Puttakkana Makkalu ‘ಅಂತಿಮ ಅಧ್ಯಾಯ’... ಗಂಭೀರ ಸ್ಥಿತಿಯಲ್ಲಿ ಕಂಠಿ-ಸ್ನೇಹಾ !

Published : Mar 04, 2026, 03:34 PM IST

Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಶೂಟಿಂಗ್ ಮುಗಿಸಿ ತಿಂಗಳಾದ ಬಳಿಕ ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಅಂತಿಮ ಅಧ್ಯಾಯ ಪ್ರಸಾರವಾಗುತ್ತಿದೆ. ಕೊನೆಯ ಎಪಿಸೋಡ್ ಪ್ರೋಮೊ ಪ್ರಸಾರವಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ ಕಂಠಿ ಮತ್ತು ಸ್ನೇಹಾ. 

PREV
16
ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಥೆ ಎತ್ತೆತ್ತಲೋ ಸಾಗಿ, ಇಬ್ಬರು ಪ್ರಮುಖ ನಟರನ್ನು ಸಾಯಿಸಿ, ಕೊನೆಗೆ ಧಾರಾವಾಹಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ತಿಂಗಳುಗಳ ಹಿಂದೆಯೇ ಶೂಟಿಂಗ್ ಮುಗಿಸಿದ ಪುಟ್ಟಕ್ಕ ಮತ್ತು ಟೀಮ್ ಕೊನೆಗೂ ಮುಕ್ತಾಯವಾಗುತ್ತಿದೆ.

26
ಅಂತಿಮ ಅಧ್ಯಾಯ

ಇದೀಗ ‘ಪುಟ್ಟಕ್ಕನ ಮಕ್ಕಳು’ ಅಂತಿಮ ಅಧ್ಯಾಯದ ಪ್ರೊಮೊ ಬಿಡುಗಡೆಯಾಗಿದೆ. ಹಾಗಂತ ಸೀರಿಯಲ್ ಇವತ್ತೇ ಮುಗಿಯುತ್ತಾ ಅಥವಾ ಈ ವಾರ ಪೂರ್ತಿ ಅಂತಿಮ ಅಧ್ಯಾಯ ಪ್ರಸಾರವಾಗಿ, ಮುಂದಿನ ವಾರದಿಂದ ಹೊಸ ಧಾರಾವಾಹಿ ಶುರುವಾಗುತ್ತಾ ಅನ್ನೋದು ಗೊತ್ತಿಲ್ಲ. ಪ್ರೊಮೋ ನೋಡಿದರೆ, ಇವತ್ತೇನೆ ಅಂತ್ಯ ಹಾಡುವಂತಿದೆ.

36
ಇದೇನಾಯ್ತು ಕಂಠಿ ಮತ್ತು ಸ್ನೇಹಾಗೆ

ಪ್ರೊಮೋದಲ್ಲಿ ತೋರಿಸಿರುವಂತೆ ಕಂಠಿ ಮತ್ತು ಸ್ನೇಹಾ ಇಬ್ಬರು ಕೂಡ ಪಾಯದಲ್ಲಿದ್ದಾರೆ. ಕಂಠಿ ಹೊಟ್ಟೆಗೆ ವಿಲನ್ ಆಗಿರುವ ರಾಧಾ ಚಾಕುವಿನಿಂದ ಇರಿದರೆ, ತುಂಬು ಗರ್ಭಿಣಿ ಸ್ನೇಹಾ ಗಂಡನನ್ನು ರಕ್ತದ ಮಡುವಿನಲ್ಲಿ ನೋಡಿ ಎಡವಿ ಬಿದ್ದಿದ್ದಾಳೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

46
ಕೊನೆಗೂ ಹ್ಯಾಪಿ ಎಂಡಿಂಗ್

ಇಬಬ್ರು ಆಸ್ಪತ್ರೆಗೆ ದಾಖಲಾದ ಮಾತ್ರಕ್ಕೆ ಧಾರಾವಾಹಿ ಸ್ಯಾಡ್ ಎಂಡಿಂಗ್ ಖಂಡಿತವಾಗಿಯೂ ಆಗುತ್ತಿಲ್ಲ. ಬದಲಾಗಿ ಇಬ್ಬರು ಕೂಡ ಚೇತರಿಸಿಕೊಂಡಿದ್ದಾರೆ, ಅಷ್ಟೇ ಅಲ್ಲದೇ ಸ್ನೇಹಾಗೆ ಮಗು ಜನಿಸಿದೆ. ಪುಟ್ಟಕ್ಕ ಸಂಭ್ರಮದಿಂದ ಮಗುವನ್ನು ಎತ್ತಿಕೊಂಡು ಬಂದಿದ್ದಾಳೆ.

56
ಮರಿ ಬಂಗಾರಮ್ಮನ ಆಗಮನ

ಮಗುವಾದರೆ ಸ್ನೇಹಾ ಸಾಯುತ್ತಾಳೆ ಎನ್ನಲಾಗುತ್ತಿತ್ತು. ಆದರೆ ಕೊನೆಗೆ ಹಾಗೇನೂ ಆಗಿಲ್ಲ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಗೆಳತಿ ಬಂಗಾರಮ್ಮ ಮತ್ತೆ ಹುಟ್ಟಿ ಬಂದಳು ಎನ್ನುವ ಸಂಭ್ರಮದಲ್ಲಿದ್ದಾಳೆ ಪುಟ್ಟಕ್ಕ ಮತ್ತು ಮನೆಮಂದಿ.

66
ಯಾರೆಲ್ಲಾ ನಟಿಸುತ್ತಿದ್ದಾರೆ?

ಆರೂರು ಜಗದೀಶ್ ನಿರ್ದೇಶನ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ನಟಿಸುತ್ತಿದ್ದಾರೆ. ಧನುಷ್ ಗೌಡ, ಮಂಜುಭಾಷಿಣಿ, ಅಕ್ಷರಾ, ರಮೇಶ್ ಪಂಡಿತ್, ಸಂಜನಾ ಬುರ್ಲಿ, ಹಂಸಾ, ಅನಿರಿಶ್, ರಮ್ಯಾ ರಾಜು ಸೇರಿ ಹಲವು ನಟರು ನಟಿಸಿದ್ದಾರೆ. ಈ ಧಾರಾವಾಹಿ 1200 ಎಪಿಸೋಡ್ ಪೂರ್ಣಗೊಳಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories