ಬಾತ್​ ಟಬ್​ನಲ್ಲಿ ಪುಟ್ಟಗೌರಿ ಸಾನ್ಯಾ ಬೋಲ್ಡ್ ಪೋಸ್: We Want in Bikini ಎಂದ ಫ್ಯಾನ್ಸ್‌!

First Published | Dec 14, 2023, 3:59 PM IST

ಪುಟ್ಟಗೌರಿ ಖ್ಯಾತಿಯ ಸಾನ್ಯ ಅಯ್ಯರ್ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಬಾತ್ ಟಬ್‌ನಲ್ಲಿ ಮಲಗಿಕೊಂಡು ಪೋಸ್ ಕೊಟ್ಟಿದ್ದಾರೆ.

ಸಾನ್ಯ ಅಯ್ಯರ್ ಇತ್ತೀಚೆಗಷ್ಟೇ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ ಅಲ್ಲಿ ವಾಕ್ ಮಾಡಿದ್ದರು. ವಿಶೇಷ ಮತ್ತು ವಿಭಿನ್ನ ಅನಿಸೋ ಕಾಸ್ಟೂಮ್ ತೊಟ್ಟು ಕಾಣಿಸಿಕೊಂಡಿದ್ದರು. ಆದರೆ ಇದೇ ಕಾಸ್ಟೂಮ್‌ನಲ್ಲಿಯೇ ಬಾತ್ ಟಬ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

ಸಾನ್ಯ ಅಯ್ಯರ್ ಈ ರೀತಿ ಫೋಟೋ ಶೂಟ್ ಮಾಡಿಸಿರೋದು ಫಸ್ಟ್ ಟೈಮ್ ಅನಿಸುತ್ತದೆ. ಬಾತ್ ರೂಮ್‌ನಲ್ಲಿ ಈ ಹಿಂದೆ ರಶ್ಮಿಕಾ ಮಂದಣ್ಣ ಹಾಗೂ ಸಂಗೀತಾ ಶೃಂಗೇರಿ ಫೋಟೋ ಶೂಟ್ ಮಾಡಿಸಿದ್ದರು. ಆ ಸಾಲಿಗೇ ಇದೀಗ ಸಾನ್ಯ ಅಯ್ಯರ್ ಸೇರಿದ್ದು ಅವರ ಫೋಟೋಗಳು ಅತಿ ಹೆಚ್ಚು ಗಮನ ಸೆಳೆಯುತ್ತಿವೆ.

Tap to resize

ಸಾನ್ಯ ಅಯ್ಯರ್ ಫೋಟೋಗಳನ್ನು ನೋಡಿದ ನೆಟ್ಟಿಗರು, ಕ್ವೀನ್, ಹಾಟ್, ಕರ್ನಾಟಕ ಮಿಲ್ಕಿ ಬ್ಯೂಟಿ ಎಂದರೆ, ಇನ್ನೊಬ್ಬ ನೆಟ್ಟಿಗ We Want in Bikini (ಬಿಕಿನಿ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳಿ) ಎಂದು ಕಾಮೆಂಟ್ ಮಾಡಿದ್ದಾರೆ.

ಸಾನ್ಯ ಅಯ್ಯರ್ ಈ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗ್ರಾಫರ್ ಉಮೇಶ್ ಈ ಫೋಟೋಗಳನ್ನ ಸೆರೆ ಹಿಡಿದಿದ್ದು, ಇವುಗಳನ್ನ ನೋಡಿದ ಪಡ್ಡೆಹೈಕ್ಳು ಸಾನ್ಯಾ ಬ್ಯೂಟಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಸಾನ್ಯ ಅಯ್ಯರ್ ಈ ಹಿಂದೆ ಬಾಲಿವುಡ್‌ನ ಹೆಸರಾಂತ ಫೋಟೋ ಗ್ರಾಫರ್ ಡಬೂ ರತ್ನಾನಿ ಬಳಿ ಫೋಟೋ ಶೂಟ್ ಮಾಡಿಸಿದ್ದರು. ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅದರಂತೆ ಇದೀಗ ಫ್ಯಾಷನ್ ವೀಕ್‌ಗಾಗಿಯೇ ತೊಟ್ಟ ಕಾಸ್ಟೂಮ್ ಅತಿ ಹೆಚ್ಚು ವೈರಲ್ ಆಗಿದೆ.

ಸ್ಟಾರ್ ಡೈರೆಕ್ಟರ್​ ಇಂದ್ರಜಿತ್ ಲಂಕೇಶ್​ ಸಿನಿಮಾದಲ್ಲಿ ಸಾನ್ಯಾ ಅಯ್ಯರ್​ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಇಂಡಸ್ಟ್ರಿಗೆ ಎಂಟ್ರಿ ಕೊಡೊಕೆ ಸಜ್ಜಾದ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್​ಗೆ ಸಾನ್ಯಾ ಜೋಡಿಯಾಗಿದ್ದಾರೆ.

Latest Videos

click me!