ಸಂಗೀತ ಶೃಂಗೇರಿ ಯೂತ್ ಐಕಾನ್ ಪ್ರಶಸ್ತಿ ಗೆದ್ದೆ ಬಿಟ್ರಾ? ಅಭಿಮಾನಿಗಳ ಹಾರೈಕೆ ನಿಜವಾಯ್ತ?

Published : Sep 05, 2024, 01:01 PM ISTUpdated : Sep 05, 2024, 01:16 PM IST

ಅನುಬಂಧ ಅವಾರ್ಡ್ ಗೆ ವೇದಿಕೆ ಸಜ್ಜಾಗಿದ್ದು, ಈ ಬಾರಿ ಯೂತ್ ಐಕಾನ್ ಅವಾರ್ಡ್ ಸಂಗೀತ ಶೃಂಗೇರಿಗೆ ಬರಬೇಕು ಎಂದು ಅಭಿಮಾನಿಗಳು ಹಾರೈಸುತ್ತಿದ್ದು, ಪ್ರಶಸ್ತಿ ಸಂಗೀತ ಕೈ ಸೇರಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.   

PREV
17
ಸಂಗೀತ ಶೃಂಗೇರಿ ಯೂತ್ ಐಕಾನ್ ಪ್ರಶಸ್ತಿ ಗೆದ್ದೆ ಬಿಟ್ರಾ? ಅಭಿಮಾನಿಗಳ ಹಾರೈಕೆ ನಿಜವಾಯ್ತ?

ಕಲರ್ಸ್ ಕನ್ನಡ (Colors Kannada) ವಾಹಿನಿಯು ತನ್ನ ವರ್ಷದ ಹಬ್ಬದವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡೋದಕ್ಕೆ ಸಂಪೂರ್ಣ ಸಜ್ಜಾಗಿದೆ. ಅಂದರೆ ಅನುಬಂಧ ಅವಾರ್ಡ್ ಕಾರ್ಯಕ್ರಮ ಈಗಾಗಲೇ ನಡೆದಿದ್ದು, ತೆರೆ ಮೇಲೆ ಅದನ್ನ ನೋಡೋದಕ್ಕೆ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. 
 

27

ಅನುಬಂಧ ಅವಾರ್ಡ್ (Anubandha Awards) ಕಾರ್ಯಕ್ರಮವು ಜನ ಮೆಚ್ಚುಗೆ ಪಡೆದ ಕಾರ್ಯಕ್ರಮವಾಗಿದೆ. ಯಾಕಂದರೆ ವೀಕ್ಷಕರು ಆವು ಇಷ್ಟಪಟ್ಟು ನೋಡುವಂತಹ ಧಾರಾವಾಹಿ, ರಿಯಾಲಿಟಿ ಶೋಗಳ ಜನಮೆಚ್ಚಿದ ತಾರೆಯರಿಗೆ ಪ್ರಶಸ್ತಿ ನೀಡುವಂತಹ ಕಾರ್ಯಕ್ರಮ ಇದಾಗಿದೆ. ಪ್ರಶಸ್ತಿ ಯಾವ ತಾರೆಯರ ಪಾಲಾಗಬಹುದು ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ. 
 

37

ಇದೆಲ್ಲದರ ನಡುವೆ ಜನಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿ (youth icon award)  ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ 9 ಮಂದಿ ನಾಮಿನೇಟ್‌ ಆಗಿದ್ದು, ಜಿಯೋ ಸಿನೆಮಾ ಆಪ್ ಡೌನ್‌ಲೋಡ್‌ ಮಾಡಿ ಓಟು ಮಾಡಲು ಅವಕಾಶವೂ ಇತ್ತು. ಭಾಗ್ಯ, ವೈಷ್ಣವ್‌,ರಚನಾ, ಅಪ್ಪು, ರಾಮಚಾರಿ, ಕರ್ಣ,ಆರಾಧನಾ, ತೀರ್ಥ ಮತ್ತು ಸಂಗೀತಾ ಶೃಂಗೇರಿ ಹೆಸರು ನಾಮಿನೇಟ್ ಆದವರ ಲಿಸ್ಟ್ ನಲ್ಲಿತ್ತು. 

