'ನನ್ನ ಪ್ರಾರ್ಥನೆ ಈಡೇರಲೇ ಇಲ್ಲ' ಎಂದ Naa Ninna Bidalaare ಅಂಬಿಕಾ ಶೂಟಿಂಗ್​ನ ಅವಘಡ ಹೀಗೆ ವಿವರಿಸಿದ್ರು

Published : Mar 04, 2026, 12:41 PM IST

'ನಾ ನಿನ್ನ ಬಿಡಲಾರೆ' ಸೀರಿಯಲ್ ಖ್ಯಾತಿಯ ನಟಿ ನೀತಾ ಅಶೋಕ್ ಅವರು ಶೂಟಿಂಗ್ ವೇಳೆ ಕಾಲು ಮುರಿದುಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸರ್ಜರಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿಯೇ ಕೆಲವು ದೃಶ್ಯಗಳ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಈ ಕುರಿತು ನಟಿ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

PREV
16
ಕ್ಯೂಟ್​ ದೆವ್ವ ಅಂಬಿಕಾ

ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್​ನಲ್ಲಿ ಕ್ಯೂಟ್​ ದೆವ್ವ ಆಗಿ ಮಿಂಚುತ್ತಿರುವ ಅಂಬಿಕಾ ರಿಯಲ್​ ಹೆಸರು ನೀತಾ ಅಶೋಕ್​. ನೀತಾ ಅವರು ಶೂಟಿಂಗ್​ ವೇಳೆ ನಡೆದ ಅವಘಡ ಸಂಭವಿಸಿ ಕಾಲಿಗೆ ಫ್ರ್ಯಾಕ್ಚರ್​ ಮಾಡಿಕೊಂಡಿದ್ದಾರೆ. ಸದ್ಯ ಅವರ ಉಪಸ್ಥಿತಿಯ ದೃಶ್ಯಗಳ ಶೂಟಿಂಗ್​ ಅವಘಡಕ್ಕಿಂತ ಮುಂಚೆಯೇ ನಡೆದಿದ್ದನ್ನು ಸದ್ಯ ಸೀರಿಯಲ್​ನಲ್ಲಿ ತೋರಿಸಲಾಗುತ್ತಿದೆ. ಕಾಲಿನ ಆಪರೇಷನ್​ ಆಗಿದ್ದು, ಆಸ್ಪತ್ರೆಯಲ್ಲಿಯೇ ಕೆಲವೊಂದು ದೃಶ್ಯಗಳ ಶೂಟಿಂಗ್​ ಕೂಡ ನಡೆದಿದೆ. ಈ ಎಲ್ಲವುಗಳ ಬಗ್ಗೆ ಖುದ್ದು ನಟಿ ಈಗ ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

26
ಆಗಿದ್ದೇನು?

ನಟಿಯೇ ಹೇಳಿರುವಂತೆ, ಅಂದು ಶೂಟಿಂಗ್​ ನಡೆಯುತ್ತಿದ್ದಾಗ ಬಿಸಿಲು ಇದ್ದುದರಿಂದ ಹೋಗಿ ನೆರಳಿನಲ್ಲಿ ಕುಳಿತುಕೊಳ್ಳಿ ಎಂದರು. ಅಲ್ಲಿಗೆ ಎದ್ದು ಹೋಗಿ ಕುಳಿತುಕೊಳ್ಳುವಾಗ ಕಾಲು ಟ್ವಿಸ್ಟ್​ ಆಯಿತು. ತುಂಬಾ ನೋವಾಯಿತು. ವೈದ್ಯರು ಕೂಡಲೇ ಪೇನ್​ ಕಿಲ್ಲರ್​ ಇಂಜೆಕ್ಷನ್​ ಕೊಡಿಸಿ, ಕೂಡಲೇ ಎಕ್ಸ್​ರೇ ಮಾಡಿಸಿ ಎಂದರು ಎಂದು ನಟಿ ನೆನಪಿಸಿಕೊಂಡಿದ್ದಾರೆ.

36
ಪ್ರಾರ್ಥನೆ ಈಡೇರಲಿಲ್ಲ

ಎಕ್ಸ್​ರೇ ಮಾಡಿದಾಗ ಫ್ರಾಕ್ಚರ್ ಆಗದೇ ಇರಲಿ ಎಂದು ದೇವರಲ್ಲಿ ತುಂಬಾ ಪ್ರಾರ್ಥಿಸಿಕೊಂಡೆ. ಆದರೆ ಬ್ಯಾಡ್​ ಲಕ್​, ಫ್ರ್ಯಾಕ್ಚರ್​ ಆಗಿ ಹೋಗಿತ್ತು ಎಂದಿದ್ದಾರೆ ನೀತಾ ಅಶೋಕ್​. ವೈದ್ಯರು ಕೂಡಲೇ ಸರ್ಜರಿ ಮಾಡಬೇಕು ಎಂದರು. ಸರ್ಜರಿ ಹೆಸರು ಕೇಳುತ್ತಿದ್ದಂತೆಯೇ ನನ್ನ ಮೀಟರ್​ ಆಫ್​ ಆಗೋಯ್ತು. ಆದರೂ ಎಲ್ಲರ ಒಪೀನಿಯನ್​ ತೆಗೆದುಕೊಂಡು ಸರ್ಜರಿಗೆ ಓಕೆ ಎಂದೆ ಎಂದಿದ್ದಾರೆ.

46
ಆಸ್ಪತ್ರೆಯಲ್ಲಿಯೇ ಶೂಟಿಂಗ್​

ಸರ್ಜರಿ ಸೋಮವಾರ ಮಾಡ್ತೇನೆ ಎಂದಿದ್ದರು. ಆದ್ದರಿಂದ ಭಾನುವಾರವೇ ಆಸ್ಪತ್ರೆಯಲ್ಲಿ ಶೂಟಿಂಗ್ ತಂಡ ಬಂದು ಕೆಲವೊಂದು ಕ್ಲೋಸ್​ ಅಪ್​ ಶಾರ್ಟ್ಸ್​ ತೆಗೆದುಕೊಂಡು ಹೋಯಿತು. ತುಂಬಾ ಸಹಕರಿಸಿ ನನಗೆ ಎಲ್ಲಾ ರೀತಿಯ ಸಹಾಯ ಮಾಡಲಾಯಿತು ಎಂದು ನೆನಪಿಸಿಕೊಂಡಿದ್ದಾರೆ ನಟಿ.

56
ಸೋಮವಾರ ಸರ್ಜರಿ

ಅದೇ ನೈಟ್​ ಅಡ್ಮಿಟ್​ ಆದೆ. ಸೋಮವಾರ ಸರ್ಜರಿ ಮಾಡಿದ್ರು. ಆ ಟೆಸ್ಟ್​ ಈ ಟೆಸ್ಟ್​ ಎಲ್ಲಾ ಆಗಿ ಬೆಳಿಗ್ಗೆ 11.30 ಒಳಗೆ ಎಲ್ಲಾ ತಿಂದು, ಕುಡಿದು ಮುಗಿಸಿದ ಮೇಲೆ ಸರ್ಜರಿ ಆರಂಭವಾಯ್ತು ಎಂದು ಅಂದಿನ ಆತಂಕವನ್ನು ಹೇಳಿದ್ದಾರೆ ನಟಿ.

66
ಗಂಡನ ಬಳಿ ಸೇವೆ

ಬೆಳಿಗ್ಗೆ ನಸುಕಿನಲ್ಲಿಯೇ ಆಪರೇಷನ್​ ಎಲ್ಲಾ ಆಯ್ತು. ಗಂಡನ ಬಳಿ ಸೇವೆಯನ್ನೂ ಮಾಡಿಸಿಕೊಂಡೆ. ಕೊನೆಗೆ ಎರಡು ದಿನ ಅಲ್ಲಿಯೇ ಇದ್ದು, ಇದೀಗ ಟಾಟಾ ಬೈಬೈ ಹೇಳಿ ಅದೇ ಕಾಲಿನಿಂದ ಮನೆಗೆ ಸೇರಿದ್ದೇನೆ ಎಂದಿದ್ದಾರೆ ನಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories