ದಶಕದ ಪ್ರೀತಿಯನ್ನು ಸೈಲೆಂಟ್‌ ಆಗಿ ಸಂಭ್ರಮಿಸಿದ ರಿಷಭ್‌ ಶೆಟ್ಟಿ, 'ಇದೇ ಬದುಕಿನ ಅತಿದೊಡ್ಡ ಅಚ್ಚರಿ' ಎಂದ ಡಿವೈನ್‌ ಸ್ಟಾರ್‌!

Published : Jan 24, 2026, 08:55 PM IST

ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ತಮ್ಮ ಪ್ರೀತಿಗೆ 10 ವರ್ಷ ತುಂಬಿದ ಸಂಭ್ರಮವನ್ನು ಆಚರಿಸಿದ್ದಾರೆ. ಈ ವಿಶೇಷ ದಿನದಂದು ರಿಷಭ್, ತಮ್ಮ ಪ್ರೀತಿಯ ಪಯಣವನ್ನು 'ಬದುಕಿನ ಸುಂದರ ಅಚ್ಚರಿ' ಮತ್ತು 'ಅತ್ಯಂತ ಸುಂದರವಾದ ಚಿತ್ರಕಥೆ' ಎಂದು ಬಣ್ಣಿಸಿದ್ದಾರೆ.

PREV
17

ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಪ್ರೀತಿಗೆ ಜನವರಿ 23 ರಂದು 10 ವರ್ಷಗಳ ಸಂಭ್ರಮ. ಇದನ್ನು ರಿಷಭ್‌ ಶೆಟ್ಟಿ ಸೈಲೆಂಟ್‌ ಆಗಿ ಆಚರಣೆ ಮಾಡಿದ್ದಾರೆ.

27

ಪತ್ನಿ ಪ್ರಗತಿ ಜೊತೆ ಚಿಕ್ಕ ಕೇಕ್‌ ಕತ್ತರಿಸಿ ಬದುಕಿನ ಸಂಭ್ರಮವನ್ನು ಆಚರಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

37

'ಸಿನಿಮಾನೇ ಸಂಗಾತಿಯಾಗಿದ್ದ ನನಗೆ, ನನ್ನ ಮೊದಲ ಸಿನಿಮಾದ ಷೋ ಒಂದರಲ್ಲೇ ಬಾಳಸಂಗಾತಿಯ ಭೇಟಿಯಾದದ್ದು ಬದುಕಿನ ಸುಂದರ ಅಚ್ಚರಿಗಳಲ್ಲಿ ಒಂದು' ಎಂದು ಬರೆದುಕೊಂಡಿದ್ದಾರೆ.

47

ಕನಸುಗಳನ್ನು ಕಟ್ಟುವ ಸಣ್ಣ ಭೇಟಿಗಳು, ನಿಮ್ಮೊಂದಿಗಿನ ಪ್ರತಿ ಕ್ಷಣವೂ ನಾನು ಇದುವರೆಗೆ ಬದುಕಿದ ಅತ್ಯಂತ ಸುಂದರವಾದ ಚಿತ್ರಕಥೆಯಂತೆ ಭಾಸವಾಗುತ್ತದೆ. ಪ್ರೀತಿಯಲ್ಲಿ ಅದಮ್ಯವಾಗಿ ಬಿದ್ದ 10 ವರ್ಷಗಳು ಮತ್ತು ಇನ್ನೂ ಒಂದು ಜೀವಿತಾವಧಿ ಇಲ್ಲಿದೆ.ಕೋಟಿ ನೆನಪಗಳನ್ನು ಮತ್ತೆ ಹಸಿರಾಗಿಸುತ್ತಾ ಎಂದು ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

57

ಹತ್ತನೇ ವರ್ಷದ ಪ್ರೀತಿಯ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ರಿಷಭ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಗೆ ರಣ್ವಿತ್‌ ಹಾಗೂ ರಾಧ್ಯಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

67

ಜ.23 ರಂದು ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ರಿಷಭ್‌ ಶೆಟ್ಟಿ, 'ಪ್ರೀತಿಗೆ ಪ್ರೀತಿಯಾಗಿ ನಗುವಿಗೆ ನಗುವಾಗಿ ಬಿಂಬಕ್ಕೆ ಪ್ರತಿಬಿಂಬವಾಗಿ ಕೊನೆ ಕಾಣದ ಸೇತುವೆಯಂತೆ ಸದಾ ನನಗಾಗಿ ನಿಂತ ಪ್ರೀತಿಗೆ ದಶಕದ ಸಂವತ್ಸರ...' ಎಂದು ಬರೆದುಕೊಂಡಿದ್ದರು.

77

ಕಾಂತಾರ ಚಾಪ್ಟರ್‌-1 ಯಶಸ್ಸಿನ ಬಳಿಕ ರಿಷಭ್‌ ಶೆಟ್ಟಿ ತಮ್ಮ ನಿರ್ದೇಶನದ ಹೊಸ ಚಿತ್ರ ಪ್ರಕಟಿಸಿಲ್ಲ. ಬದಲಾಗಿ ನಟನೆಗೆ ಮುಂದಾಗಿದ್ದು, ಜೈ ಹನುಮಾನ್‌ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories