Bigg Boss ಕಾವ್ಯಾ ಶೈವ ಬಗ್ಗೆ ಕೀಳು ಮಟ್ಟದ ಪ್ರಶ್ನೆ ಕೇಳಿದ ನೆಟ್ಟಿಗ: ಮುಟ್ಟಿಕೊಳ್ಳುವ ಉತ್ತರ ಕೊಟ್ಟ ನಟಿ

Published : Mar 23, 2026, 01:48 PM IST

ಬಿಗ್‌ಬಾಸ್ ಖ್ಯಾತಿಯ ಕಾವ್ಯಾ ಶೈವ ಅವರು ಅಭಿಮಾನಿಗಳಿಗಾಗಿ ಇಟ್ಟಿದ್ದ ಪ್ರಶ್ನೋತ್ತರ ಅವಧಿಯಲ್ಲಿ, ನೆಟ್ಟಿಗನೊಬ್ಬ 'ನೀವು ಧನುಷ್ ಅವರ 2ನೇ ಹೆಂಡತಿಯಾ' ಎಂದು ಅಸಭ್ಯವಾಗಿ ಪ್ರಶ್ನಿಸಿದ್ದಾನೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕಾವ್ಯಾ ಹೇಳಿದ್ದೇನು ಕೇಳಿ.

PREV
16
ಬಿಗ್​ಬಾಸ್​ ಖ್ಯಾತಿಯ ಕಾವ್ಯಾ ಶೈವ

ಬಿಗ್​ಬಾಸ್​ (Bigg Boss 12)ಮೂಲಕ ಸಾಕಷ್ಟು ಹೆಸರು ಮಾಡಿರುವವರು ನಟಿ ಕಾವ್ಯಾ ಶೈವ. ಬಿಗ್​ಬಾಸ್​​ ಮನೆಯಲ್ಲಿ ಆಟದ ಭಾಗವಾಗಿ ನಟಿ, ಗಿಲ್ಲಿ ನಟ ಮತ್ತು ಧನುಷ್​ ಇಬ್ಬರ ಜೊತೆಯೂ ಸ್ನೇಹದಿಂದ ಇದ್ದರು. ಅವರ ಜೊತೆಗಿನ ಒಡನಾಟವೂ ಚೆನ್ನಾಗಿತ್ತು.

26
ಪ್ರಶ್ನೆ ಕೇಳಿ ಎಂದಿದ್ದ ನಟಿ

ಇದೀಗ ನಟಿ, ತಮ್ಮ ಅಭಿಮಾನಿಗಳಿಗೆ ಏನಾದ್ರೂ ಪ್ರಶ್ನೆ ಕೇಳಿ (Ask me Anything) ಎನ್ನುವ ಸೆಷನ್​ ಶುರು ಮಾಡಿದ್ದರು. ತಮ್ಮ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುವುದಾಗಿ ಹೇಳಿದ್ದರು.

36
ಕೀಳು ಮಟ್ಟದ ಪ್ರಶ್ನೆ

ಇದನ್ನೇ ಬಂಡವಾಳ ಮಾಡಿಕೊಂಡ ನೆಟ್ಟಿಗನೊಬ್ಬ ಕೀಳು ಮಟ್ಟದ ಪ್ರಶ್ನೆ ಕೇಳಿ, ಕಾವ್ಯಾ ಅವರಿಂದ ಸರಿಯಾಗಿ ಉಗಿಸಿಕೊಂಡಿದ್ದಾನೆ. ಕೆಲವರು ಅಸಭ್ಯ, ಅಶ್ಲೀಲ ಮಟ್ಟಕ್ಕೆ ಇಳಿದು ವಿಕೃತ ಸಂತೋಷ ಪಡುವ ಸ್ವಭಾವದವರು ಇರುತ್ತಾರೆ. ಅದೇ ರೀತಿ ವಿಕೃತ ಮನಸ್ಸಿನ ಒಬ್ಬ ನೆಟ್ಟಿಗ ಇಂಥ ಪ್ರಶ್ನೆ ಕೇಳಿರಲಿಕ್ಕೆ ಸಾಕು.

46
ಧನುಷ್​ ಪತ್ನಿ!

ಅದೆಂಥ ಪ್ರಶ್ನೆ ಅಂದರೆ, ಕಾವು, ನೀವು ಧನುಷ್​ ಅವರ 2ನೇ ಹೆಂಡತಿ ಅಂತೆ ಹೌದಾ ಎಂದು ಪ್ರಶ್ನಿಸಿದ್ದಾನೆ. ಇದು ಆ ಪ್ರಶ್ನೆ ಕೇಳಿದ ನೆಟ್ಟಿಗನ ಕೀಳು ಮಟ್ಟದ ಮನಸ್ಥಿತಿಯನ್ನು ಚೆನ್ನಾಗಿ ಬಿಂಬಿಸುತ್ತದೆ.

56
ಮುಟ್ಟಿಕೊಳ್ಳುವ ಉತ್ತರ

ಇದಕ್ಕೆ ಮುಟ್ಟಿಕೊಳ್ಳುವ ಉತ್ತರ ನೀಡಿರುವ ಕಾವ್ಯಾ (Bigg Boss Kavya Shaiva) ಅವರು, ಸಾರಿ. ನಿಮ್ಮ ಸಹೋದರಿ ಅವರ ಎರಡನೆಯ ಪತ್ನಿ ಎಂದು ಕೇಳಿದ್ದೇನೆ. ಕೇಳಲು ಎಷ್ಟು ಚೆನ್ನಾಗಿರತ್ತೆ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಇಂಥ ಪ್ರಶ್ನೆ ಕೇಳುವುದರಿಂದ ಏನು ಖುಷಿ ಸಿಗುತ್ತದೆ, stop it, ನಾವೂ ಮನುಷ್ಯರೇ ಎಂದು ಬರೆದಿದ್ದಾರೆ.

66
ನೆಟ್ಟಿಗರು ಹೇಳಿದ್ದೇನು?

ಆ ಕೆಟ್ಟ ಪ್ರಶ್ನೆ ಕೇಳಿದವನಿಗೆ ನಟಿ ಸರಿಯಾದ ಉತ್ತರ ಕೊಟ್ಟಿದ್ದಾರೆ. ಆದರೆ ಇದರ ಹೊರತಾಗಿಯೂ ಧನುಷ್​ ಅವರ ಹೆಸರು ಎರಡೂ ಕಡೆ ಹಾಳಾಗಿದೆ. ಕಾವ್ಯಾ ಅವರು ಉತ್ತರ ಕೊಡುವ ಭರದಲ್ಲಿ ಧನುಷ್​ ಅವರ ಪತ್ನಿ ಎಂದು ಹೇಳಬಾರದಿತ್ತು, ಬೇರೆ ಏನನ್ನಾದರೂ ಶಬ್ದ ಬಳಕೆ ಮಾಡಬಹುದಿತ್ತು ಎಂದು ಕೆಲವರು ಅಭಿಪ್ರಾಯವಾಗಿದೆ. ಮತ್ತೆ ಕೆಲವರು ಇಂಥ ಕೀಳು ಪ್ರಶ್ನೆಗೆ ನಟಿ ಉತ್ತರಿಸಲೇಬಾರದಿತ್ತು ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories