ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ, ವರ್ತೂರು ಸಂತೋಷ್ ಅವರ ಹಸುವಿನ ಸೀಮಂತ ಕಾರ್ಯಕ್ರಮದಲ್ಲಿ, ಈ ಹಿಂದೆ ಅವರನ್ನು 'ಸಂತೂರ್' ಎಂದು ಕರೆದಿದ್ದಕ್ಕೆ ವೇದಿಕೆಯಲ್ಲೇ ಕ್ಷಮೆಯಾಚಿಸಿದರು. ರಕ್ಷಿತಾ ಅವರ ಈ ಮುಗ್ದ ನಡೆ ಮತ್ತು ವಿನಯವಂತಿಕೆಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬಿಗ್‌ಬಾಸ್‌ನ 12ನೇ ಆವೃತ್ತಿ ಮುಗಿದು, ಮುಂದಿನ 13ನೇ ಆವೃತ್ತಿಗೆ ಕಲರ್ಸ್ ಕನ್ನಡ ಈಗಾಗಲೇ ಪ್ರೋಮೋ ರಿಲೀಸ್ ಮಾಡಿದ್ದರೂ ಸಹ ಸೀಸನ್ 12ರ ಸ್ಪರ್ಧಿ ರಕ್ಷಿತಾ ಶೆಟ್ಟಿ ಮಾತ್ರ ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿದ್ದಾಗ ರಕ್ಷಿತಾ ಆಡುತ್ತಿದ್ದ ಮಾತುಗಳು ಮತ್ತು ಅವರ ವಿಭಿನ್ನ ಶೈಲಿ ಟ್ರೋಲಿಗರಿಗೆ ಭರಪೂರ ಆಹಾರವಾಗಿದ್ದವು. ಅದರಲ್ಲೂ ಅವರು ಹಾಡಿದ 'ಸೇವಂತಿ ಸೇವಂತಿ' ಹಾಡು ಹಾಗೂ ಸಹ-ಸ್ಪರ್ಧಿ ಕರಿಬಸಪ್ಪ ಅವರನ್ನು 'ಕರಿಬೆಸೊಪ್ಪು' ಎಂದು ಕರೆದಿದ್ದ ಪ್ರಸಂಗಗಳು ನೆಟ್ಟಿಗರಿಗೆ ಭರ್ಜರಿ ಮನರಂಜನೆ ನೀಡಿದ್ದವು.
25
'ವರ್ತೂರು ಸಂತೂರ್' ಎಡವಟ್ಟು ಮತ್ತು ವೈರಲ್ ಮೀಮ್ಸ್
ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ನೀಡಿದ ಸಂದರ್ಶನವೊಂದರಲ್ಲಿ ರಕ್ಷಿತಾ ಶೆಟ್ಟಿ ಅವರು ಮತ್ತೊಬ್ಬ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಅವರ ಹೆಸರನ್ನು ಮಾತಿನ ಭರದಲ್ಲಿ ತಪ್ಪಾಗಿ ‘ವರ್ತೂರು ಸಂತೂರ್’ ಎಂದು ಕರೆದಿದ್ದರು. ಈ ಒಂದು ಸಣ್ಣ ಎಡವಟ್ಟು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಕ್ರಿಯೇಟರ್‌ಗಳು ಸಂತೂರ್ ಸೋಪ್ ಜಾಹೀರಾತಿಗೆ ವರ್ತೂರು ಸಂತೋಷ್ ಅವರ ಮುಖವನ್ನು ಜೋಡಿಸಿ ನೂರಾರು ತಮಾಷೆಯ ಮೀಮ್ಸ್ ಹಾಗೂ ವಿಡಿಯೋಗಳನ್ನು ಹರಿಬಿಟ್ಟಿದ್ದರು.
35
ಹಸು ಮಾಲಾಶ್ರೀ ಸೀಮಂತ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ದಂಡು
ಇತ್ತೀಚೆಗೆ ವರ್ತೂರು ಸಂತೋಷ್ ಅವರು ತಮ್ಮ ನೆಚ್ಚಿನ 'ಹಳ್ಳಿಕಾರ್ ಹಸು ಮಾಲಾಶ್ರೀ'ಗೆ ಅತ್ಯಂತ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವಿಶಿಷ್ಟ ಕಾರ್ಯಕ್ರಮಕ್ಕೆ ಬಿಗ್‌ಬಾಸ್‌ನ ಹಲವು ಸ್ಪರ್ಧಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಇದೇ ವೇದಿಕೆಯಲ್ಲಿ ರಕ್ಷಿತಾ ಶೆಟ್ಟಿ ಅವರು ತಾವು ಹಿಂದೆ ಆಡಿದ್ದ ಮಾತಿನಂತೆ ವರ್ತೂರು ಸಂತೋಷ್ ಅವರಿಗೆ 2 ಲಕ್ಷ ರೂಪಾಯಿ ಹಣವನ್ನು ನೀಡಿ ತಮ್ಮ ಮಾತನ್ನು ಉಳಿಸಿಕೊಂಡರು.
ಕಾರ್ಯಕ್ರಮದ ವೇದಿಕೆ ಮೇಲೆ ಬಿಗ್‌ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಅವರು ಮಾತನಾಡುತ್ತಾ, ರಕ್ಷಿತಾ ಅವರು ವರ್ತೂರು ಸಂತೋಷ್ ಅವರನ್ನು 'ಸಂತೂರ್ ಸೋಪ್' ಎಂದು ಕರೆದಿದ್ದ ಹಳೆಯ ಪ್ರಸಂಗವನ್ನು ನೆನಪಿಸಿದರು. ಈ ವೇಳೆ ರಕ್ಷಿತಾ ಶೆಟ್ಟಿ ಅವರು ಯಾವುದೇ ಮುಜುಗರ ಪಟ್ಟುಕೊಳ್ಳದೆ, ತಕ್ಷಣವೇ ವೇದಿಕೆಯಲ್ಲೇ ವರ್ತೂರು ಸಂತೋಷ್ ಅವರ ಬಳಿ ಕ್ಷಮೆಯಾಚಿಸಿದರು. ರಕ್ಷಿತಾ ಅವರ ಕ್ಷಮೆಯನ್ನು ದೊಡ್ಡ ಮನಸ್ಸಿನಿಂದ ಸ್ವೀಕರಿಸಿದ ವರ್ತೂರು ಸಂತೋಷ್, "ಮಾತಿನ ಭರದಲ್ಲಿ ಹೀಗಾಗುವುದು ಸಹಜ, ತೊಂದರೆ ಇಲ್ಲ" ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
55
ರಕ್ಷಿತಾ ಮುಗ್ದತೆಗೆ ಫಿದಾ ಆದ ನೆಟ್ಟಿಗರು
ವೇದಿಕೆಯ ಮೇಲೆ ರಕ್ಷಿತಾ ಶೆಟ್ಟಿ ಅವರು ನಡೆದುಕೊಂಡ ರೀತಿ ಮತ್ತು ತಕ್ಷಣವೇ ಕ್ಷಮೆ ಕೇಳಿದ ನಡೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ರಕ್ಷಿತಾ ಅವರಲ್ಲಿ ಒಂಚೂರೂ ಅಹಂಭಾವವಿಲ್ಲ, ಇದು ಅವರ ಮುಗ್ದ ಮನಸ್ಸನ್ನು ತೋರಿಸುತ್ತದೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ಟ್ರೆಂಡ್ ಆಗುತ್ತಿದ್ದು, ರಕ್ಷಿತಾ ಅವರದ್ದು 'ಬಂಗಾರದ ಮನಸ್ಸು' ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.