ಸೀರಿಯಲ್​ ಕಥೆಗಿಂತ್ಲೂ ರೋಚಕ Amruthadhaare ಜೈ- ಹಳೆಯ ಮಲ್ಲಿ​ Love Story! ಪ್ರೀತಿ ಹುಟ್ಟಿದ್ದು ಹೀಗೆ

Published : Mar 24, 2026, 11:42 AM IST

'ಅಮೃತಧಾರೆ' ಧಾರಾವಾಹಿಯ ಖಳನಾಯಕ ಜೆಡಿ ಅಲಿಯಾಸ್ ರಾಣವ್ ಗೌಡ ಮತ್ತು ನಟಿ ರಾಧಾ ಭಗವತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿಯೇ ಮೊಳಕೆಯೊಡೆದ ತಮ್ಮ ಪ್ರೀತಿ, ರಾಣವ್ ತಾಯಿಯ ಒಂದು ಫೋನ್ ಕಾಲ್ ಹಾಗೂ ತಾವು ಮೊದಲು ಪ್ರಪೋಸ್ ಮಾಡಿದ ರೋಚಕ ಕ್ಷಣವನ್ನು ನಟಿ ರಾಧಾ ಹಂಚಿಕೊಂಡಿದ್ದಾರೆ.

PREV
16
ಹ್ಯಾಂಡ್​ಸಮ್​ ವಿಲನ್​

ವಿಲನ್​ ಆದ್ರೂ ಹೆಣ್ಣುಮಕ್ಕಳ ಫೆವರೇಟ್​ ನಟನಲ್ಲಿ ಒಬ್ಬರು ಯಂಗ್​ ಆ್ಯಂಡ್​ ಹ್ಯಾಂಡಸಮ್​ ಆಗಿರೋ ನಟ ರಾಣವ್​ ಗೌಡ. ರಾಣವ್​ ಎಂದರೆ ಬಹುಶಃ ಬಹುತೇಕರಿಗೆ ಅರ್ಥವಾಗಲಿಕ್ಕಿಲ್ಲ. ಇವರೇ ಅಮೃತಧಾರೆ JD ಉರ್ಫ್​ ಜೈ ಉರ್ಫ್​ ಜೈದೇವ್​. ಜೈದೇವ್​ ಕ್ಯಾರೆಕ್ಟರ್​ ಅನ್ನು ಶಪಿಸುವವರೂ ಜೈದೇವ್​ ನಟನೆಗೆ ಜೈಜೈ ಎನ್ನುತ್ತಲೇ ಅವರ ಫೆವರೆಟ್​ ಆಗಿದ್ದಾರೆ. ಇನ್ನು ಯುವತಿಯರಿಗಂತೂ ಜೈದೇವ್​ ಅಂದ್ರೆ ರಾಣವ್​ ಅವ್ರು ಕ್ರಷ್​ ಆಗಿಬಿಟ್ಟಿದ್ದಾರೆ.

26
ಜೈ-ಮಲ್ಲಿ ಜೋಡಿ

ಇಂತಿಪ್ಪ ಜೈದೇವ್​ ಇದೀಗ ಹಳೆಯ ಮಲ್ಲಿ ಈಗ ಭಾರ್ಗವಿ ಎಲ್​ಎಲ್​ಬಿಯಾಗಿರುವ ನಟಿ ರಾಧಾ ಭಗವತಿ (Radha Bhagavati) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರ ಎಂಗೇಜ್​ಮೆಂಟ್​ ಆಗಿದ್ದು, ಇವರ ಲವ್​ಸ್ಟೋರಿ ಮಾತ್ರ ಸೀರಿಯಲ್​ಗಿಂತಲೂ ರೋಚಕವಾಗಿದೆ. ಈ ಬಗ್ಗೆ ಇದೀಗ ನಟಿ ರಾಧಾ ಭಗವತಿ ಅವರು ಮಾಧ್ಯಮವೊಂದಕ್ಕೆ ಲವ್​ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

36
ಅಮೃತಧಾರೆ ಸೀರಿಯಲ್​ನಲ್ಲೇ ಲವ್​

ಇವರ ಲವ್​ಸ್ಟೋರಿ ಶುರುವಾಗಿದ್ದೇ ಅಮೃತಧಾರೆ ಸೀರಿಯಲ್​ನಲ್ಲಂತೆ. ಜೈದೇವನ ಕ್ಯಾರೆಕ್ಟರ್​ ನೋಡಿ ಅವರನ್ನು ಶಪಿಸುವವರೇ ತುಂಬಾ ಮಂದಿ. ಆದರೆ ರಿಯಲ್​ ಲೈಫ್​ನಲ್ಲಿ ಅವರಷ್ಟು ಸಾಫ್ಟ್​, ಮೃದು ಭಾಷಿ ವ್ಯಕ್ತಿಯನ್ನು ನಾನು ನೋಡೇ ಇಲ್ಲ. ಅವರದ್ದು ಮಗುವಿನಂಥ ಮನಸ್ಸು. ಎಷ್ಟೋ ಮಂದಿ ಲೇಡೀಸ್​ ಅವರನ್ನು ಮುತ್ತುವರೆದುಕೊಂಡು ಇದ್ದರೂ, ಇವರು ಮಾತ್ರ ಸಕತ್​ ಸಾಫ್ಟ್​ ಆಗಿ ಮಾತನಾಡುವುದು ಎಲ್ಲವೂ ನನಗೆ ಇಷ್ಟವಾಯ್ತು. ಆಗಲೇ ನನಗೂ ಲವ್​ ಶುರುವಾಗಿತ್ತು. ಅವರಿಗೂ ನನ್ನ ಮೇಲೆ ಆಗಲೇ ಲವ್​ ಆಗಿತ್ತು. ಆದರೆ ಈ ವಿಷಯವನ್ನು ಪರಸ್ಪರ ಹೇಳಿಕೊಂಡೇ ಇರಲಿಲ್ಲ ಎಂದಿದ್ದಾರೆ ರಾಧಾ.

46
ಬಾಯಿ ಬಿಡದ ಜೋಡಿ

ಶೂಟಿಂಗ್​ ಸೆಟ್​ಗೆ ಬರದಿದ್ದರೆ, ತುಂಬಾ ಮಿಸ್​ ಮಾಡಿಕೊಳ್ತಿದ್ವಿ. ಇದರ ಹೊರತಾಗಿಯೂ ಇಬ್ಬರೂ ಲವ್​ ಬಗ್ಗೆ ಓಪನ್​ ಆಗಿ ಬಾಯಿ ಬಿಟ್ಟೇ ಇರಲಿಲ್ಲ ಎಂದಿದ್ದಾರೆ ನಟಿ. ಆರಂಭದಲ್ಲಿ ಅವರನ್ನು ನೋಡಿ ತುಂಬಾ ಹೆದರಿಕೊಳ್ತಿದ್ದೆ. ಏಕೆಂದ್ರೆ ಈ ಹಿಂದೆ ಅವರು ಮಾಡಿರೋ ರೋಲ್​ಗಳನ್ನು ನೋಡಿ ಅವರ ಬಗ್ಗೆ ಬೇರೆಯದ್ದೇ ಅಭಿಪ್ರಾಯ ಇತ್ತು. ಆದರೆ ಅವರ ಜೊತೆ ಕೆಲಸ ಮಾಡುವಾಗ ಅವರು ಎಷ್ಟು ಒಳ್ಳೆಯವರು ಎಂದು ತಿಳಿಯಿತು ಎಂದಿದ್ದಾರೆ ರಾಧಾ.

56
ಅಮ್ಮನ ಕಾಲ್​

ಒಂದು ದಿನ ಇದ್ದಕ್ಕಿದ್ದಂತೆಯೇ ನಾನು ಹೊರಗಡೆ ಇದ್ದಾಗ ರಾಣವ್​ ಅವರ ಅಮ್ಮ ಕಾಲ್​ ಮಾಡಿ, ನನ್ನ ಮಗ ನಿಮ್ಮನ್ನ ಲವ್‌ ಮಾಡ್ತಾ ಇದ್ದಾನೆ ಅಂದುಬಿಟ್ಟರು. ನನಗೆ ಆ ಕ್ಷಣ ಏನು ಹೇಳಬೇಕೋ ಗೊತ್ತಾಗಲಿಲ್ಲ. ಅಷ್ಟೇ ಅಲ್ಲದೇ ಅವರು ಆಗಲೇ ಜಾತಕ ನೋಡಿ ಹೊಂದಾಣಿಕೆ ಆಗುವ ಬಗ್ಗೆಯೂ ತಿಳಿದುಕೊಂಡು ಬಿಟ್ಟಿದ್ದರು. ನಾನು ಲವ್​ ಮಾಡ್ತಾ ಇದ್ದೇನಾದ್ರೂ ಅವರ ಅಮ್ಮನ ಬಾಯಲ್ಲಿ ಇದನ್ನು ಕೇಳಿ ಏನು ಹೇಳಬೇಕೋ ಗೊತ್ತಾಗಲಿಲ್ಲ ಎಂದು ಆ ದಿನವನ್ನು ನಟಿ ನೆನಪಿಸಿಕೊಂಡರು.

66
ನಾನೇ ಪ್ರಪೋಸ್​ ಮಾಡ್ದೆ

ಇಷ್ಟೆಲ್ಲಾ ಆದ ಮೇಲೆ ರಾಣವ್ ಕಾಲ್​ ಮಾಡಿದಾಗ ಅವರಿಗೂ ನನ್ನ ಮೇಲೆ ಲವ್​ ಆಗಿರೋದು ಗೊತ್ತಾಯ್ತು. ಅದರೆ ಅವರು ಆಗಲೂ ಅದರ ಬಗ್ಗೆ ಹೇಳಿಲ್ಲ. ಕೊನೆಗೆ ನಾನೇ ಪ್ರಪೋಸ್ ಮಾಡಿದೆ ಎಂದು ನಾಚಿಕೊಂಡು ಹೇಳಿದರು ನಟಿ. ನನಗೆ ನೀವಂದರೆ ಇಷ್ಟ ಅಂತ ಹೇಳಿದ್ದೆ. ಆಗ ಅವರೇ ಈಗ ಬೇಡ ಅಂತ ಒಂದಷ್ಟು ದಿನ ತಳ್ಳಿದರು. ಯಾಕಂದ್ರೆ, ಪ್ರಪೋಸ್ ಮಾಡಿದ ತಕ್ಷಣ ಒಪ್ಪಿಕೊಳ್ಳಬಾರದಲ್ವಾ, ಸ್ವಲ್ಪ ದಿನ ಆದ್ಮೇಲೆ ಅವರು ಪ್ರಮೋಸ್ ಮಾಡಿದರು. ಆಗ ನಾನು ಸ್ವಲ್ಪ ದಿನ ತಳ್ಳಿದೆ. ಯಾಕಂದ್ರೆ ಅವರು ಹಾಗೇ ಮಾಡಿದ್ರಲ್ಲ ಅದಕ್ಕೇ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories