ಚಾರು ಜೊತೆ ಕೆಂಪು ಸೀರೆಯಲ್ಲಿ‌ ಮಿಂಚ್ತಿರೋ ಚೆಲುವೆ ರೂಪದಲ್ಲಿರೋ ಈ ಚೆಲುವ ಯಾರು?

Published : Nov 08, 2024, 01:05 PM ISTUpdated : Nov 08, 2024, 01:27 PM IST

ರಾಮಾಚಾರಿ ಧಾರಾವಾಹಿ ನಟಿ ಮೌನ ಗುಡ್ಡೆಮನೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಬ್ಬ ಚೆಲುವೆ ಜೊತೆ ಫೋಟೊ ಶೇರ್ ಮಾಡಿದ್ದು, ಆ ಚೆಲುವೆ ಯಾರು ಅನ್ನೋದನ್ನ ಗೆಸ್ ಮಾಡಿ.   

PREV
16
ಚಾರು ಜೊತೆ ಕೆಂಪು ಸೀರೆಯಲ್ಲಿ‌ ಮಿಂಚ್ತಿರೋ ಚೆಲುವೆ ರೂಪದಲ್ಲಿರೋ ಈ ಚೆಲುವ ಯಾರು?

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರದ ಮೂಲಕ ಮಿಂಚುತ್ತಿರುವ ನಟಿ ಮೌನ ಗುಡ್ಡೆ (Mouna Guddemane) ಮನೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರ್ತಾರೆ ಅನ್ನೋದು ಗೊತ್ತೆ ಇದೆ. ನಟಿ ಪ್ರತಿದಿನ ಒಂದಲ್ಲ ಒಂದು ಪೋಸ್ಟ್ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರ್ತಾರೆ. ಇದೀಗ ಹೊಸ ಫೋಟೊ ಶೇರ್ ಮಾಡಿದ್ದು, ಭಾರಿ ಸದ್ದು ಮಾಡ್ತಿದೆ. 
 

26

ಚಾರು ಕೆಂಪು ಸೀರೆಯುಟ್ಟು ಮುದ್ದಾಗಿ ಕಾಣಿಸುತ್ತಿದ್ದು, ಕೆಂಪು ಸೀರೆಯುಟ್ಟ ಮತ್ತೊಬ್ಬ ನಟಿಯ ಜೊತೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ, ಅಷ್ಟೇ ಅಲ್ಲ ಯಾರು ಈ ಚೆಲುವೆ? ನಿನ್ನ ಹೆಜ್ಜೆಯಲ್ಲೇ ಚಂದ್ರನ ಮೃದು ಬೆಳಕು ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. 
 

36

ಮೌನ ಗುಡ್ಡೆಮನೆ ಹಾಕಿರೋ ಫೋಟೊ ನೋಡಿದ್ರೆ, ಆ ಚೆಲುವೆ ಯಾರು ಅನ್ನೋದು ನಿಮಗೆ ಗೊತ್ತಾಗಿದ್ಯಾ? ಗೊತ್ತಾಗಿಲ್ವಾ? ಖಂಡಿತಾ ಗೊತ್ತಾಗಿರುತ್ತೆ ಅನ್ಸತ್ತೆ. ಎಷ್ಟೊಂದು ಹೈಟ್, ವೈಟ್ ಪರ್ಸನಾಲಿಟಿ ಇರುವ ಈ ಸುಂದರಿ… ಅಲ್ಲಲ್ಲ ಸುಂದರ ಬೇರಾರು ಅಲ್ಲ ರಾಮಾಚಾರಿ. 
 

46

ಹೌದು, ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ (Rithvik Kripakar), ತಮ್ಮ ಪಾತ್ರಕ್ಕಾಗಿ ತಮ್ಮ ರೂಪವನ್ನೇ ಬದಲಾಯಿಸಿ, ಈಗ ಹುಡುಗಿಯಾಗಿದ್ದಾರೆ. ಕೆಂಪು ಸೀರೆ, ಕೈತುಂಬಾ ಬಳೆ, ಕುತ್ತಿಗೆಯಲ್ಲಿ ಮುತ್ತಿನ ಹಾರ, ಮೂಗಿನಲ್ಲಿ ಮೂಗುತ್ತಿ, ಹಣೆ ಮೇಲೆ ಬಿಂದಿ ಇಟ್ಟುಕೊಂಡು ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ ರಿತ್ವಿಕ್ ಕೃಪಾಕರ್. 
 

56

ಯಾಕಪ್ಪಾ ರಿತ್ವಿಕ್ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಅಂದ್ರೆ, ಕಥೆಯೇ ಹಾಗಿದೆ. ರುಕ್ಮಿಣಿಯನ್ನು ಕರೆದೊಯ್ಯಲು ಬಂದಿರುವ ಚಾರು ಸದ್ಯ ಆಕೆಯ ಮನೆಯಲ್ಲಿ ಲಾಕ್ ಆಗ್ಬಿಟ್ಟಿದ್ದಾರೆ. ತನ್ನ ಪ್ರೀತಿಯ ಹೆಂಡ್ತಿಯನ್ನು, ತಮ್ಮ ಕೃಷ್ಣನ ಪ್ರೀತಿಯನ್ನು ಉಳಿಸಿಕೊಳ್ಳೋದಕ್ಕೆ ರಾಮಾಚಾರಿ ರಿಸ್ಕ್ ತೆಗೆದುಕೊಂಡಿದ್ದಾನೆ. 
 

66

ತನ್ನ ಗೆಟಪ್ ಬದಲಾಯಿಸಿ,  ಹುಡುಗಿಯಂತೆ ವೇಷ ತೊಟ್ಟು ಚಾರು, ರುಕ್ಮಿಣಿ ಇರೋ ಮನೆಯಲ್ಲಿ ಸೇರಿಕೊಂಡಿದ್ದಾನೆ ರಾಮಾಚಾರಿ. ಸದ್ಯಕ್ಕಂತೂ ರಾಮಾಚಾರಿಯ ಸೀರೆ ಫೋಟೊಗಳು ವೈರಲ್ ಆಗ್ತಿವೆ. ಅಭಿಮಾನಿಗಳು ಕೂಡ ರಾಮಾಚಾರಿ ಹೊಸ ಅವತಾರ ನೋಡಿ ಇಂಪ್ರೆಸ್ ಆಗಿದ್ದು, ರಿತ್ವಿಕ್ ಒಬ್ಬ ಉತ್ತಮ ನಟ ಹೌದು, ಇದೀಗ ಈ ಪಾತ್ರಕ್ಕೆ ಡೆಡಿಕೇಶನ್, ನಟನೆ ಎಲ್ಲವೂ ಬೆಂಕಿ ಎಂದಿದ್ದಾರೆ. ಅಷ್ಟೇ ಅಲ್ಲ ಈ ಚೆಲುವೆ ಮುಂದೆ ಚಾರು ಸೌಂದರ್ಯ ಕೂಡ ಕಾಣೋದೆ ಇಲ್ಲ ಎಂದಿದ್ದಾರೆ. 
 

Read more Photos on
click me!

Recommended Stories