ಕಳೆದ ಎರಡು ದಶಕಗಳಿಂದ ಕನ್ನಡ ಕಿರುತೆರೆ ಲೋಕದ ಖಳನಾಯಕಿಯಾಗಿ ಜನಪ್ರಿಯತೆ ಪಡೆದಿರುವ ಇಳಾ ವಿಟ್ಲ, ಬಿಗ್ ಬಾಸ್ ವಿನಯ್ ವಿರುದ್ಧ ಧ್ವನಿ ಎತ್ತಿದ್ದಾರೆ.
ಕಾದಂಬರಿ ಧಾರಾವಾಹಿ ಮೂಲಕ ಫೇಮ್ ಪಡೆದ ಇಳಾ ಅಕ್ಷ ಎನ್ನುವ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದಲ್ಲಿ ನಟಿಸಿದ್ದಾರೆ. ಇಳಾ ಹಾಕಿರುವ ಫೋಸ್ಟ್ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ವಿನಯ್ ಗೌಡ ವಿರುದ್ಧ ಇಳಾ ವಿಟ್ಲ ಪೋಸ್ಟ್ ಹಾಕಿದ್ದಾರೆ. ಗೊತ್ತಿಲ್ಲದೆ ಆಗಿರುವ ಗಾಯವನ್ನು ಹಲ್ಲೆ ಎಂದು ಪ್ರಶ್ನೆ ಮಾಡಬಹುದಾ ಎಂದಿದ್ದಾರೆ ನೆಟ್ಟಿಗರು.
ಹೌದು! ಸೂಪರ್ ಜೋಡಿ ಸಮಯದಲ್ಲಿ ವಿನಯ್ ಗೌಡ ಆಟದ ಬರದಲ್ಲಿ ಮಾಡಿರುವ ಎಡವಟ್ಟನ್ನು ಇಳಾ ವಿಟ್ಲ ಈಗ ಫೇಸ್‌ಬುಕ್‌ನಲ್ಲಿ ಫೋಸ್ಟ್ ಹಾಕಿ ಪ್ರಶ್ನೆ ಮಾಡಿದ್ದಾರೆ.
ನನಗೇನಾದ್ರೂ ಆದ್ರೆ ನಾನು ಸುಮ್ನೆ ಬಿಡಲ್ಲ ಸುಮ್ನೆ ಬಿಡಲ್ಲ ಅಂತಾನೆ ಇರ್ತಾರಲ್ವಾ...ಏನ್ ಮಾಡ್ತಾರೆ ಏನ್ ಮಾಡಲು ಸಾಧ್ಯ ಹಾಗೂ ಏನು ಮಾಡಿದ್ದಾರೆ ಎಂದು ಇಳಾ ಬರೆದುಕೊಂಡಿದ್ದಾರೆ.
ವಿನಯ್ ಮತ್ತು ಇಳಾ ಪತಿ ಆಟ ಆಡುವಾಗ ದವಡೆ ಹಲ್ಲು ಮುರಿದ್ರು ಅಷ್ಟು ಸಾಲದು ಅಂತ ರಿಬ್ಬು ಫ್ಯಾಕ್ಚರ್ ಮಾಡಿದರಂತೆ. 6 ತಿಂಗಳು ಸಂಪೂರ್ಣ ರೆಸ್ಟ್‌ನಲ್ಲಿದ್ದರಂತೆ.
ವಿನಯ್‌ಗೆ ಹೆಸರು ಮಾಡಲು ಬಂದಿದ್ದಾರಾ ಅಥವಾ ಹೆಸರು ಹಾಳು ಮಾಡಿಕೊಳ್ಳಲು ಬಂದಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಇಳಾ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕಂಟ್ರೋಲ್ ಇಲ್ಲದೆ ಮಾತನಾಡುತ್ತಾರೆ ವರ್ತಿಸುತ್ತಾರೆ ಅಂದ್ರೆ ಹೊರಗಡೆ ಹೇಗಿರಬಹುದು ಅನ್ನೋ ಪ್ರಶ್ನೆ ಜನರಿಗೆ ಕೇಳಿದ್ದಾರೆ ಇಳಾ.
ಇಳಾ ಪೋಸ್ಟ್‌ನಲ್ಲಿ ವಿನಯ್ ವಿರುದ್ಧ ಸಾಕಷ್ಟು ಜನ ಮಾತನಾಡಿದ್ದಾರೆ. ಒಟ್ಟಾರೆ ಇಳಾ ಹೇಳುತ್ತಿರುವುದು ಸತ್ಯ ಸರಿ ವಿನಯ್ ಮಾಡಿರುವ ಸಾಧ್ಯತೆಗಳು ಹೆಚ್ಚಿದೆ ಎನ್ನುತ್ತಿದ್ದಾರೆ.