'ಕರ್ಣ' ಧಾರಾವಾಹಿಯಲ್ಲಿ ನಟಿ ನಮ್ರತಾ ಗೌಡ ಅವರ ನಿತ್ಯಾ ಪಾತ್ರಕ್ಕೆ ಕೃತಕ ಬುದ್ಧಿಮತ್ತೆ (AI) ಮೂಲಕ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಧ್ವನಿಯಲ್ಲಿ ಧೈರ್ಯ ತುಂಬಲಾಗಿದೆ. ಸೀರಿಯಲ್‌ನ ಜಾತ್ರೆಯ ದೃಶ್ಯದಲ್ಲಿ, ವೇದಿಕೆಯ ಮೇಲಿದ್ದ ನಿತ್ಯಾಗೆ ಅಪ್ಪು ಅವರ ಧ್ವನಿಯು ಜೀವನದ ಪಾಠ ಹೇಳಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ನಾಲ್ಕು ವರ್ಷಗಳೇ ಕಳೆದರೂ ಅವರ ನೆನಪು ಅವರ ಅಭಿಮಾನಿಗಳ ಹೃದಯದಲ್ಲಿ ಹಚ್ಚ ಹಸಿರಾಗಿಯೇ ಇರುತ್ತದೆ. ಅವರ ಅಪ್ಪಟ ಅಭಿಮಾನಿಗಳ ಪೈಕಿ ಕರ್ಣ ಸೀರಿಯಲ್ ನಿತ್ಯಾ ಉರ್ಫ್ ಬಿಗ್ಬಾಸ್ (Bigg Boss) ಖ್ಯಾತಿಯ ನಮ್ರತಾ ಗೌಡ ಕೂಡ ಒಬ್ಬರು.
27
ಅಪ್ಪು ದನಿ
ಹೇಳಿಕೇಳಿ ಇದು ಕೃತಕ ಬುದ್ಧಿಮತ್ತೆ (AI) ಯುಗ. ಯಾರ ದನಿಯನ್ನಾದರೂ ಮರಳಿ ತರುವಂಥ ಯುಗವಿದು. ಅದೇ ರೀತಿ, ಕರ್ಣ ಸೀರಿಯಲ್ ಜಾತ್ರೆಯಲ್ಲಿ ನಿತ್ಯನಿಗೆ ಧೈರ್ಯ ತುಂಬಲು ಬಂದಿರೋದು ಬೇರೆ ಯಾರೂ ಅಲ್ಲ, ಖುದ್ದು ಅಪ್ಪು ಅವರೇ.
37
ನಿತ್ಯಾಗೆ ಕಮೆಂಟ್ಸ್
ಕರ್ಣ ಸೀರಿಯಲ್ ನಿತ್ಯಾ ಪಾತ್ರವನ್ನು ನೋಡಿ, ಇದಾಗಲೇ ನಮ್ರತಾ ಗೌಡ ಅವರಿಗೆ ಸಿಕ್ಕಾಪಟ್ಟೆ ಕೆಟ್ಟ ಕಮೆಂಟ್ಸ್ ಬಂದಿರೋದು ಇದೆ. ಕರ್ಣನನ್ನು ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಳ್ತಿರೋ ಕಾರಣ, ಇದೊಂದು ಸೀರಿಯಲ್, ನಿತ್ಯಾ ಎನ್ನುವುದು ಒಂದು ಪಾತ್ರ ಮಾತ್ರ ಎನ್ನೋದನ್ನೂ ಮರೆತು ನಟಿಗೇ ಟೀಕಿಸಿದವರು ಇದ್ದಾರೆ. ಇದರ ಬಗ್ಗೆ ಇದಾಗಲೇ ನಮ್ರತಾ ಗೌಡ ಸಾಕಷ್ಟು ನೊಂದು ಮಾತನಾಡಿದ್ದೂ ಇದೆ.
ಇದೀಗ ಕರ್ಣ ಸೀರಿಯಲ್ ಸಂತೆಯಲ್ಲಿ, ವೇದಿಕೆಯ ಮೇಲೆ ನಮ್ರತಾ ಗೌಡ (Namrata Gowda) ಅವರು ಸೂಪರ್ ಪರ್ಫಾಮೆನ್ಸ್ ನೀಡಿದ್ದಾರೆ. ಈ ವೇಳೆ ಅವರಿಗೆ ಆಶೀರ್ವದಿಸಲು ಬಂದಿರೋದು ಖುದ್ದು ಪುನೀತ್ ರಾಜ್ ಕುಮಾರ್ ಅವರು.
57
ಹಾಯ್ ನಮ್ರತಾ ಅವರೇ...
ಹಾಯ್ ನಮ್ರತಾ ಅವರೇ, ನಾನು ಅಪ್ಪು ಮಾತನಾಡುತ್ತಿದ್ದೇನೆ. ಕನ್ನಡ ಸೀರಿಯಲ್ನಲ್ಲಿ ನೀವು ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡುತ್ತಿದ್ದೀರಾ ನಿತ್ಯಾ ಅವರೇ. ಎಲ್ಲರಿಗೂ ನೀವು ಇನ್ಸ್ಪಿರೇಷನ್ ಆಗಿದ್ದೀರಾ ಎಂದು ಅಪ್ಪು ಮಾತನಾಡಿದ್ದಾರೆ.
67
ಕೈಹಿಡಿಯೋಕೆ ಪರಮಾತ್ಮ ಇರ್ತಾನೆ
ನೋಡ್ ನಿತ್ಯಾ ಲೈಫ್ನಲ್ಲಿ ಯಾವುದಕ್ಕೂ ಬೇಜಾರು ಮಾಡಿಕೊಳ್ಳಲು ಹೋಗಬಾರದು. ಹಳ್ಳಕ್ಕೆ ಬಿದ್ದಾಗ ಹೊಡೆಯಲು ಸಾವಿರ ಜನ ಬರಬಹುದು. ಆದರೆ ಕೈಹಿಡಿಯೋಕೆ ಪರಮಾತ್ಮ ಇರ್ತಾನೆ. ಇರೋದೆಂದೇ ಜೀವನ, ಹಿಂದೇನಾಗಿತ್ತೋ ನೆನಪಿಲ್ಲ, ಮುಂದೇನಾಗತ್ತೋ ಗೊತ್ತಿಲ್ಲ ಎನ್ನುವ ಧ್ವನಿ ಬಂದಿದೆ.
77
ನಿಮ್ಮ ಲೈಫ್ನಲ್ಲಿಯೂ ದೀಪಾವಳಿ ಬರುತ್ತದೆ
ನಾವು ಏನು ತಿನ್ನುತ್ತೀವಿ, ಎಲ್ಲಿ ಮಲಗುತ್ತೀವಿ ಎಲ್ಲವನ್ನೂ ಅವನು ಬರೆದುಬಿಟ್ಟಿದ್ದಾನೆ. ನೀವು ನಗುನಗುತ್ತಾ ಇರಿ. ನಿಮ್ಮ ಲೈಫ್ನಲ್ಲಿಯೂ ದೀಪಾವಳಿ ಬಂದೇ ಬರುತ್ತದೆ. ಪಟಾಕಿ ಹೊಡೆಯೋರು ನೀವೇ ಆಗಿರಿ ಎಂದಿದ್ದಾರೆ. ಇದನ್ನು ಕೇಳಿ ವೇದಿಕೆಯಲ್ಲಿ ಇದ್ದ ಎಲ್ಲರೂ ಭಾವುಕರಾಗಿದ್ದಾರೆ.