ಕೊನೆಗೂ ಬಂದೇ ಬಿಟ್ರು ಕೀರ್ತಿ… ಫಲಿಸಿದ ಅಭಿಮಾನಿಗಳ ಆಸೆ, ಇನ್ನಾದ್ರೂ ಕಾವೇರಿ ಆಟಕ್ಕೆ ಬ್ರೇಕ್ ಬೀಳುತ್ತಾ?

First Published | Nov 8, 2024, 12:07 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇದೀಗ ವೀಕ್ಷಕರು ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿದೆ, ಅಂದ್ರೆ ಕೀರ್ತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ರೆ ಮುಂದೇನಾಗಬಹುದು?
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ವೀಕ್ಷಕರು ಕಳೆದ ಎರಡು ಮೂರು ತಿಂಗಳುಗಳಿಂದ ಕಾಯುತ್ತಿದ್ದ ಸಿಹಿ ಗಳಿಗೆ ಬಂದೇ ಬಿಟ್ಟಿದೆ. ಇಷ್ಟುದಿನಗಳಿಂದ ಕಾಣೆಯಾಗಿದ್ದ ಕೀರ್ತಿ ಈಗ ಎಂಟ್ರಿ ಕೊಟ್ಟೆ ಬಿಟ್ಟಿದ್ದಾರೆ. ಕೀರ್ತಿಯನ್ನು ನೋಡಿ, ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇನ್ನು ಅಸಲಿ ಆಟ ಶುರು ಅಂತಿದ್ದಾರೆ. 
 

ಕಾವೇರಿಯ ಬಾಯಿಯಿಂದ ಸತ್ಯ ಹೊರ ತರಿಸೋಕೆ ಲಕ್ಷ್ಮೀ ಮಾಡದ ನಾಟಕಗಳಿಲ್ಲ, ಐಡಿಯಾಗಳಿಲ್ಲ ಎಲ್ಲವನ್ನೂ ಮಾಡಿಯೂ ಕಾವೇರಿಯ ನಾಟಕವನ್ನು ಮಾತ್ರ ಬಯಲು ಮಾಡೋದಕ್ಕೆ ಲಕ್ಷ್ಮಿಗೆ ಸಾಧ್ಯವಾಗಲೇ ಇಲ್ಲ. ಆದ್ರೆ ಕೊನೆಗೆ ಆಗಿದ್ದು ಮಾತ್ರ ಬೇರೆ, ಎಲ್ಲಾ ಆರೋಪಗಳನ್ನು ಲಕ್ಷ್ಮೀ ಮೇಲೆ ಹೊರೆಸಿ, ಲಕ್ಷ್ಮೀ ಮಾನಸಿಕವಾಗಿ ನೊಂದಿದ್ದಾಳೆ ಅನ್ನೋದಾಗಿ ಬಿಂಬಿಸಿದ್ದಳು ಕಾವೇರಿ. 
 

Tap to resize

ಅಷ್ಟೇ ಅಲ್ಲ ಲಕ್ಷ್ಮೀಯನ್ನು ಮಾನಸಿಕ ಆರೋಗ್ಯಕ್ಕೆ (mental health) ಕೇಂದ್ರಕ್ಕೂ ಕಳುಹಿಸಿದ್ದಾಗಿದೆ. ಆ ಮೂಲಕ ಲಕ್ಷ್ಮಿಗೆ ಪರ್ಮನೆಂಟ್ ಆಗಿ ಹುಚ್ಚಿ ಪಟ್ಟ ಕಟ್ಟಿ ಆಕೆಯನ್ನು ವೈಷ್ಣವ್ ನಿಂದ ದೂರ ಮಾಡುವ ಸಂಪೂರ್ಣ ಪ್ಲ್ಯಾನ್ ಮಾಡಿದ್ದಾಳೆ ಕಾವೇರಿ. 
 

ಆದರೆ ಇದೀಗ ಕಾವೇರಿಯ ಎಲ್ಲಾ ಆಟಕ್ಕೂ ಫುಲ್ ಸ್ಟಾಪ್ ಇಡುವಂತಹ ಕ್ಷಣ ಬಂದಿದೆ. ಕೀರ್ತಿ ಕುರಿತಾದ ಎಲ್ಲಾ ಸತ್ಯವನ್ನು ನಾನು ಬಾಯಿ ಬಿಡಿಸುತ್ತೇನೆ. ಕೀರ್ತಿಗೆ ನ್ಯಾಯ ಕೊಡಿಸ್ತೀನಿ ಅಂತ ಮತ್ತೆ ಕಾವೇರಿಗೆ ಸವಾಲು ಹಾಕಿ ಹೊರಟಿದ್ದಾರೆ ಲಕ್ಷ್ಮೀ. ಲಕ್ಷ್ಮೀದು ಬರೀ ಡೈಲಾಗ್ ಮಾತ್ರ ಆಯ್ತು, ಏನು ಆಗೋದೆ ಇಲ್ಲ ಎನ್ನುವಷ್ಟರಲ್ಲಿ ಟ್ವಿಸ್ಟ್ ಸಿಕ್ಕಿದೆ. 
 

ಲಕ್ಷ್ಮೀ ಇಲ್ಲಿವರೆಗೆ ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಟ್ಟಿದೆ. ಯಾರಿಗಾಗಿ ಲಕ್ಷ್ಮೀ ಇಷ್ಟು ದಿನ ಕಷ್ಟ ಪಟ್ಟಿದ್ದಳೋ? ಯಾರಿಗಾಗಿ ಲಕ್ಷ್ಮೀ ಮಾನಸಿಕ ಅಸ್ವಸ್ಥೆಯ ಪಟ್ಟ ಪಡೆದುಕೊಂಡಿದ್ದಾಳೋ? ಅವರು ಈಗ ಕಣ್ಣಿದೆರುಗೆ ಬಂದಿದ್ದು, ಲಕ್ಷ್ಮೀಗೆ ಶಾಖ್ ಆಗಿದೆ. 
 

ಹೌದು, ಕೀರ್ತಿ ವಾಪಾಸ್ ಬಂದಿದ್ದಾರೆ. ಕಾರೊಂದರ ಒಳಗೆ ಲಾಕ್ ಆಗಿರುವ ಕೀರ್ತಿ ಬಾಗಿಲು ಬಡೆಯುತ್ತಿರೋದನ್ನು ನೋಡಿ ಲಕ್ಷ್ಮೀ ಶಾಕ್ ಆಗಿ, ಆಕೆಯ ರಕ್ಷಣೆ ಧಾವಿಸಿದ್ದಾಳೆ. ಇದನ್ನು ನೋಡಿ ಜನ ದೇವರೆ ಇದು ಕನಸು ಆಗದೇ ಇರ್ಲಿ, ಇದು ನಿಜವಾಗಿರಲೇಬೇಕು. ಕೀರ್ತಿ ಇದ್ದರೇನೆ ಕಥೆ ಮುಂದುವರೆಯೋದಕ್ಕೆ ಸಾಧ್ಯ ಎಂದಿದ್ದಾರೆ. ಒಟ್ಟಲ್ಲಿ ಕೀರ್ತಿ ಬಂದಿರೋದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. 
 

ಕೆಲವೊಂದು ಜನ ಕಾಮೆಂಟ್ ಮಾಡಿ, ಕೀರ್ತಿ ಬಂದಿರೋದೇನೋ ನಿಜಾ ಇರಬಹುದು. ಆದರೆ ಕೀರ್ತಿ ಬೆಟ್ಟದಿಂದ ಬಿದ್ದಿರೋದರಿಂದ ನೆನಪಿನ ಶಕ್ತಿ ಕಳೆದುಕೊಂಡಿರಬಹುದು, ಆಕೆಯೂ ಹುಚ್ಚಿಯಾಗಿರಬಹುದು ಎಂದಿದ್ದಾರೆ. ಒಟ್ಟಲ್ಲಿ ಕೀರ್ತಿ -ಲಕ್ಷ್ಮೀ ಒಟ್ಟಿಗೆ ಸೇರಾಯ್ತು, ಮುಂದೇನಾಗುತ್ತೆ ಅನ್ನೋದನ್ನ ಕಾದು ನೋಡಬೇಕು. 
 

Latest Videos

click me!