ಅಕ್ಕನ ಮದುವೆಯಲ್ಲಿ ಮದುಮಗಳಂತೆ ಮಿಂಚಿದ 'ಭಾಗ್ಯಲಕ್ಷ್ಮಿ' ಕನ್ನಿಕಾ! ನಟಿ ಸುಕೃತಾ ಕ್ಯೂಟ್​ ಫೋಟೋಸ್​

Published : Nov 23, 2025, 01:12 PM IST

'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ನಟಿ ಸುಕೃತಾ ನಾಗ್ ಅವರ ಅಕ್ಕನ ಮದುವೆ ಇತ್ತೀಚೆಗೆ ನಡೆದಿದೆ. ಈ ಸಂದರ್ಭದಲ್ಲಿ, ಅವರು ತಮ್ಮ ಹಿಂದಿನ ಪ್ರೀತಿ, ಬ್ರೇಕಪ್, ಹಾಗೂ ಖಿನ್ನತೆಯಿಂದ ಹೊರಬಂದ ಕಥೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಸೌಂದರ್ಯದ ಗುಟ್ಟನ್ನೂ ಸಹ ನಟಿ ಬಹಿರಂಗಪಡಿಸಿದ್ದಾರೆ.

PREV
19
ವಿಲನ್​ ಕನ್ನಿಕಾ

ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial)ನಲ್ಲಿ ಸದ್ಯ ಭಾಗ್ಯಳ ವಿರುದ್ಧ ಸುಖಾಸುಮ್ಮನೆ ಕಿಡಿ ಕಾರುತ್ತಿರುವವರಲ್ಲಿ ಒಬ್ಬಳು ವಿಲನ್​ ಕನ್ನಿಕಾ. ಆದಿಯ ಸಹೋದರಿಯಾಗಿರೋ ಕನ್ನಿಕಾ ತನ್ನ ಕುತಂತ್ರ ಬುದ್ಧಿಯಿಂದಲೇ ಫೇಮಸ್​.

29
ಅಕ್ಕನ ಮದುವೆ

ಇಂತಿಪ್ಪ ಕನ್ನಿಕಾಳ ರಿಯಲ್​ ಹೆಸರು ಸುಕೃತಾ ನಾಗ್​ (Sukruta Nag). ಸುಕೃತಾ ಅವರ ಅಕ್ಕನ ಮದುವೆ ಭರ್ಜರಿಯಾಗಿ ನಡೆದಿದ್ದು, ಈ ಸಂದರ್ಭದಲ್ಲಿ ನಟಿ ಸುಕೃತಾ ಮದುಮಗಳಂತೆ ಮಿಂಚಿದ್ದಾರೆ. ಅವರ ಕೆಲವು ವಿಡಿಯೋಗಳು ಈಗ ವೈರಲ್​ ಆಗಿವೆ.  ಸುಕೃತಾ ನಾಗ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋಗಳನ್ನು ಶೇರ್​ ಮಾಡಿದ್ದಾರೆ. ಇದರ ಜೊತೆಗೆ, ಸಿನಿಸ್ಟೋರ್​ ಕನ್ನಡ ಚಾನೆಲ್ ಕೂಡ​ ಮದುವೆಯ ಕೆಲವು ವಿಡಿಯೋಗಳನ್ನು ಶೇರ್​ ಮಾಡಿದ್ದು, ಅದರಲ್ಲಿ ಸುಕೃತಾ ಅವರ ಕ್ಯೂಟ್​ ಲುಕ್ ಕಾಣಬಹುದಾಗಿದೆ.

39
ನೆಗೆಟಿವ್​ ರೋಲ್​

ಇನ್ನು ಸುಕೃತಾ ಕುರಿತು ಹೇಳುವುದಾದರೆ, ನೆಗೆಟಿವ್​ ರೋಲ್​ ಮೂಲಕ ಎಲ್ಲರನ್ನೂ ರಂಜಿಸ್ತಿದ್ದಾರೆ. ಭಾಗ್ಯಲಕ್ಷ್ಮಿ ಸೀರಿಯಲ್​ಗೂ ಮುನ್ನ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಅಗ್ನಿಸಾಕ್ಷಿ ಸೀರಿಯಲ್‌ ಅಂಜಲಿ ಪಾತ್ರದ ಮೂಲಕ ಸೀರಿಯಲ್​ ಪ್ರೇಕ್ಷಕರ ಮನಸ್ಸನ್ನು ಗೆದ್ದವರು.

49
ಸುಕೃತಾ ಮದುವೆಯ ಬಗ್ಗೆ

ಅಕ್ಕನ ಮದುವೆಯಾಯಿತು. ಇನ್ನು ಏನಿದ್ದರೂ ಸುಕೃತಾ ಅವರ ಮದುವೆ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಕೇಳುತ್ತಿದ್ದಾರೆ. ಆದರೆ ಹಿಂದೊಮ್ಮೆ ನಟಿ, ಇನ್ನೊಂದು ಸಂದರ್ಶನದಲ್ಲಿ ತಮ್ಮ ಜೀವನದ ಲವ್​, ಬ್ರೇಕಪ್​, ಡಿಪ್ರೆಷನ್​ ಬಗ್ಗೆ ಮಾತನಾಡಿದ್ದರು. ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಲವ್‌ ಮತ್ತು ಬ್ರೇಕಪ್‌ ತುಂಬಾ ಕಾಮನ್‌ ಸಂಗತಿ ಆಗಿದೆ. ನಾನು ಲವ್‌ ಮಾಡಿದ್ದೀನಿ.. ನನಗೂ ಬ್ರೇಕಪ್‌ ಆಗಿದೆ. ಹಾರ್ಟ್‌ ಬ್ರೇಕ್‌ ಆಗಿದೆ. ಡಿಪ್ರೆಶನ್‌ಗೂ ಹೋಗಿದ್ದೀನಿ, ಥೆರಪಿನೂ ತೆಗೆದುಕೊಂಡಿದ್ದೀನಿ ಎಂದು ಸುಕೃತಾ ಓಪನ್​ ಆಗಿ ಹೇಳಿಕೊಂಡಿದ್ದರು.

59
ಖಿನ್ನತೆಗೆ ಜಾರಿದ್ದೆ

ಲವ್​ ಬ್ರೇಕಪ್​ ಆದಾಗ, ಖಿನ್ನತೆಗೆ ಜಾರಿದ್ದ ಬಗ್ಗೆ ಹೇಳಿಕೊಂಡಿರೋ ಸುಕೃತಾ, ಆ ಸಮಯದಲ್ಲಿ, ಮಾನಸಿಕ ತಜ್ಞರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಂಡಿದುದ್ದಾಗಿ ಹೇಳಿದ್ದಾರೆ. ಇದೆಲ್ಲವೂ ಪ್ರತಿಯೊಬ್ಬರ ಜೀವನದ ಒಂದು ಭಾಗ ಅಷ್ಟೇ. ಎರಡೂವರೆ ವರ್ಷದ ಪ್ರೀತಿ, ಬ್ರೇಕಪ್‌ ಆದಾಗ ಅದನ್ನ ಸಹಿಸಿಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಒಂದು ವ್ಯಕ್ತಿ ಜೊತೆಗೆ ಪ್ರೀತಿ ಮಾಡಿ, ಇವರನ್ನೇ ಮದುವೆನೂ ಆಗಬೇಕು ಅಂದ್ಕೊಂಡು, ಇಡೀ ಜೀವನವನ್ನೇ ಪ್ಲ್ಯಾನ್‌ ಮಾಡಿರುತ್ತೇವೆ. ಆ ವ್ಯಕ್ತಿ ದೂರ ಆದಾಗ ಬೇಜಾರಾಗುತ್ತೆ. ಅದೇ ನೋವಿನಿಂದ ಖಿನ್ನತೆಗೆ ಹೋಗಿದ್ದೆ. ಜೀವನ ಇಷ್ಟೇ ಎಂದು ಗೊತ್ತಾಯಿತು, ಏನೂ ಮಾಡಲು ಆಗಲ್ಲ ಎಂದಿದ್ದಾರೆ ನಟಿ.

