ಕೋಮಾದಲ್ಲಿ ಆನಂದ್... ಚೆನ್ನಾಗಿರೋ ಸಿರಿಯಲ್‌ನಾ ಹಾಳು‌ಮಾಡ್ಬಿಟ್ರಿ… ನಿರ್ದೇಶಕರಿಗೆ ವೀಕ್ಷಕರ ಹಿಡಿ ಶಾಪ

First Published | Aug 24, 2024, 2:40 PM IST

ಅಮೃತಧಾರೆಯ ಇತ್ತೀಚಿನ ಎಪಿಸೋಡ್ ಗಳನ್ನು ನೋಡಿರುವ ವೀಕ್ಷಕರು ಚೆನ್ನಾಗಿರೋ ಸೀರಿಯಲ್ ಹಾಳು ಮಾಡಿದ್ರಿ ಎಂದು ನಿರ್ದೇಶಕರಿಗೆ ಹಿಡಿ ಶಾಪ ಹಾಕ್ತಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ಅಮೃತಧಾರೆ (Amruthadhare). ಆರಂಭದಲ್ಲಿ ತನ್ನ ಫಾಸ್ಟ್ ಆಗಿ ಹೋಗುವ ಕಥೆಯಿಂದಲೇ ಜನರನ್ನು ಸೆಳೆದಿದ್ದ ಧಾರಾವಾಹಿ ಇದೀಗ, ವೀಕ್ಷಕರಿಗೆ ಬೇಸರವನ್ನುಂಟು ಮಾಡಿದೆ. ಯಾಕಂದ್ರೆ ಎಲ್ಲಾದಕ್ಕಿಂದಲೂ ವಿಭಿನ್ನವಾದ ಸೀರಿಯಲ್ ಎಂದು ಅಂದುಕೊಂಡಿದ್ದ ಜನಕ್ಕೆ, ಅಮೃತಧಾರೆ ತಾನು ಎಲ್ಲಾ ಸೀರಿಯಲ್ ತರನೇ ಅನ್ನೋದನ್ನ ತೋರಿಸಿದೆ. 
 

ಅಷ್ಟಕ್ಕೂ ಸೀರಿಯಲ್ ನಲ್ಲಿ (Serial) ಸದ್ಯ ಆಗ್ತಿರೋದು ಏನು? ಅಪೇಕ್ಷಾ ಮತ್ತು ಪಾರ್ಥ ಪ್ರೀತಿ, ಮದುವೆಯನ್ನು ಸಹಿಸದ ಜೈದೇವ್, ಅವರಿಬ್ಬರು ಮದ್ವೆಯಾಗೋದನ್ನ ತಪ್ಪಿಸೋದಕ್ಕೆ ರೌಡಿಗಳನ್ನು ಬಿಟ್ಟು, ಇಬ್ಬರ ಕೊಲೆ ಮಾಡಿಸೋವಷ್ಟು ಕೀಳುಮಟ್ಟದ ಸಹಾಸಕ್ಕೆ ಇಳಿದಿದ್ದ. ಕೊನೆಗೆ ಗೌತಮ್ ಬಂದು ಅಪೇಕ್ಷಾ -ಪಾರ್ಥರನ್ನು ರಕ್ಷಣೆ ಮಾಡಿದ್ದು ಆಯ್ತು. 
 

Tap to resize

ಈ ಟೈಮಲ್ಲಿ ಸಿಕ್ಕಿಬಿದ್ದ ರೌಡಿ ಒಬ್ಬನನ್ನು ವಿಚಾರಣೆ ಮಾಡಿದ ಗೌತಮ್ ದಿವಾನ್ ಜೀವದ ಗೆಳೆಯನಿಗೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಅದೇನಂದ್ರೆ ಇದನ್ನೆಲ್ಲಾ ಮಾಡಿಸಿದ್ದು ಜೈದೇವ್ (Jaidev) ಅನ್ನೋ ವಿಷ್ಯ. ಜೈದೇವ್ ಕೆನ್ನೆಗೆ ಭಾರಿಸಿ, ಎಂತಹ ದ್ರೋಹ ಮಾಡಿದ್ದಿ ಅಂತ ಬುದ್ದಿ ಹೇಳಿಯೂ ಬಂದಿದ್ದ ಆನಂದ್, ಆದರೆ ಜೈದೇವ್ ಕುತಂತ್ರ ಬುದ್ದಿ ಸುಮ್ಮನಿರಬೇಕಲ್ಲ, ಎಲ್ಲಾದರೂ ತನ್ನ ನಾಟಕ ಬಯಲಾಗೋ ಭಯದಲ್ಲಿ ಆನಂದ್ ಮೇಲೆ ಗಾಡಿ ಹತ್ತಿಸುವಂತೆ ಮಾಡಿದ್ದಾನೆ ಕೆಡಿ ಜೆಡಿ. 
 