47

ಬಿಗ್ ಬಾಸ್ ಸೀಸನ್ 10 ರ (Bigg Boss Season 10) ಸ್ಪರ್ಧಿಯಾಗಿ ಜನಪ್ರಿಯತೆ ಗಳಿಸಿದ ಸಂಗೀತ ಶೃಂಗೇರಿ ಹೆಸರು ಯೂತ್ ಐಕಾನ್ ಲಿಸ್ಟ್ ನಲ್ಲಿ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಪ್ರಶಸ್ತಿ ಸಂಗೀತಾಗೆ ಸೇರಬೇಕು ಎಂದು ಪಟ್ಟು ಸಹ ಹಿಡಿದಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು, ಸಂಗೀತ ಪ್ರಶಸ್ತಿ ಹಿಡಿದಿರೋದು ಕಾಣಿಸ್ತಿದೆ. 

57

ಕಪ್ಪು ಬಣ್ಣದ ಡ್ರೆಸ್ ಧರಿಸಿರುವ ಸಂಗೀತ ಶೃಂಗೇರಿ (Sangeetha Sringeri) ಕೈಯಲ್ಲಿ ಅನುಬಂಧ ಕಾರ್ಯಕ್ರಮದ ಜನ ಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿ ಇರೋದನ್ನು ಕಾಣಬಹುದು. ಸಂಗೀತಾ ಒಂದು ಕೈಯಲ್ಲಿ ಹಸಿರು ಬಳೆಯನ್ನು ತೊಟ್ಟು ಫೋನ್ ನೋಡ್ತಿರೋದನ್ನು ಕಾಣಬಹುದು. ಇದನ್ನ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. 
 

67
Sangeetha

ಈ ಫೋಟೊ ವೈರಲ್ ಆಗುತ್ತಿದ್ದಂತೆ, ಜನರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕಂಗ್ರಾಟ್ಸ್ ಸಂಗೀತ, ಈ ಪ್ರಶಸ್ತಿಗೆ ನೀವು ಅರ್ಹರು, ಈ ಪ್ರಶಸ್ತಿಯ ನಿಜವಾದ ಒಡತಿ ನೀವೇನೆ. ಬಿಗ್ ಬಾಸ್ ಸೀಸನ್ 10 ಗೆದ್ದಿಲ್ಲಾಂದ್ರೆ ಏನು, ನಮ್ಮ ಮನಸ್ಸಲ್ಲಿರೋದು ಸಂಗೀತ, ಯೂತ್ ಐಕಾನ್ ಪ್ರಶಸ್ತಿ ಕೂಡ ಸಂಗೀತಾಗೆ ಸೇರಿದ್ದು ಎಂದಿದ್ದಾರೆ. 
 

77

ಸಂಗೀತಾ ಶೃಂಗೇರಿ ಬಿಗ್ ಬಾಸ್ ಸೀಸನ್ 10ರ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿದ್ದರು. ತಮ್ಮ ದಿಟ್ಟ, ನೇರ ನುಡಿಯಿಂದಲೇ ಜನಪ್ರಿಯತೆ ಪಡೆದಿದ್ದ ಸಂಗೀತಾ ಬಿಬಿಕೆ ಸೀಸನ್ 10ರ ವಿನ್ನರ್ ಆಗಲಿದ್ದಾರೆ ಎನ್ನುವ ಭರವಸೆ ಜನರಿಗಿತ್ತು, ಆದರೆ ಅವರು ಮೂರನೇ ವಿನ್ನರ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.. ಕಾರ್ತಿಕ್ ಮಹೇಶ್ ಬಿಗ್ ಬಾಸ್ ವಿನ್ನರ್ ಆಗಿದ್ದರೆ, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories