Published : Aug 16, 2024, 05:46 PM ISTUpdated : Aug 16, 2024, 05:49 PM IST
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವಿಲನ್ ಆಗಿ ಮಿಂಚುತ್ತಿರುವ ನಟ ಅಮಿತ್ ರಾವ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಲ್ ಮೊಂತೆರೋ ಅವರ ಅಣ್ಣ ಅನ್ನೋ ಸುದ್ದಿ ಹಾರಿದಾಡ್ತಿದೆ ಇದು ನಿಜಾನ?
ಸ್ಯಾಂಡಲ್ ವುಡ್ ನಟಿ ಸೋನಲ್ ಮೊಂತೆರೋ (SOnal Monterio) ಮತ್ತು ನಿರ್ದೇಶಕ ತರುಣ್ ಕಿಶೋರ್ ಸುದೀರ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗಳ ಮದುವೆ ಸಮಾರಂಭದ ಕನ್ನಡ ಚಿತ್ರರಂಗದ ಸದಸ್ಯರೆಲ್ಲರೂ ಭಾಗಿಯಾಗುವ ಮೂಲಕ ಅದ್ಧೂರಿಯಾಗಿ ನಡೆದಿತ್ತು.
27
ಸೋನಲ್- ತರುಣ್ ಮದುವೆ ಸಮಾರಂಭದಲ್ಲಿ ತರುಣ್ ಜೊತೆ ಅವರ ಸಹೋದರ ನಂದ ಕಿಶೋರ್ ಮತ್ತು ಅತ್ತಿಗೆ ನಿಂತು ಮದುವೆ ನಡೆಸಿಕೊಟ್ರೆ, ಸೋನಲ್ ಜೊತೆ ಅಮಿತ್ ರಾವ್ (Amith Rao) ಮತ್ತು ಅವರ ಪತ್ನಿ ರಶ್ಮಿ ಅನೂಪ್ ರಾವ್ ನಿಂತು ಮದುವೆ ಮಾಡಿಸಿ ಕೊಟ್ಟಿದ್ದಾರೆ.
37
ಇದೆಲ್ಲದರ ಮಧ್ಯೆ ಸೋನಲ್ ಮತ್ತು ಅಮಿತ್ ರಾವ್ ಗೆ ಏನು ಸಂಬಂಧ? ಅವರ್ಯಾಕೆ ಸೋನಲ್ ಅಣ್ಣ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿತ್ತು. ಸೋನಲ್ ಮತ್ತು ಅಮಿತ್ ಅಣ್ಣ ತಂಗಿಯೇ ಅಥವಾ ಅಮಿತ್ ಸೋನಲ್ ಅವರ ತಮ್ಮ ಎನ್ನುವ ಸುದ್ದಿಗಳು ಸಹ ಸಾಕಷ್ಟು ಓಡಾಡ್ತಿದ್ದವು.
47
ಸೋನಲ್ ತರುಣ್ ಮದುವೆ ಬಳಿಕ ಅಮಿತ್ ರಾವ್ ತಮ್ಮ ಸೋಶಿಯಲ್ ಮೀಡಿಯಾ (social media) ಪೇಜ್ ನಲ್ಲಿ ವಧುವರರ ಜೊತೆಯಾಗಿ ನಿಂತ ಫೋಟೊ ಹಂಚಿಕೊಂಡು ಶುಭಾಶಯ ತಿಳಿಸಿದ್ದರು. ಅಭಿಮಾನಿಯೊಬ್ಬರು ಫೋಟೊ ನೋಡಿ, ನಿಮಗೂ ಸೋನಲ್ ಗೂ ಏನು ಸಂಬಂಧ, ಅವರು ನಿಮಗೆ ಏನಾಗಬೇಕು ಎನ್ನುವ ಪ್ರಶ್ನೆ ಮಾಡಿದ್ದರು.
57
ಇನ್ನೂ ಕೆಲವರು, ಅಮಿತ್ ಗೆ ನೀವು ಸೋನಲ್ ಅಣ್ಣನೇ? ಸೋನಲ್ ಅಣ್ಣ ಅತ್ತಿಗೆ ನೀವಾ? ಅದಿಕ್ಕೆ ಮದ್ವೆ ಮಾಡಿಸಿದ್ದೀರಾ ಅಂತಾನು ಪ್ರಶ್ನೆ ಮಾಡಿದ್ದರು. ಹೀಗೆ ಕಾಮೆಂಟ್ ಒಂದಕ್ಕೆ ಉತ್ತರಿಸಿದ ಅಮಿತ್ ರಾವ್ ಸೋನಲ್ ನಮ್ಮ ಕುಟುಂಬವಿದ್ದಂತೆ (sonal is like my family) ಎಂದಿದ್ದಾರೆ.
67
ಅಷ್ಟಕ್ಕೂ ಈ ಅಮಿತ್ ರಾವ್ ಯಾರು? ಇವರು ಬೇರಾರು ಅಲ್ಲ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಭಾವನಾ ವಿರುದ್ಧ ಮಸಲತ್ತು ನಡೆಸುವ ವಿಲನ್ ಆಗಿ ನಟಿಸುತ್ತಿರುವವರೇ ಅಮಿತ್. ಇವರು ಈ ಹಿಂದೆ ಅಗ್ನಿ ಸಾಕ್ಷಿಯಲ್ಲೂ ನಟಿಸಿದ್ದರು. ಜೊತೆಗೆ ಹಲವು ಸಿನಿಮಾಗಳಲ್ಲೂ ಅಮಿತ್ ನಟಿಸಿದ್ದಾರೆ.
77
ಅಮಿತ್ ರಾವ್ ಪತ್ನಿ ರಶ್ಮಿ ಅನೂಪ್ ರಾವ್ (Rashmi Anoop Rao) ಸೋನಲ್ ಆಪ್ತ ಸ್ನೇಹಿತೆ ಜೊತೆಗೆ ಫ್ಯಾಷನ್ ಡಿಸೈನರ್ ಕೂಡ ಹೌದು. ಸೋನಲ್ ಮದುವೆ ಔಟ್ ಫಿಟ್, ತರುಣ್ -ಸೋನಲ್ ಮುಖ ಇರುವ ಬ್ಲೌಸ್ ಡಿಸೈನ್ ಮಾಡಿದ್ದು ಸಹ ರಶ್ಮಿ. ಅಷ್ಟೇ ಅಲ್ಲ ಇವರು ಸೀರಿಯಲ್ ಗಳಿಗೂ ಸಹ ಕಾಸ್ಟ್ಯೂಮ್ ಡಿಸೈನ್ ಮಾಡ್ತಾರೆ.