Muddu Sose Serial: ಅಯ್ಯಯ್ಯೋ..ಅತಿ ಮುಖ್ಯವಾದ ಪಾತ್ರವನ್ನೇ ಮುಗಿಸಿಬಿಟ್ರಾ? ಏನ್ರೀ ಹಿಂಗಾಯ್ತೋ!

Published : Apr 19, 2026, 10:24 AM IST

Muddu Sose Kannada Serial: ಮುದ್ದು ಸೊಸೆ ಧಾರಾವಾಹಿಯಲ್ಲಿ‌ ತಾನು ಹುಟ್ಟಿದ ಮನೆಗೆ ಸುಭಾಷ್ ದ್ರೋಹ ಮಾಡಿದ್ದಾನೆ, ಎಷ್ಟೇ ಬಾರಿ ಬುದ್ಧಿ ಹೇಳಿದರೂ ಕೂಡ ಅವನು ಮಾತ್ರ ತಪ್ಪು ತಿದ್ದಿಕೊಳ್ಳಲ್ಲ, ಬದಲಾಗಿ ಒಂದಿಲ್ಲೊಂದು ಮೋಸ ಮಾಡುತ್ತಿದ್ದಾನೆ. ಈಗ ಅವನು ತನ್ನ ಮನೆಯವರನ್ನೇ ಕೊಂದಿದ್ದಾನೆ. 

PREV
14
ವಿದ್ಯಾ ಇಲ್ಲದ ಮನೆಯಲ್ಲಿ ಇನ್ನೊಂದು ಅವಘಡ

ಇನ್ನೊಂದು ಕಡೆ ತನ್ನ ಪತ್ನಿ ವಿದ್ಯಾ ಗರ್ಭಿಣಿಯಲ್ಲ ಎನ್ನೋಸ ಸತ್ಯ ಭದ್ರೇಗೌಡನಿಗೆ ಗೊತ್ತಾಗಿದೆ. ಅವಳು ಮೋಸಗಾತಿ ಎಂದು ಸಿಟ್ಟಿನಲ್ಲಿದ್ದಾನೆ. ಇಷ್ಟುದಿನ ವಿದ್ಯಾ ದುಷ್ಟರಿಂದ ಮನೆ ಕಾಪಾಡುತ್ತಿದ್ದಳು. ಆದರೆ ಈಗ ಅವಳು ಮನೆಯಲ್ಲೇ ಇಲ್ಲ. ವಿದ್ಯಾ ಇಲ್ಲದ ಮನೆಯಲ್ಲಿ ಇನ್ನೊಂದು ಅವಘಡ ಆಗಿದೆ. ಹಾಗಾದರೆ ಮುಂದೆ ಏನಾಗುವುದು?

24
ಶಿವರಾಮೇಗೌಡನಿಗೆ ಆಕ್ಸಿಡೆಂಟ್‌

ಇನ್ನೊಂದು ಕಡೆ ಸುಭಾಷ್‌ ಈಗ ಶಿವರಾಮೇಗೌಡನಿಗೆ ಆಕ್ಸಿಡೆಂಟ್‌ ಮಾಡಿಸಿದ್ದಾನೆ. ಬಹುಶಃ ಶಿವರಾಮೇಗೌಡ ಸಾಯುತ್ತಾನೆ ಎಂದು ಕಾಣುತ್ತಿದೆ. ಕಲರ್ಸ್‌ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

34
ಮುಂದೆ ಬೇರೆ ಟ್ವಿಸ್ಟ್‌ ಇಡಲಿದ್ದಾರಾ?

ಈ ಪ್ರೋಮೋ ನೋಡಿದರೆ ಶಿವರಾಮೇಗೌಡನ ಅಂತ್ಯ ಆಗಲಿದೆಯಾ ಎಂದು ಕಾಣುತ್ತಿದೆ. ಭದ್ರೇಗೌಡನಿಗೆ ತಂದೆ ಅಂದರೆ ಇಷ್ಟ. ಈಗ ತಂದೆ ಇಲ್ಲ ಅಂದ್ರೆ ಅವನು ಏನು ಮಾಡುತ್ತಾನೋ ಏನೋ! ಈ ಸೀರಿಯಲ್‌ನಲ್ಲಿ ಇದು ಅತೀ ಮುಖ್ಯವಾದ ಪಾತ್ರವಾಗಿದ್ದು, ಮುಂದೆ ಬೇರೆ ಟ್ವಿಸ್ಟ್‌ ಇಡಲಿದ್ದಾರಾ ಎಂದು ಕಾದು ನೋಡಬೇಕಿದೆ.

44
ಪಾತ್ರಧಾರಿಗಳು

ಶಿವರಾಮೇಗೌಡ ಪಾತ್ರದಲ್ಲಿ ಮುನಿ ಅವರು ನಟಿಸುತ್ತಿದ್ದಾರೆ. ಅಂದಹಾಗೆ ಭದ್ರೇಗೌಡ ಪಾತ್ರದಲ್ಲಿ ತ್ರಿವಿಕ್ರಮ್‌, ವಿದ್ಯಾ ಪಾತ್ರದಲ್ಲಿ ಪ್ರತಿಮಾ ಠಾಕೂರ್‌ ನಟಿಸುತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories