ಕನ್ನಡ ಕಿರುತೆರೆಯ ಜನಪ್ರಿಯ ರಾಧಾ ರಮಣ ಧಾರಾವಾಹಿಯ ನಟಿ ಕಾವ್ಯಾ ಗೌಡ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಗಳ ಮುಖ ರಿವೀಲ್ ಮಾಡಿದ್ದಾರೆ.
ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನ ಮಗಳಿಗೆ ಜನ್ಮ ನೀಡಿದ ಕಾವ್ಯಾ ಗೌಡ ಮುಖವನ್ನು ವಿಶೇಷ ದಿನದಂದು ರಿವೀಲ್ ಮಾಡುವುದಾಗಿ ಹೇಳಿದ್ದರು.
ಮಗಳಿಗೆ ಸಿಯಾ ಎಂದು ನಾಮಕರಣ ಮಾಡಿದ್ದರು. ಸಿಯಾ ಅಂದ್ರೆ ಸಾಯಿ ಬಾಬನ ಮತ್ತೊಂದು ಹೆಸರು ಕೂಡ ಎಂದು ಆಗಾಗ ಜನರು ಕೇಳುತ್ತಿದ್ದಾಗ ಉತ್ತರಿಸುತ್ತಿದ್ದರು.
'ನನ್ನ ಜೀವನ ಸನ್‌ಶೈನ್ ಸಿಯಾಳನ್ನು ಭೇಟಿ ಮಾಡಿ. ಆಕೆ ನಮ್ಮ ಜೀವನದಲ್ಲಿ ಅತ್ಯಂತ ಪ್ರೀತಿ ಮತ್ತು ಖುಷಿಯನ್ನು ನೀಡಿದ್ದಾಳೆ' ಎಂದು ಕಾವ್ಯಾ ಗೌಡ ಬರೆದುಕೊಂಡಿದ್ದಾರೆ.
'ಇವತ್ತು ನಮ್ಮ ಸೆಲೆಬ್ರೇಷನ್ ಡಬಲ್ ಆಗಿದೆ, ಒಂದು ವರಮಹಾಲಕ್ಷ್ಮಿ ಹಬ್ಬ ಮತ್ತೊಂದು ನನ್ನ ಮಗಳನ್ನು ನಿಮಗೆ ಪರಿಚಯಿಸಿಕೊಟ್ಟ ಕ್ಷಣ' ಎಂದಿದ್ದಾರೆ ಕಾವ್ಯಾ.
ಸಿಯಾಳನ್ನು ಮೊದಲ ಸಲ ಹಿಡಿದುಕೊಂಡಾಗ ನಮ್ಮ ಮನಸ್ಸು ಹಗುರವಾಗಿತ್ತು. ಅಕೆಯ ಸಣ್ಣ ಬೆರಳುಗಳು ನನ್ನನ್ನು ಹಿಡಿದುಕೊಂಡಿತ್ತು ಆಕೆಯ ನಗು ಇನ್‌ಫೆಕ್ಷಿಯಸ್ ಆಗಿತ್ತು ಎಂದಿದ್ದಾರೆ ಕಾವ್ಯಾ.