ಗಿಣಿರಾಮ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಮಹತಿ ಖ್ಯಾತಿಯ ನಯನಾ ನಾಗರಾಜ್ ಯಾರಿಗೆ ಗೊತ್ತಿಲ್ಲ, ಹೇಳಿ ಅಪ್ಪನ ಪಾಲಿನ ಹೆಮ್ಮೆಯ ಮಗಳಾಗಿ ಅನ್ಯಾಯದ ರಾಜಕೀಯದ ವಿರುದ್ಧ ಪ್ರತಿಭಟಿಸುವ ಪಾತ್ರದಲ್ಲಿ ಮಹತಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಉತ್ತರ ಕರ್ನಾಟಕದ ಭಾಷೆಯ ಬಳಕೆಯ ಕಾರಣಕ್ಕೆ ಈ ಸೀರಿಯಲ್ ಸಖತ್ ಫೇಮಸ್ ಆಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಮಹತಿ ಬಗ್ಗೆ ಎಲ್ಲರಿಗೂ ಗೊತ್ತು. ಮಹತಿ ಬಾಯಲ್ಲಿ ಬಾಯ್ತುಂಬ ಹಲ್ಲುಗಳಿದ್ದವು.
ಅವು ಮೊಲದ ಹಲ್ಲುಗಳಂತೆ ಕಂಡರೂ ಆ ಹಲ್ಲುಗಳಲ್ಲೂ ಬಹಳ ಮುದ್ದಾಗಿ ಕಾಣುತ್ತಿದ್ದರು ನಟಿ. ಆದರೆ ಈಗ ಆ ಹಲ್ಲುಗಳಿಗೆ ಕತ್ತರಿ ಹಾಕಿದ್ದಾರೆ ಮಹತಿ.
ಈ ಹಿಂದೆ ಸೀರಿಯಲ್ ಹೊರತಾಗಿ ಬೇರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಮಹತಿ ಅವರು ತಮ್ಮ ಆ ಹಲ್ಲಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ನನ್ನ ಹಲ್ಲು ನನ್ನ ಅದೃಷ್ಟ ಅವಕಾಶ ಸಿಕ್ಕದಿದ್ದರೂ ಪರವಾಗಿಲ್ಲ ಹಲ್ಲು ಮಾತ್ರ ಹೀಗೆ ಇರಲಿ ಎಂದು ಹೇಳಿಕೊಂಡಿದ್ದರು. ಆದರೆ ಈಗ ಏನಾಯ್ತೋ ಏನೋ ಹಲ್ಲಿಗೆ ಕತ್ತರಿ ಹಾಕಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಸ್ವತಃ ಮಹತಿ ಅವರೇ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ವೀಡಿಯೋ ಸಮೇತ ತಮ್ಮ ಹೊಸ ಲುಕ್ ಅನ್ನು ನಟಿ ಮಹತಿ ಅಲಿಯಾಸ್ ನಯನಾ ನಾಗರಾಜ್ ಹಂಚಿಕೊಂಡಿದ್ದು, ಈ ವೀಡಿಯೋ ನೋಡಿದ ಅಭಿಮಾನಿಗಳು ಮಾತ್ರ ನೀವು ಮೊದಲೇ ಚೆನ್ನಾಗಿದ್ದೀರಿ ಏಕೆ ಈ ರೀತಿ ಮಾಡಿದ್ದೀರಿ ಎಂದು ಕೇಳಿದ್ದಾರೆ.
ಅದಕ್ಕೆ ಉತ್ತರಿಸಿ ನಯನಾ ನಾಗರಾಜ್ ನನಗೆ ಅದರಿಂದ ಸಮಸ್ಯೆಯಾಗುತ್ತಿತ್ತು ಬೇರೆ ದಾರಿ ಇರಲಿಲ್ಲ. ಇದೇ ಕಾರಣಕ್ಕೆ ನಾನು ಅವುಗಳಿಗೆ ಕತ್ತರಿ ಹಾಕಬೇಕಾಯ್ತು ಎಂದು ಹೇಳಿಕೊಂಡಿದ್ದಾರೆ.
