‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಬಂಗಾರಮ್ಮನ ಪಾತ್ರವನ್ನು ಹಲವು ದಿನಗಳಿಂದ ತೋರಿಸುತ್ತಲೇ ಇಲ್ಲ. ಸೀರಿಯಸ್ ಆಗಿ ಐಸಿಯು ಸೇರಿಕೊಂಡಿದ್ದ ಬಂಗಾರಮ್ಮನ ಪಾತ್ರದಲ್ಲಿ ಮುಂದೆ ಯಾರು ನಟಿಸಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಈಗ ಬಂದಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇಲ್ಲಿವರೆಗೆ ಮಂಜುಭಾಷಿಣಿಯವರು ಬಂಗಾರಮ್ಮನ ಪಾತ್ರ ಮಾಡಿಕೊಂಡು ಬಂದಿದ್ದರು. ಆದರೆ ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ, ಆ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.
26
ಏನಾಗ್ತಿದೆ ಧಾರಾವಾಹಿಯಲ್ಲಿ?
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಬಂಗಾರಮ್ಮ ಸಾವು -ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಐಸಿಯುನಲ್ಲಿರುವ ಬಂಗಾರಮ್ಮನ ಮುಖವನ್ನು ನೋಡೋದಕ್ಕೂ ಸಾಧ್ಯವಾಗಿಲ್ಲ. ತನ್ನ ಗೆಳತಿಗೆ ಆದ ಅನ್ಯಾಯವನ್ನು ಕಂಡು ಪುಟ್ಟಕ್ಕ ನೊಂದಿದ್ದಾರೆ.
36
ತ್ರಿಶೂಲದಲ್ಲಿ ಕೈ ಚುಚ್ಚಿಸಿಕೊಂಡ ಪುಟ್ಟಕ್ಕ
ತನ್ನ ಜೀವದ ಗೆಳತಿ ಅಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವುದನ್ನು ನೋಡಿ ಪುಟ್ಟಕ್ಕ ದೇವರ ಗುಡಿಗೆ ಬಂದು ತ್ರಿಶೂಲದಲ್ಲಿ ಕೈ ಚುಚಿಸಿಕೊಂಡು, ಅಮ್ಮಾವ್ರು ಹುಷಾರಾಗಿದ್ದಾರೆ ಎಂದು ಕೇಳುವವರೆಗೂ ನಾನು ಇಲ್ಲಿಂದ ಕೈ ತೆಗಿಯಲ್ಲ ಎಂದಿದ್ದಾರೆ.
ಇದೀಗ ಪುಟ್ಟಕ್ಕನ ಹರಕೆ ಫಲಿಸಿದೆ. ಬಂಗಾರಮ್ಮನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ. ಇದನ್ನು ಕೇಳಿ ಕಂಠಿ ಸಂಭ್ರಮ ವ್ಯಕ್ತಪಡಿಸಿದ್ದಾನೆ, ಜೊತೆಗೆ ಊರಿಗೆಲ್ಲಾ ಹಬ್ಬ ಮಾಡುವಂತೆ ಹೇಳಿದ್ದಾನೆ.
56
ಬದಲಾಗಿಲ್ವಾ ಬಂಗಾರಮ್ಮ
ಮಂಜುಭಾಷಿಣಿಯವರು ಬಿಗ್ ಬಾಸ್ ಮನೆಗೆ ಹೋಗಿರೋದರಿಂದ ಮಂಜುಭಾಷಿಣಿ ಪಾತ್ರ ಬದಲಾವಣೆ ಆಗುತ್ತೆ ಎನ್ನಲಾಗುತ್ತಿತ್ತು. ಆದರೆ ಇದೀಗ ಧಾರಾವಾಹಿಯ ಪ್ರೊಮೋ ನೋಡಿದ್ರೆ ಮತ್ತೆ ಮಂಜುಭಾಷಿಣಿಯವರೇ ಧಾರಾವಾಹಿಯಲ್ಲಿ ನಟಿಸುತ್ತಿರುವಂತೆ ಕಾಣಿಸುತ್ತಿದೆ.
66
ಏನಿದೆ ಪ್ರೊಮೋದಲ್ಲಿ
ಬಂಗಾರಮ್ಮನ ಚೇತರಿಕೆಯ ಪ್ರೊಮೋ ತೋರಿಸಿದ ಜೀ ಕನ್ನಡ ಕೊನೆಗೆ ಬಂಗಾರಮ್ಮ ಅಂದ್ರೆ ಮಂಜುಭಾಷಿಣಿಯವರ ಫೋಟೊವನ್ನೇ ತೋರಿಸಿದ್ದಾರೆ. ಹಾಗಾಗಿ ಮತ್ತೆ ಅವರೇ ಆ ಪಾತ್ರಕ್ಕೆ ಜೀವತುಂಬಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಈ ಧಾರಾವಾಹಿ ಶೀಘ್ರದಲ್ಲೇ ಕೊನೆಯಾಗಲಿದೆ ಎನ್ನುವ ಸುದ್ದಿ ಕೂಡ ಇದೆ.