ಅವತ್ಯಾಕೋ ಅಷ್ಟೊಂದು ತೃಪ್ತಿ, ನೆಮ್ಮದಿ ಸಿಗುತ್ತಿತ್ತು, ಇವತ್ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಹುಡುಕಾಟದ ಭಾಗವಾಗಿ ಮತ್ತೆ ರಂಗಭೂಮಿಗೆ ಮರಳುತ್ತಿದ್ದೇನೆ. - ಹೀಗೆ ಹೇಳಿದ್ದು ರಾಜೇಶ್ ನಟರಂಗ.
‘ಏಕತಾನತೆ ಕಾಡುತ್ತಿತ್ತು. ಕಿರುತೆರೆ, ಸಿನಿಮಾದ ನಟನೆ ಕೆಲಸ ನಡೆಯುತ್ತಿತ್ತು. ಆದರೆ ಅದೇನೋ ಅತೃಪ್ತಿ ಕಾಡುತ್ತಿತ್ತು. ಮೊದಲಿನ ಖುಷಿ ಸಿಗುತ್ತಿರಲಿಲ್ಲ. ಅವತ್ಯಾಕೋ ಅಷ್ಟೊಂದು ತೃಪ್ತಿ, ನೆಮ್ಮದಿ ಸಿಗುತ್ತಿತ್ತು, ಇವತ್ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಹುಡುಕಾಟದ ಭಾಗವಾಗಿ ಮತ್ತೆ ರಂಗಭೂಮಿಗೆ ಮರಳುತ್ತಿದ್ದೇನೆ’.
24
ಕಿರುತೆರೆಯಲ್ಲಿ ದೊಡ್ಡ ಹೆಸರು
- ಹೀಗೆ ಹೇಳಿದ್ದು ರಾಜೇಶ್ ನಟರಂಗ. ರಂಗಭೂಮಿಯಿಂದ ಬಂದು ಸಿನಿಮಾ, ಕಿರುತೆರೆಯಲ್ಲಿ ದೊಡ್ಡ ಹೆಸರಾಗಿರುವ ಅವರು ತಮ್ಮ ಹೆಸರಿನ ಜೊತೆಗೆ ತಮ್ಮ ರಂಗತಂಡದ ಹೆಸರನ್ನು ಅಂಟಿಸಿಕೊಂಡವರು. ಇದೀಗ 20 ವರ್ಷಗಳ ಬಳಿಕ ಅವರು ರಂಗಭೂಮಿಗೆ ಮರಳಿದ್ದಾರೆ.
34
ಮೊದಲ ಪ್ರದರ್ಶನ
ಅವರು ಇದೀಗ ನಟಿಸುತ್ತಿರುವ ನಾಟಕದ ಹೆಸರು ‘ಮಳೆ ನಿಲ್ಲುವವರೆಗೆ’. ಸೆ.17ರಂದು ಸಂಜೆ 7.30ಕ್ಕೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಕಲಾದ್ಯುತಿ ಪ್ರೊಡಕ್ಷನ್ಸ್ ವತಿಯಿಂದ ಈ ನಾಟಕದ ಮೊದಲ ಪ್ರದರ್ಶನ ನಡೆಯಲಿದೆ. ಈ ನಾಟಕವು ಪ್ರಸಿದ್ಧ ನಟ, ಲೇಖಕ ಎಲ್.ಎಸ್ ಸುಧೀಂದ್ರ ಜರ್ಮನ್ ಅವರ ಕಥೆಯನ್ನು ಆಧರಿಸಿದೆ. ಶರತ್ ಪರ್ವತವಾಣಿ ನಿರ್ದೇಶಿಸಿದ್ದಾರೆ.
‘ರಂಗಭೂಮಿಯಲ್ಲಿ ಆ ಕಾಲಕ್ಕೂ ಈ ಕಾಲಕ್ಕೂ ಬಹಳ ಬದಲಾವಣೆ ಆಗಿವೆ. ಜೆನ್‌ಝೀಗಳು ಬಂದಿದ್ದಾರೆ. ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಆಸಕ್ತರು ಜಾಸ್ತಿಯಾಗಿದ್ದಾರೆ. ಪ್ರಸ್ತುತದಲ್ಲಿರುವ ನಿಟ್ಟಿನಲ್ಲಿ ನಾನು ಹೆಜ್ಜೆ ಇಟ್ಟಿದ್ದೇನೆ. ಇದು ನನ್ನನ್ನು ನಾನು ಮತ್ತೆ ಕಂಡುಕೊಳ್ಳುವ ಪ್ರಯತ್ನ’ ಎನ್ನುತ್ತಾರೆ ರಾಜೇಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.