ಸದ್ಯ ಆನಂದ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೌತಮ್, ಭೂಮಿ, ಅಪರ್ಣಾ ಆಸ್ಪತ್ರೆಯಲ್ಲಿ ಆನಂದ್ ಉಳಿವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಆನಂದ್ ಗೆ ಪ್ರಜ್ಞೆ ಇನ್ನೂ ಬಂದಿಲ್ಲ, ಬರುತ್ತಾ ಅಂತಾನೂ ಗೊತ್ತಿಲ್ಲ. ಆನಂದ್ ಕೋಮಾಕ್ಕೆ ಜಾರಿದ್ದಾರೆ ಅಂತಾನೂ ಹೇಳಲಾಗುತ್ತಿದೆ. ಇದನ್ನೆಲ್ಲಾ ನೋಡಿ ವೀಕ್ಷಕರು ಕೋಪಗೊಂಡಿದ್ದಾರೆ. 
 

ಈ ಸೀರಿಯಲ್ ಒಂದೇ ಸೂಪರ್ ಅಂತ ಅನ್ಕೊಂಡಿದ್ದೆ, ಆದ್ರೆ ಈವಾಗ ಎಲ್ಲಾ ಸೀರಿಯಲ್ ತರಾನೇ ಇದು ಕೂಡ ಆಗಿದೆ. ತುಂಬಾ ಬೇಜಾರಾಗ್ತಿದೆ ಸೀರಿಯಲ್ ನೋಡೋದಕ್ಕೆ, ಬರಿ ವಿಲನ್ ಗಳದ್ದೇ ಅಬ್ಬರ ಜೋರಾಗಿದೆ. ಮೊದಲು ಸೀರಿಯಲ್ ಎಷ್ಟು ಚೆನ್ನಾಗಿತ್ತು, ಡೈರೆಕ್ಟರ್ ಎಲ್ಲಾನೂ ಹಾಳು ಮಾಡ್ಬಿಟ್ರಿ ನೀವು ಎಂದು ನಿರ್ದೇಶಕರಿಗೇ ಹಿಡಿ ಶಾಪ ಹಾಕಿದ್ದಾರೆ. 
 

ಅಷ್ಟೇ ಅಲ್ಲ ರೀ ಡೈರೆಕ್ಟರ್ ಗೌತಮ್ ಮತ್ತು ಭೂಮಿಕಾ ಪಾತ್ರದ ಸ್ಟ್ರಾಂಗ್ ಮಾಡಿ, ಇಲ್ಲಾ ಅಂದ್ರೆ ಸೀರಿಯಲ್ ನೋಡೋದಕ್ಕೆ ಚೆನ್ನಾಗಿರಲ್ಲ. ಸೀರಿಯಲ್ ಸುಮ್ಮನೆ ಎಳಿತಾ ಇದ್ದೀರಾ. ನಿರ್ದೇಶಕರಿಗೆ (director) ತಲೆ ಕೆಟ್ಟಿದೆ ಅನ್ಸತ್ತೆ, ಅದಕ್ಕೆ ಒಂದೊಳ್ಳೆ ಧಾರಾವಾಹಿನ ಹಾಳು ಮಾಡ್ತಿದ್ದಾರೆ ಎಂದು ಸಹ ಹೇಳಿದ್ದಾರೆ. 
 

ಏನಾಗ್ತಿದೆ ಈ ಧಾರಾವಾಹಿಯಲ್ಲಿ. ಮೊದಲೆಲ್ಲಾ ಭೂಮಿಕಾ- ಆನಂದ್ ಪಾತ್ರ ತುಂಬಾ ಒಳ್ಳೆ ರೀತಿಯಲ್ಲಿ ತೋರಿಸಿದ್ರಿ. ಆದರೆ ಈಗ ಜೈದೇವ್, ಅವರ ಅಮ್ಮ ಶಕುಂತಲಾ, ಅಪೇಕ್ಷಾ,.. ಎಲ್ಲಾ ವಿಲನ್ ಗಳು ಗೆಲ್ತಿದ್ದಾರೆ. ಆದರೆ ಆನ್ಂದ್ ಭೂಮಿ ಸೈಲೆಂಟ್ ಆಗೋಗಿದ್ದಾರೆ. ಇದೊಂದು ಸೀರಿಯಲ್ ನೋಡೋದಕ್ಕೆ ಚೆನ್ನಾಗಿ ಇದ್ದದ್ದು, ಈವಾಗ ಆ ಸೀರಿಯಲ್ ಕೂಡ ಹಾಳಾಗಿದೆ. ಮಿಸ್ಟರ್ ಡೈರೆಕ್ಟರ್, ಸ್ವಲ್ಪ ಟ್ವಿಸ್ಟ್ ಕೊಡಿ, ಎಲ್ಲಾ ಕುಟುಂಬ ಸಮೇತವಾಗಿ ನೋಡೊ ಸೀರಿಯಲ್ ನಂ 1 ಆಗುತ್ತೆ. ಈ ರೀತಿ ಕಥೆ ಮಾಡಿ ಸೀರಿಯಲ್ ಹಾಳು ಮಾಡ್ಬೇಡಿ ಎಂದಿದ್ದಾರೆ. 
 

Latest Videos

click me!