ಪ್ರತಿಭೆಗಳಿಗಲ್ಲ, ಕಷ್ಟ ಹೇಳ್ಕೊಳ್ಳೋರಿಗೆ ಮಾತ್ರ ಚಾನ್ಸ್ ಎಂದ ವಿಪಿ ಸರ್… ಸರಿಗಮಪ ಚಿಂದಿ ಪ್ರೊಮೋ ರಿಲೀಸ್

Published : Mar 23, 2026, 01:01 PM IST

ಶೀಘ್ರದಲ್ಲೇ ಜೀ ಕನ್ನಡದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಶುರುವಾಗಲಿದೆ. ಇದೀಗ ಜೀ ಕನ್ನಡ ವಾಹಿನಿಯು ಪ್ರೊಮೋ ರಿಲೀಸ್ ಮಾಡಿದ್ದು, ಗಾಯಕ ವಿಜಯ್ ಪ್ರಕಾಶ್ ಅದ್ಭುತವಾಗಿ ನಟಿಸಿದ್ದು, ಟ್ರೋಲ್ ಮಾಡುವವರಿಗೆ ಸಖತ್ತಾಗಿ ತಿರುಗೇಟು ನೀಡಿದಂತಿದೆ ಪ್ರೋಮೋ. 

PREV
16
ಸರಿಗಮಪ ಲಿಟಲ್ ಚಾಂಪ್ಸ್

ಶೀಘ್ರದಲ್ಲೇ ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಶುರುವಾಗಲಿದೆ. ಈಗಾಗಲೇ ಎಲ್ಲೆಡೆ ಆಡಿಶನ್ ಕೂಡ ನಡೆದಿದೆ. ಇದೀಗ ಜೀ ಕನ್ನಡ ವಾಹಿನಿಯು ಒಂದು ಪ್ರೊಮೋ ರಿಲೀಸ್ ಮಾಡಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪ್ರೊಮೋ ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದಂತಿದೆ.

26
ಏನಿದೆ ಪ್ರೊಮೋದಲ್ಲಿ

ವೇದಿಕೆ ಮೇಲೆ ಬಾಲಕಿಯೊಬ್ಬಳು ಅದ್ಭುತವಾಗಿ ಹಾಡುತ್ತಿರುತ್ತಾಳೆ, ಈ ಸಂದರ್ಭದಲ್ಲಿ ಠಪೋರಿಯಂತೆ ವೇಷ ತೊಟ್ಟ ಗಾಯಕ ವಿಜಯ್ ಪ್ರಕಾಶ್ ಅವರು ತೀರ್ಪುಗಾರರ ಚೇರ್ ಮೇಲೆ ಕುಳಿತು, ಹಾಡು ಬಿಡಿ, ನಿಮಗೆ ಏನಾದ್ರು ಕಷ್ಟ ಇದೆಯೇ ಹೇಳಿ ಎನ್ನುತ್ತಾರೆ. ಆವಾಗ ಆ ಮಗುವಿಗೆ ತಂದೆ ತಾಯಿ, ನಮಗೆ ಕಷ್ಟ ಏನಿಲ್ಲ, ನಾವು ವೆಲ್ ಸೆಟಲ್ಡ್ ಎನ್ನುತ್ತಾರೆ. ಇದನ್ನು ಕೇಳಿದ ವಿಪಿ ಸರ್ ಕಷ್ಟ ಇಲ್ಲ ಅಂದ್ರೆ, ನಂಗೆ ಇಷ್ಟ ಇಲ್ಲ ರಿಜೆಕ್ಟ್ ಎನ್ನುತ್ತಾರೆ. ಇದನ್ನು ನೋಡಿ ಮನೆಯವರು ಶಾಕ್ ಆಗ್ತಾರೆ.

36
ಕಷ್ಟ ಹೇಳಿ ಕಣ್ಣೀರಿಟ್ಟ ಹುಡುಗನಿಗೆ ಚಾನ್ಸ್

ಮತ್ತೊಬ್ಬ ಹುಡುಗ ಆಡಿಶನ್ ಗೆ ಬಂದಾಗ, ನಿಂದೇನು ಕಷ್ಟ ಎನ್ನುತ್ತಾರೆ ವಿಪಿ ಸರ್. ಅದಕ್ಕೆ ಹುಡುಗ, ನಮ್ಮನೇಲಿ 9 ಜನ, ಕಷ್ಟ ಅಂದ್ರೆ, ಕಷ್ಟ. ಅಪ್ಪ ಕೂಲಿ ಕೆಲಸ ಮಾಡ್ತಾರೆ ಎನ್ನುತ್ತಾ ಅಳುತ್ತಾನೆ, ಬಳಿಕ ಹಾಡನ್ನು ಕೆಟ್ಟದಾಗಿ ಹಾಡುತ್ತಾನೆ. ಆ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಅವರು ಸೂಪರ್ ನೀನು ಸೆಲೆಕ್ಟೆಡ್ ಎನ್ನುತ್ತಾರೆ.

