ಸದ್ಯ ಸೀರಿಯಲ್ ನಲ್ಲಿ ಏನಾಗ್ತಿದೆ ಅಂದ್ರೆ, ಗೌತಮ್ ದಿವಾನ್ (Goutham Diwan) ಪತ್ನಿ ಭೂಮಿಕಾ ಗರ್ಭಿಣಿ. ತನ್ನ ಮೇಲೆ ದಾಳಿ ಆದ ಬಳಿಕ, ಭಯದಿಂದ ಗೌತಮ್, ತನ್ನ ಎಲ್ಲಾ ಆಸ್ತಿಯನ್ನು ಭೂಮಿಕಾ ಮತ್ತು ಹುಟ್ಟುವ ಮಗುವಿನ ಹೆಸರಿಗೆ ಮಾಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಜೈ, ಭೂಮಿಕಾ ಮಗು ಈ ಭೂಮಿಗೆ ಕಾಲಿಡೋದಕ್ಕೂ ಮುಂಚೆನೆ ಇಲ್ಲವಾಗಿಸುವ ಯೋಚನೆ ಮಾಡಿದ್ದಾನೆ. ಇದೆಲ್ಲವೂ ಗೌತಮ್ ಗೆ ಗೊತ್ತಾಗುತ್ತಾ? ಮುಂದೇನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.