ಈ ಶಸ್ತ್ರಚಿಕಿತ್ಸೆ ನೋವಿನಿಂದ ಕೂಡಿಲ್ಲ ಎಂದರೆ ಸುಳ್ಳಾಗುತ್ತದೆ. ಆದರೆ ಇಂಜೆಕ್ಷನ್ ಕೂಡ ತೆಗೆದುಕೊಳ್ಳಲು ಹೆದರುತ್ತಿದ್ದ ನನಗೆ ಈ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಧೈರ್ಯ ತುಂಬಿದ್ದು ವೈದ್ಯ ದಂತ ತಜ್ಞ ಡಾ. ಆದರ್ಶ ಅವರು. ಅವರು ಆರಂಭದಿಂದಲೂ ಕೊನೆಯವರೆಗೂ ನನಗೆ ಧೈರ್ಯ ತುಂಬಿ ಎಲ್ಲ ವಿವರಗಳನ್ನು ಸರಿಯಾಗಿ ತಿಳಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಮಾಡಿದರು.
ನನಗೆ ಹಲ್ಲಿನಲ್ಲಿ ಸ್ವಲ್ಪ ತೊಂದರೆ ಇತ್ತು. ಆದರ್ಶ ಅವರು ಎಲ್ಲವನ್ನು ನನಗೆ ಸರಿಯಾಗಿ ವಿವರಿಸಿದ್ದರು. ನಾನು ತುಂಬಾ ಭಯಗೊಂಡಿದ್ದೆ. ಆದರೆ ಡಾ ಆದರ್ಶ ಅವರು ಅವರ ಕೆಲಸ ಏನೆಂದು ತೋರಿಸಿದರು. ಅಲ್ಲದೇ ನಾನು ಹೇಗೆ ಕಾಣುವೆ ಎಂಬುದನ್ನು ಅವರು ನನಗೆ ತೋರಿಸಿದ್ದರು. ಹೀಗಾಗಿ ನಾನು ಮುಂದೆ ಹೋದೆ.
ನಾನು ಈ ಕೆಲಸಕ್ಕೆ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿದೆ. ನನಗೆ ಈ ರೀತಿಯ ನಗು ನೀಡಿದ್ದಕ್ಕೆ ವೈದ್ಯರಿಗೆ ತುಂಬ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ ಮಹತಿ ಅಲಿಯಾಸ್ ನಯನಾ.
ವೀಡಿಯೋ ನೋಡಿದ ವೀಕ್ಷಕರನೇಕರು ಆ ಹಲ್ಲುಗಳಿಂದಲೇ ಬಹಳ ಚೆನ್ನಾಗಿ ಕಾಣುತ್ತಿದ್ದೀರಿ ಅದನ್ನು ತೆಗೆಸಬಾರದಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಸಂಪೂರ್ಣ ಕಾರ್ಯಕ್ಕೆ ಎಷ್ಟು ವರ್ಷ ಹಿಡಿಯಿತು ಎಂದು ಕೇಳಿದ್ದು, ಒಟ್ಟು 4 ತಿಂಗಳು ಬೇಕಾಗುವುದು ಎಂದು ನಯನಾ ಉತ್ತರಿಸಿದ್ದಾರೆ
ಅನೇಕರು ಬಹಳ ಕುತೂಹಲದಿಂದ ಇದನ್ನು ಯಾರು ಮಾಡಿದ್ದು, ನಮಗೂ ಅವರ ವಿಳಾಸ ನೀಡಿ ಎಂದೆಲ್ಲಾ ಕೇಳಿದ್ದಾರೆ. ಆದರೆ ಬಹುತೇಕರು ನಯನಾ ಹಲ್ಲಿಗೆ ಕತ್ತರಿ ಹಾಕಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದು, ದೊಡ್ಡ ತಪ್ಪು ಮಾಡಿದ್ದೀರಿ ಎಂದು ಹೇಳಿದ್ದಾರೆ. ಆದರ ಶಸ್ತ್ರಚಿಕಿತ್ಸೆಯ ನಂತರವೂ ನಯನಾ ಮಾತ್ರ ಮುದ್ದಾಗಿಯೇ ಕಾಣುತ್ತಿದ್ದು, ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.