46
ನಿಜವಾಗ್ಲೂ ಹೀಗೆ ಆಯ್ತ?

ಇದೆಲ್ಲಾ ನಿಜ ಅಂತ ನಂಬಬೇಡಿ. ಯಾಕಂದ್ರೆ, ಬಹಳ ವರ್ಷಗಳಿಂದ ರಿಯಾಲಿಟಿ ಶೋಗಳಲ್ಲಿ ಜನರ ಕಷ್ಟಗಳನ್ನು ಕೇಳಿ ಆಯ್ಕೆ ಮಾಡುತ್ತಾರೆ, ಟಾಲೆಂಟ್ ಗೆ ಬೆಲೆ ಕೊಡುವುದಿಲ್ಲ ಎನ್ನುವ ಒಂದು ಮಾತು ಕೇಳಿಬರುತ್ತಿದೆ. ಆ ಟ್ರೋಲ್ ಗೆ ಉತ್ತರ ನೀಡಲು ಈ ಪ್ರೊಮೋ ರಿಲೀಸ್ ಮಾಡಲಾಗಿದ್ದು, ನಾವು ಆಡಿಶನ್ ಹೀಗೆ ಮಾಡಲ್ಲ ಎಂದಿದ್ದಾರೆ ವಿಜಯ್ ಪ್ರಕಾಶ್.

56
ಮತ್ತೆ ಹೇಗಾಗುತ್ತೆ ಆಡಿಶನ್?

ಆಡಿಶನ್ ಹೇಗಾಗುತ್ತೆ ಎಂದು ಹೇಳಿದ ವಿಜಯ್ ಪ್ರಕಾಶ್, ಕರ್ನಾಟಕದ 31 ಜಿಲ್ಲೆ, 239 ತಾಲ್ಲೂಕುಗಳಲ್ಲಿ, ನಮಗೆ ಒಂದು ಅವಕಾಶ ಸಿಕ್ಕರೆ ಸಾಕು, ಎಂದು ಬರುವ ಮಕ್ಕಳಲ್ಲಿ ನಾವು ಆಯ್ಕೆ ಮಾಡುವುದು ಕಷ್ಟ ಎಂದು ಬರುವವರನ್ನಲ್ಲ, ಬದಲಾಗಿ ಇಷ್ಟಪಟ್ಟು ಹಾಡುವ ಪ್ರತಿಭೆಗಳನ್ನು ಎನ್ನುತ್ತಾ ವಿಪಿ ಸರ್ ಬರ್ತಾ ಇದೆ ಸರಿಗಮಪ ಲಿಟಲ್ ಚಾಂಪ್ಸ್, ಇದು ನಾರ್ಮಲ್ ಸೀಸನ್ ಅಲ್ಲ, ಬರ್ತಿರೋದು ಸುನಾಮಿ ಗೆಟ್ ರೆಡಿ ಎಂದಿದ್ದಾರೆ.

66
ಯಾವಾಗ ಶುರು?

ಇನ್ನು ಯಾವಾಗ ಸರಿಗಮಪ ಲಿಟಲ್ ಚಾಂಪ್ಸ್ ಆರಂಭವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿ. ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಡೆಯುತ್ತಿದೆ. ಬಹುಶಃ ಅದು ಮುಗಿದ ಮೇಲೆಯೇ ಈ ಕಾರ್ಯಕ್ರಮ ಶುರುವಾಗಬಹುದು. ಈ ಬಾರಿ ವಿಜಯ್ ಪ್ರಕಾಶ್ ಇದ್ದಾರೆ ಅನ್ನೋದು ಕನಫರ್ಮ್ ಆಗಿದೆ. ಇವರ ಜೊತೆ ಅರ್ಜುನ್ ಜನ್ಯಾ, ರಾಜೇಶ್ ಕೃಷ್ಣನ್ ಹಾಗೂ ಹಂಸಲೇಖ ಅವರು ಇದ್ದಾರೆಯೇ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories