Reels Reshma: ಒಂದಿನ ಗಂಡ ಹೊಡೆಯುತ್ತಾನೆ, ಬೈತಾನೆ, ಗಂಡ ಪ್ರೀತಿ ಮಾಡ್ತಾನೆ ಎಂದೆಲ್ಲ ಹೇಳಿಕೊಂಡು ವಿಡಿಯೋ ಮಾಡುತ್ತಿದ್ದ ರೇಷ್ಮಾ ಆಂಟಿ ಈಗಾಗಲೇ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಭಾಗಿ ಆಗಿದ್ದರು. ಇವರನ್ನು ಬೈಯ್ಯುವವರೇ ಜಾಸ್ತಿ ಇದ್ದರೂ ಕೂಡ, ವೈಯಕ್ತಿಕ ಬದುಕಿನ ಕರಾಳ ವಿಷಯಗಳು ಅನೇಕರಿಗೆ ಗೊತ್ತಿಲ್ಲ.
ಈಗ ನವೀನ್ ಕುಮಾರ್ ಎನ್ನುವವರ ಜೊತೆ ರೇಷ್ಮಾ ಆಂಟಿ ಅವರು ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ವಿಡಿಯೋ ಮಾಡುತ್ತಿರುತ್ತಾರೆ. ಈ ವಿಡಿಯೋಗಳಿಗೆ ಪಾಸಿಟಿವ್‌ಗಿಂತ ನೆಗೆಟಿವ್ ಪ್ರತಿಕ್ರಿಯೆ ಜಾಸ್ತಿ ಬರುವುದು.
26
ತವರು ಮನೆಯವರು ಮಾತಾಡಲ್ಲ
ರೇಷ್ಮಾ ರೀಲ್ಸ್ ನೋಡಿ ಅವರ ಪತಿ ಬಾಯಿಗೆ ಬಂದ ಹಾಗೆ ಬೈದು, ಸಾ*ಯಿ ಎಂದು ಕೂಡ ಹೇಳಿದ್ದರಂತೆ. ಇದನ್ನು ಅವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಇದು ಇನ್ನಷ್ಟು ವೈರಲ್ ಆಯ್ತು. ತಾಯಿ, ಪತಿ ವಿರೋಧದ ಮಧ್ಯೆ ಅವರು ರೀಲ್ಸ್ ಮಾಡೋದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರೀಲ್ಸ್ ಮಾಡುತ್ತಾರೆ ಎಂದು ಇವರ ತವರು ಮನೆಯವರು ಫೋನ್ ರಿಸೀವ್ ಮಾಡಲ್ವಂತೆ, ಬ್ಲಾಕ್ ಕೂಡ ಮಾಡಿದ್ದಾರಂತೆ.
36
ಲವ್ ಮ್ಯಾರೇಜ್ ಆಯ್ತು
ಆಸ್ಪತ್ರೆಯೊಂದರಲ್ಲಿ ರೇಷ್ಮಾ ಕೆಲಸ ಮಾಡುತ್ತಿದ್ದರು, ಅಲ್ಲಿ ಅವರ ಪತಿ ಬಂದಿದ್ದರು. ಆ ಆಸ್ಪತ್ರೆ ಕಟ್ಟಡಕ್ಕೆ ಇವರ ಪತಿ ಮರಳು ಪೂರೈಕೆ ಮಾಡುತ್ತಿದ್ದರು. ಅಲ್ಲಿ ಇವರಿಬ್ಬರ ಮಧ್ಯೆ ಸ್ನೇಹ ಆಗಿ, ಪ್ರೀತಿ ಶುರುವಾಯ್ತು. ಮನೆಯವರ ವಿರೋಧದ ಮಧ್ಯೆ ಇವರು ಮದುವೆಯಾದರು.
ಮದುವೆಯಾಗಿ ಪ್ರಗ್ನೆಂಟ್ ಆದಬಳಿಕ ಗಂಡನಿಗೆ ಮೊದಲೇ ಮದುವೆ ಆಗಿದೆ, ಮೊದಲ ಪತ್ನಿಗೆ ಮಕ್ಕಳಾಗಿಲ್ಲ ಎಂದು ಗೊತ್ತಾಗಿದೆ. ಮೊದಲ ಪತ್ನಿ ಜೀವನ ಹಾಳು ಮಾಡಿದರು ಎಂದು ರೇಷ್ಮಾಗೆ ಕೆಲವರು ಬೈದರಂತೆ. ಮೊದಲ ಪತ್ನಿಗೆ ಮಕ್ಕಳಾಗಿದ್ದರೆ ಬಹುಶಃ ನನ್ನನ್ನು ಅವರು ಮದುವೆ ಆಗುತ್ತಿರಲಿಲ್ಲ ಎಂದು ಕಾಣುತ್ತದೆ. ನನ್ನ ಗಂಡನ ಮೊದಲ ಪತ್ನಿಯನ್ನು ನಾನು ಇದುವರೆಗೂ ನೋಡಿಲ್ಲ. ಒಂದೇ ಏರಿಯಾದಲ್ಲಿ ನಾವು, ಅವರು ಇದ್ದೆವು, ಆದರೆ ನಾನು ಅವರನ್ನು ನೋಡಿಲ್ಲ.
56
ಮನೆಯಿಂದ ಹೊರಗಡೆ ಬರೋ ಯೋಚನೆ ಇತ್ತು
ಮಗು ಸಾಕ್ತೀನಿ ಎಂದು ನಾನು ಹೊರಗಡೆ ಬಂದಿದ್ದೆ. ಇದೆಲ್ಲ ಬೇಡ ಎಂದು ಅನಿಸಿತ್ತು. ಆಮೇಲೆ ನನ್ನ ಗಂಡ ಬಂದು, ಮಕ್ಕಳಾಗಿಲ್ಲ, ಅದಿಕ್ಕೆ ನಾನು ನಿನ್ನ ಮದುವೆ ಆದೆ ಎಂದು ಮನವೊಲಿಸಿದರು ಎಂದು ರೇಷ್ಮಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇವರು ಮದುವೆಯಾಗಿ 18 ವರ್ಷಗಳಾಗಿವೆ.
66
ರೌಡಿಯಾಗಿದ್ದ ಗಂಡ ಬದಲಾದ
ಮೊದಲು ನನ್ನ ಗಂಡ ರೌಡಿ ಆಗಿದ್ದರು, ಯಾರದ್ದೋ ತಲೆ ಮೇಲೆ ಕಲ್ಲು ಹಾಕಿ ಎರಡು ವರ್ಷ ಜೈಲಿನಲ್ಲಿದ್ದರು, ನಾನು ಅವರನ್ನು ಬದಲಾಯಿಸಿದ್ದೇನೆ, ಮಕ್ಕಳಾದಮೇಲೆ ಅವರು ಬದಲಾದರು. ನಾನ ಅವರಿಗೆ ಆಟೋ ಓಡಿಸಿದೆ. ಬೇರೆಯವರ ಮನೆ ಕೆಲಸ ಮಾಡಿದೆ, ಬತ್ತಿ ಉಜ್ಜೋಕೆ ಹೋಗುತ್ತಿದ್ದೆ, ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದೆ ಎಂದು ರೇಷ್ಮಾ ಹೇಳುತ್ತಾರೆ. ಗರ್ಭಿಣಿಯಾದ್ಮೇಲೆ ಅವರಿಗೆ ಒಂದು ಹೊತ್ತು ಊಟಕ್ಕೂ ಪರದಾಡೋ ಸ್ಥಿತಿ ಇತ್ತಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.