Saregamapa Lil Champs ಖ್ಯಾತ ನಟನ ಪುತ್ರ ಹರುಷ್, ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಮಗನಿಗೆ ತನ್ನಂತೆ 'ನಟನ ಮಗ' ಎಂಬ ಲೇಬಲ್ ಬೇಡ, ಬದಲಿಗೆ ಮಗನಿಂದ ತಾನು ಗುರುತಿಸಿಕೊಳ್ಳಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪಕ್ಕೆ ಚಂದನವನದ ನಟನ ಪುತ್ರ ಹರುಷ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹರುಷ್ ಅವರ ತಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಖ್ಯಾತ ಧಾರವಾಹಿಯ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದರು. ವಿಷ್ಣುವರ್ಧನ್ ಸೇರಿದಂತೆ ಸ್ಟಾರ್ ನಟರೊಂದಿಗೆ ನಟಿಸಿದ್ದು, ಒಳ್ಳೆಯ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.
25
ಯಾರು ಆ ನಟ?
ನವಿಲೇ ಹೇ ನವಿಲೇ ಹಾಡು ಹೇಳಿ ಹರುಷ್ ಎಂಬ ಸ್ಪರ್ಧಿ ಆಯ್ಕೆಯಾಗುತ್ತಾರೆ. ತೀರ್ಪುಗಾರರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಾಡುಗಳನ್ನು ಕೇಳಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ. ಅದೇ ರೀತಿಯಲ್ಲಿಯೇ ಹರುಷ್ ಸಹ ಆಯ್ಕೆಯಾಗಿದ್ದರು. ಸ್ಪರ್ಧಿ ಆಯ್ಕೆ ಬಳಿಕ ಪೋಷಕರು ವೇದಿಕೆಗೆ ಬಂದಾಗ ತೀರ್ಪುಗಾರರು ಸಂತೋಷದಿಂದ ಶಾಕ್ ಆದರು.
35
ನಿರ್ದೇಶಕ, ಗಾಯಕ, ಕಲಾವಿದ
ಚಂದನವನದ ಕಲಾವಿದ ನವೀನ್ ಕೃಷ್ಣ ಅವರ ಪುತ್ರ ಹರುಷ್ ಇಂದು ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ. ಹರುಷ್ ಎಲ್ಲಾ ಸ್ಪರ್ಧಿಗಳಂತೆಯೇ ಮೊದಲಿನಿಂದಲೇ ಆಡಿಷನ್ ಕೊಟ್ಟು ಇಲ್ಲಿಗೆ ಬಂದಿದ್ದಾರೆ ಎಂದು ನಿರೂಪಕಿ ಅನುಶ್ರೀ ಅವರು ಹೇಳುತ್ತಾರೆ. ನವೀನ್ ಕೃಷ್ಣ ಅವರ ನಿರ್ದೇಶನದ ಶ್ರೀ ರಾಘವೇಂದ್ರ ಮಹಾತ್ಮೆ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಮಗ ಹರುಷ್ ಸ್ಪರ್ಧೆಗೆ ಆಯ್ಕೆಯಾಗುತ್ತಿದ್ದಂತೆ ಮಾತನಾಡಿದ ನವೀನ್ ಕೃಷ್ಣ, ಈ ಹಿಂದೆ ಇಬ್ಬರು ಮಕ್ಕಳು ಸಹ ಆಡಿಷನ್ ಕೊಟ್ಟಿದ್ದರು. ಆದ್ರೆ ಇಬ್ಬರು ಆಯ್ಕೆಯಾಗಿರಲಿಲ್ಲ. ಇಂದು ಮಗ ಹರುಷ್ ಎಲ್ಲಾ ಸ್ಪರ್ಧಿಗಳಂತೆ ಇಲ್ಲಿಗೆ ಬಂದು ನಿಂತಿದ್ದಾನೆ. ಈ ವೇದಿಕೆಗೆ ಬರಬೇಕು ಅಂದ್ರೆ ತುಂಬಾ ಕಲಿಕೆ ಮತ್ತು ಶ್ರದ್ಧೆ ಬೇಕಾಗುತ್ತದೆ. ತಪಸ್ಸು ಮಾಡಿದ್ರೆ ಮಾತ್ರ ಈ ವೇದಿಕೆ ಸಿಗುತ್ತದೆ. ಮಗ ಆಯ್ಕೆಯಾಗಿರೋದಕ್ಕೆ ಖುಷಿಯಾಗ್ತಿದೆ ಎಂದು ನವೀನ್ ಕೃಷ್ಣ ಸಂತಸ ವ್ಯಕ್ತಪಡಿಸಿದರು.
ನಿರಂತರ ಅಭ್ಯಾಸದಿಂದ ಈಗ ಒಂದು ಹಂತಕ್ಕೆ ಹಾಡುತ್ತಿದ್ದಾನೆ. ಇಂದು ಸರಿಗಮಪ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾನೆ. ಆರು ವರ್ಷದ ಹಿಂದೆ ಇಬ್ಬರು ಅಡಿಷನ್‌ಗೆ ಹೋಗಿದ್ರು. ಆದ್ರೆ ಸೆಲೆಕ್ಟ್ ಆಗಿರಲಿಲ್ಲ. ನನಗೆ ಶ್ರೀನಿವಾಸ್ ಮೂರ್ತಿ ಅವರ ಮಗ ಎಂಬ ಲೇಬಲ್ ನನಗಿದೆ. ಆದ್ರೆ ಇವನಿಗೆ ನವೀನ್ ಕೃಷ್ಣ ಮಗ ಎಂಬ ಲೇಬಲ್ ಬರಬಾರದು. ಹರುಷ್ ತಂದೆ ನವೀನ್ ಕೃಷ್ಣ ಎಂದು ಜನರು ನನ್ನನ್ನು ಗುರುತಿಸಬೇಕು ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.