ಬಿಗ್ ಬಾಸ್ ಗಿಲ್ಲಿಗೆ 2 ಮಿಲಿಯನ್ ಫಾಲೋವರ್ಸ್ ದಾಖಲೆ, ನಿವೇದಿತಾಗೆ ಠಕ್ಕರ್ ಕೊಡ್ತನಾ ಚಾಂಪಿಯನ್?

Published : Jan 24, 2026, 07:31 PM IST

ಬಿಗ್ ಬಾಸ್ ಗಿಲ್ಲಿಗೆ 2 ಮಿಲಿಯನ್ ಫಾಲೋವರ್ಸ್ ದಾಖಲೆ, ಬಿಗ್ ಬಾಸ್ 12ರ ಮೂಲಕ ಜನರ ಮನಸ್ಸು ಗೆದ್ದಿರುವ ಗಿಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ನಿವೇದಿತಾ ಗೌಡ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

PREV
16
ಗಿಲ್ಲಿ ನಟನ ಫಾಲೋವರ್ಸ್ ದಾಖಲೆ

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹೊಸ ದಾಖಲೆ ಬರೆದಿದ್ದಾರೆ.ಇದೀಗ ಗಿಲ್ಲಿ ನಟ ಇನ್‌ಸ್ಟಾಗ್ರಾಂನಲ್ಲಿ 2 ಮಿಲಿಯನ್ ಫಾಲೋವರ್ಸ್ ಗಡಿ ದಾಟಿದ್ದಾರೆ. ವಿಶೇಷ ಅಂದರೆ ಅತೀ ಕಡಿಮೆ ಸಮಯದಲ್ಲಿ 1 ಮಿಲಿಯನ್‌ ಇನ್‌ಸ್ಟಾಗ್ರಾಂ ಫಾಲೋವರ್ಸ್‌ನಿಂದ 2 ಮಿಲಿಯನ್ ಫಾಲೋವರ್ಸ್ ತಲುಪಿದ್ದಾರೆ. ಪ್ರತಿ ದಿನ ಗಿಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

26
ಈ ಪ್ರೀತಿಗೆ ಎಂದೆಂದು ಋಣಿ

ಇನ್‌ಸ್ಟಾಗ್ರಾಂನಲ್ಲಿ 2 ಮಿಲಿಯನ್ ಫಾಲೋವರ್ಸ್ ಗಡಿ ದಾಟುತ್ತಿದ್ದಂತೆ ಗಿಲ್ಲಿ ನಟ ಸೋಶಿಯಲ್ ಮೀಡಿಯಾ ಮೂಲಕ ಸಂತಸ ಹಂಚಿಕೊಂಡಿದ್ದಾರೆ. 2M ಅಂದ್ರೆ ಸಾಮಾನ್ಯ ಅಲ್ವೇ ಅಲ್ಲ .. ಇಂದು 2M ಮನಸ್ಸುಗಳನ್ನ ತಲುಪಿರೋ ಖುಷಿನ ಹೇಳೋಕೆ ಪದಗಳೇ ಇಲ್ಲ. ಒಟ್ಟಾಗಿ ನಗು ನಗುತ್ತಾ ಇರೋಣ. ಈ ಪ್ರೀತಿಗೆ ಎಂದೆಂದು ಋಣಿ ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

36
ಶೀಘ್ರದಲ್ಲೇ ನಿವೇದಿತಾ ಗೌಡ ದಾಖಲೆ ಬ್ರೇಕ್

ಬಿಗ್ ಬಾಸ್ ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟನ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಪ್ರತಿ ದಿನ ದುಪ್ಪಟ್ಟಾಗುತ್ತಿದೆ. ಸದ್ಯ ಗಿಲ್ಲಿಯ ಫಾಲೋವರ್ಸ್ ವೇಗ ನೋಡಿದರೆ ಶೀಘ್ರದಲ್ಲೇ ನಿವೇದಿತಾ ಗೌಡ ದಾಖಲೆ ಮುರಿಯಲಿದ್ದಾರೆ. ಕನ್ನಡ ಬಿಗ್ ಬಾಸ್ ಸ್ಪರ್ದಿಗಳ ಪೈಕಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಸೆಲೆಬ್ರೆಟಿ ಎಂಬ ಹೆಗ್ಗಳಿಕೆಗೆ ನಿವೇದಿತಾ ಗೌಡ ಪಾತ್ರರಾಗಿದ್ದಾರೆ.

46
ಗಿಲ್ಲಿ 2 ಮಿಲಿಯನ್, ನಿವೇದಿತಾ ಗೌಡ ಫಾಲೋವರ್ಸ್ ಎಷ್ಟು

ಬಿಗ್ ಬಾಸ್ ಸ್ಪರ್ಧಿಯಾಗಿ ಭಾರಿ ಗಮನಸೆಳೆದಿದ್ದ ನಿವೇದಿತಾ ಗೌಡ ಸದ್ಯ ಇನ್‌ಸ್ಟಾಗ್ರಾಂನಲ್ಲಿ 2.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತ 2 ಮಿಲಿಯನ್ ಫಾಲೋವರ್ಸ್ ಗಡಿ ತಲುಪಿದ್ದಾರೆ. ಶೀಘ್ರದಲ್ಲೇ ಗಿಲ್ಲಿ ನಟ ನಿವೇದಿತಾ ಗೌಡ ದಾಖಲೆ ಪುಡಿಮಾಡುವ ಸಾಧ್ಯತೆ ಇದೆ.

56
ಜನಮನ್ನಣೆ ಗಳಿಸಿದ ಗಿಲ್ಲಿ

ಬಿಗ್ ಬಾಸ್ ಕನ್ನಡ ಆವೃತ್ತಿಗಳಲ್ಲಿ ಜನರು ಅತೀವ ಕ್ರೇಜ್‌ನಿಂದ ವೀಕ್ಷಿಸಿದ ಆವೃತ್ತಿ ಬಿಗ್ ಬಾಸ್ 12. ಗಿಲ್ಲಿ ನಟನಿಂದ ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿಯಾಗಿತ್ತು. ಗಿಲ್ಲಿ ಅಭಿಮಾನಿಗಳು ಬಳಗೆ ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಹೋಗಿತ್ತು. ವಿಶೇಷ ಅಂದರೆ ಫಿನಾಲೆ ಹೋರಾಟದಲ್ಲಿ ಬರೋಬ್ಬರಿ 40 ಕೋಟಿ ಮತಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ದಾಖಲೆ ಬರೆದಿದ್ದರು. ಇದು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಗರಿಷ್ಠ ಮತವಾಗಿತ್ತು.

66
ಗಿಲ್ಲಿಗಾಗಿ ವಿಶೇಷ ಪೂಜೆ, ಅದ್ಧೂರಿ ಸನ್ಮಾನ

ಗಿಲ್ಲಿ ನಟ ಬಿಗ್ ಬಾಸ್ ಫಿನಾಲೆ ತಲುಪುತ್ತಿದ್ದಂತೆ ಅಭಿಮಾನಿಗಳು ವಿಶೇಷ ಪೂಜೆ ಮಾಡಿದ್ದರು. ಅನ್ನದಾನ, ಬೈಕ್ ರ್ಯಾಲಿ ಸೇರಿದಂತೆ ಹಲವು ಮೆರವಣಿಗೆಗಳು ನಡೆದಿತ್ತು. ಫಿನಾಲೆ ದಿನ ಜಾಲಿವುಡ್ ಸ್ಟುಡಿಯೋ ಮುಂದೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಗಿಲ್ಲಿಗೆ ಜೈಕಾರ ಹಾಕಿದ್ದರು. ಇತ್ತ ಪೊಲೀಸರು ಲಗು ಲಾಠಿ ಚಾರ್ಜ್ ನಡೆಸಿ ಅಭಿಮಾನಿಗಳ ಚದುರಿಸುವ ಅನಿವಾರ್ಯತೆ ಎದುರಾಗಿತ್ತು.

ಗಿಲ್ಲಿಗಾಗಿ ವಿಶೇಷ ಪೂಜೆ, ಅದ್ಧೂರಿ ಸನ್ಮಾನ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories