಿಕಾಸ್ ಉತ್ತಯ್ಯ. ನಿಶಾ ಕೃಷ್ಣನ್ ಬಗ್ಗೆ ಇಂಟ್ರಡಕ್ಷನ್ ಬೇಕಾಗಿಲ್ಲ. ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಿಶಾ. ಹಾಗಿದ್ರೆ ಈ ನಾಯಕ ವಿಕಾಸ್ ಉತ್ತಯ್ಯ ಯಾರು?
ಈಗಾಗಲೇ ಅಣ್ಣಯ್ಯನಾಗಿ ಜವಾಬ್ಧಾರಿಯನ್ನು ಹೆಗಲಿಗೇರಿಸಿಕೊಂಡು ತಂಗಿಯರನ್ನು ಕಾಪಾಡುವ ಶಿವು ಪಾತ್ರ ವೀಕ್ಷಕರಿಗೆ ತುಂಬಾನೆ ಇಷ್ಟವಾಗಿದೆ. ವಿಕಾಸ್ ಬಗ್ಗೆ ತಿಳಿಯೋ ಕುತೂಹಲ ಕೂಡ ಜಾಸ್ತಿಯಾಗಿದೆ. ಹಾಗಿದ್ರೆ ಇವರು ಈ ಮೊದಲ ಏನ್ಮಾಡ್ಕೊಂಡಿದ್ರು? ಯಾವ ಧಾರಾವಾಹಿಯಲ್ಲಿ ನಟಿಸಿದ್ರು, ಅನ್ನೋ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋದಕ್ಕೆ ಪೂರ್ತಿಯಾಗಿ ಓದಿ.
ವಿಕಾಸ್ ಉತ್ತಯ್ಯ (Vikash Uttaiah) ಮೂಲತಃ ಕೊಡಗಿನ ಕುವರ. ಆದ್ರೆ ಹುಟ್ಟಿ ಬೆಳೆದದ್ದು ಎಲ್ಲಾನೂ ನಮ್ಮ ಬೆಂಗಳೂರಲ್ಲಿ. ನಟನಾ ಜಗತ್ತಿಗೆ ಕಾಲಿಡೋದಕ್ಕೂ ಮುನ್ನ ವಿಕಾಸ್ ಅಡ್ವಕೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದ್ರೆ ಬಣ್ಣದ ಜಗತ್ತಿನ ಒಲವಿನಿಂದಾಗಿ ಆ ವೃತ್ತಿಯನ್ನ ತ್ಯಜಿಸಿ, ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
'ಅಣ್ಣಯ್ಯ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸೋ ಅವಕಾಶ ಇವರಿಗೆ ಸುಲಭವಾಗಿ ಸಿಕ್ಕಿಲ್ಲ, ಯಾಕಂದ್ರೆ ಈ ಧಾರಾವಾಹಿಗೆ ಬರೋಬ್ಬರಿ 500 ಕಲಾವಿದರನ್ನು ಆಡಿಷನ್ ಮಾಡಲಾಗಿತ್ತು. ಈ ಪೈಕಿ ವಿಕಾಸ್ ಉತ್ತಯ್ಯ ಆಯ್ಕೆಯಾಗಿದ್ದಾರೆ. ಈಗಾಗಲೇ ತೆರೆ ಮೇಲೆ ಬಂದು ತಮ್ಮ ಅಭಿನಯದಿಂದ ಮೋಡಿ ಮಾಡ್ತಿದ್ದಾರೆ ವಿಕಾಸ್.
ಇನ್ನು ನಟನೆ ಇವರಿಗೆ ಹೊಸದೇನಲ್ಲ. ವಿಕಾಸ್ ಉತ್ತಯ್ಯ ಸೀರಿಯಲ್‌ಗೆ ಬರುವ ಮುನ್ನ ಕೆಲವೊಂದು ಸಿನಿಮಾಗಳಲ್ಲಿ ಕೂಡ ಅಭಿನಯಿದ್ದಾರೆ. ಮೇರಿ, ದ್ವಂದ್ವ ದ್ವಯಂ, ಆನೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲಂ ನಲ್ಲೂ (short films) ವಿಕಾಸ್ ನಟಿಸಿದ್ದಾರೆ. ಸದ್ಯಕ್ಕೆ ಅಪಾಯದಲ್ಲಿ ಎಚ್ಚರಿಕೆ ಎಂಬ ಸಿನಿಮಾ ಇವರ ಕೈಯಲ್ಲಿದೆ.
ಸಿನಿಮಾಗಳಲ್ಲಿ ಅಭಿನಯಿಸಿದ್ರೂ ಕೂಡ ಅಷ್ಟೇನ್ನೂ ಹಿಟ್ ಆಗಿಲ್ಲ, ಆದರೆ ಇದೀಗ ಅಣ್ಣಯ್ಯ ಧಾರಾವಾಹಿಯ ಶಿವು ಪಾತ್ರದ ಮೂಲಕ ಕನ್ನಡಿಗರ ಗಮನ ಸೆಳೆದಿದ್ದಾರೆ ವಿಕಾಸ್. ವಿಕಾಸ್ ನಟನೆ ನೋಡಿ ಮೆಚ್ಚಿಕೊಂಡಿರುವ ವೀಕ್ಷಕರು ಫುಲ್ ಮಾರ್ಕ್ ಕೊಟ್ಟಿದ್ದಾರೆ. ಇವರ ಇಮೋಶನಲ್ ಪಾತ್ರ ನೋಡಿ ವೀಕ್ಷಕರು ಕೂಡ ಕಣ್ಣೀರಿಟ್ಟಿದ್ದರು ಅಂದ್ರೆ, ವಿಕಾಸ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಅಂತಾನೆ ಅರ್ಥ.