'ನಿಮ್ಮ ಲುಕ್‌ಗಿಂತ ಕಣ್ಣುಗಳೇ ಮಾತನಾಡ್ತಿವೆ..' ವರಮಹಾಲಕ್ಷ್ಮೀ ಹಬ್ಬಕ್ಕೆ ರೆಟ್ರೋ ಸ್ಟೈಲ್‌ನಲ್ಲಿ ಅನುಪಮಾ ಗೌಡ!

First Published | Aug 16, 2024, 6:38 PM IST

ನಟಿ ನಿರೂಪಕಿ ಅನುಪಮಾ ಗೌಡ ವರಮಹಾಲಕ್ಷ್ಮೀ ಹಬ್ಬಕ್ಕೆ ಸಖತ್‌ ರೆಟ್ರೋ ಫೋಟೋಶೂಟ್‌ ಮಾಡಿಸಿದ್ದು ಅದರ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಜಾ ರಾಣಿ ರಿಯಾಲಿಟಿ ಶೋ ನಿರೂಪಕಿ ಅನುಪಮಾ ಗೌಡ ಹೊಸ ಫೋಟೋ ಶೂಟ್‌ ಮಾಡಿದ್ದಾರೆ. ರೆಟ್ರೋ ಲುಕ್‌ನಲ್ಲಿ ಅವರ ಸ್ಟೈಲ್‌ ಅದ್ಭುತವಾಗಿ ಕಂಡಿದೆ.

'ಸುಖ, ಶಾಂತಿ, ಸಂಪತ್ತು ಹಾಗೂ ಐಶ್ವರ್ಯ ವೃದ್ಧಿಸಲಿ ಎಂದು ಆಶಿಸುತ್ತಾ , ಸಮಸ್ತ ಜನರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು..' ಎಂದು ಸಾಕಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

Tap to resize

ಗಾಢ ನೀಲಿ ಬಣ್ಣದ ಸೀರೆ, ಅದರ ಬಾರ್ಡರ್‌ನ ಕೆಂಪು ಬಣ್ಣಕ್ಕೆ ಒಪ್ಪುವಂಥ ರವಿಕೆ ಧರಿಸಿ ಆಕರ್ಷಕ ಆಭರಣಗಳೊಂದಿಗೆ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ತಮ್ಮದೇ ಸೀರೆಯಲ್ಲಿ ತಾವೇ ಮಾಡಿಕೊಂಡಿರುವ ಸ್ಟೈಲ್‌ ಎಂದು ಅನುಪಮಾ ಗೌಡ ಬರೆದುಕೊಂಡಿದ್ದು, ರಾಘವ್‌ ಸ್ಟುಡಿಯೋಸ್‌ ಈ ಚಿತ್ರಗಳನ್ನು ತೆಗೆದಿದ್ದಾರೆ.

ಈ ಫೋಟೋಗಳಲ್ಲಿ ನೀವು ಬಹಳ ಸುಂದರವಾಗಿ ಕಾಣುತ್ತಿದ್ದೀರಿ, ನಿಮಗೂ ಹಬ್ಬದ ಶುಭಾಶಯಗಳು ಎಂದು ಹಲವರು ಅವರಿಗೆ ಕಾಮೆಂಟ್‌ ಮಾಡಿದ್ದಾರೆ.

ಈ ಸಿರೀಸ್‌ನ ಮೂರನೇ ಚಿತ್ರದಲ್ಲಿ ನಿಮ್ಮ ಲುಕ್‌ಗಿಂತ ಹೆಚ್ಚಾಗಿ ನಿಮ್ಮ ಕಣ್ಣುಗಳೇ ಮಾತನಾಡುತ್ತಿವೆ. ಬಹಳ ಸುಂದರವಾಗಿ ಕಾಣ್ತಿದ್ದೀರಿ ಎಂದು ಬರೆದಿದ್ದಾರೆ.

ಹೆಣ್ಣು ಅಂದ್ರೆ ಲಕ್ಷ್ಮೀ, ನೀವೇ ವರಮಹಾಲಕ್ಷ್ಮೀ ನಿಮಗೆ ನನ್ನ ದೊಡ್ಡ ನಮಸ್ಕಾರ ಎಂದು ಇನ್ನೊಬ್ಬರು ಅನುಪಮಾ ಗೌಡ ಫೋಟೋಗೆ ಕಾಮೆಂಟ್‌ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ನಿರೂಪಕಿ ಅನುಪಮಾ ಗೌಡ ಲಂಗ ದಾವಣಿಯಲ್ಲಿ ತೆಗೆಸಿಕೊಂಡ ಫೋಟೋಶೂಟ್‌ಅನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

2003ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅನುಪಮಾ ಗೌಡ, ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು. ಅವರ ಮೊದಲ ಸಿನಿಮಾ ಯಾವುದು ಗೊತ್ತಾ?

ದರ್ಶನ್‌ ಹಾಗೂ ವಸುಂಧರಾ ದಾಸ್‌ ಅಭಿನಯದ ಲಂಕೇಶ್‌ ಪತ್ರಿಕೆ ಅನುಪಮಾ ಗೌಡ ಅವರ ಮೊದಲ ಸಿನಿಮಾ. ಇದರಲ್ಲಿ ಬಾಲನಟಿಯಾಗಿ ಅವರು ನಟಿಸಿದ್ದರು. 

ಆ ಬಳಿಕ ಬಿಗ್‌ಬಾಸ್‌ ಕನ್ನಡದ ಐದನೇ ಸೀಸನ್‌ನಲ್ಲಿ ಅವರು ಭಾಗವಹಿಸಿದ್ದರು. ಅಲ್ಲಿಂದ ಪಡೆದುಕೊಂಡ ಫೇಮ್‌ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಹಳ್ಳಿ ದುನಿಯಾ ರಿಯಾಲಿಟಿ ಶೋ ಮೂಲಕ ಅವರು ಟಿವಿ ಜಗತ್ತಿಗೆ ಪಾದಾರ್ಪಣೆ ಕೂಡ ಮಾಡಿದ್ದರು. 2015ರಲ್ಲಿ ಬಂದ ನಗಾರಿ ಸಿನಿಮಾದಲ್ಲಿ ಹೀರೋಯಿನ್‌ ಆಗಿ ನಟಿಸಿದ್ದರು.

ಗುರುವಾರ ಬಿಡುಗಡೆಯಾದ ಗೌರಿ ಚಿತ್ರವನ್ನು ವೀಕ್ಷಣೆ ಮಾಡಿರುವ ಅನುಪಮಾ ಗೌಡ, ಸಮರ್ಜಿತ್‌ ಲಂಕೇಶ್‌ ಹಾಗೂ ಸಾನ್ಯ ಅಯ್ಯರ್‌ ಅವರ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

Latest Videos

click me!