69
ತುಂಬಾ ಇಷ್ಟಪಟ್ಟಿದ್ವಿ

ನಾವು ಒನ್ನರನೊಬ್ಬರನ್ನು ತುಂಬಾ ಇಷ್ಟ ಪಟ್ಟಿದ್ದೆವು. ಆದರೆ ಒಂದು ಪಾಯಿಂಟ್‌ನಲ್ಲಿ ಸಂಬಂದ ಟೇಕನ್‌ ಫಾರ್‌ ಗ್ರ್ಯಾಂಟೆಡ್‌ ಅನ್ನೋ ಥರ ಆಗಿ ಬಿಟ್ಟಿತು. ಮಾತು ಕಡಿಮೆ ಆಗುತ್ತೆ ಜೊತೆಗೆ ಪ್ರೀತಿ ಕೂಡ ಕಮ್ಮಿ ಆಗುತ್ತಾ ಹೋಗುತ್ತೆ. ನನಗೆ ಪ್ರೀತಿಗಿಂತ ಮುಖ್ಯ ಇನ್ನೇನು ಇಲ್ಲ. ನನಗೆ ಮನಸಾರೆ ಪ್ರೀತಿಸಬೇಕು ಅಷ್ಟೇ ಎಂದು ಮನದ ಮಾತನ್ನು ತೆರೆದಿಟ್ಟಿದ್ದರು. ನಮ್ಮ ಹಣೆಯ ಬರಹದಲ್ಲಿ ಯಾರೊಟ್ಟಿಗೆ ಬದುಕಬೇಕು ಅಂತ ಇರುತ್ತೋ ಅದೇ ಆಗೋದು. ಅದು ನನ್ನ ಜೀವನದ ಬ್ಯೂಟಿಫುಲ್‌ ಪಾರ್ಟ್.‌

79
ಮತ್ತೆ ಕಾಂಟ್ಯಾಕ್ಟ್​ ಇಲ್ಲ

ಬ್ರೇಕಪ್‌ ಆದಮೇಲೆ ಮತ್ತೆ ನನ್ನನ್ನು ಕಾಂಟ್ಯಾಕ್ಟ್‌ ಮಾಡಲಿಲ್ಲ. ನಾನು ಕೂಡ ಕಾಂಟ್ಯಾಕ್ಟ್‌ ಮಾಡಲಿಲ್ಲ. ಅವರ ಲೈಫ್‌ನಲ್ಲಿ ಅವರು ಚೆನ್ನಾಗಿದ್ದಾರೆ ಮತ್ತು ನನ್ನ ಜೀವನದಲ್ಲಿ ನಾನು ಚೆನ್ನಾಗಿದ್ದೀನಿ ಅಷ್ಟೇ ಎಂದಿದ್ದರು. ಅಷ್ಟಕ್ಕೂ ಇವರ ಲವ್​ ಫೇಲ್ಯೂರ್​ ಆಗಿದ್ದು, ಕೋವಿಡ್‌ ಟೈಮ್‌ನಲ್ಲಿ. ವ್ಯಕ್ತಿ ಸಿಗುವುದಕ್ಕೂ ಮೊದಲು ತುಂಬಾ ಎತ್ತರಕ್ಕೆ ವ್ಯಾಲ್ಯೂ ಇರುತ್ತೆ. ಸಿಕ್ಕಿದ ಮೇಲೆ ಆ ವ್ಯಾಲ್ಯೂ ತುಂಬಾ ಕೆಳಗೆ ಹೋಗುತ್ತದೆ, ಮತ್ತೆ ಕಳೆದುಕೊಂಡಾಗ ವಾಲ್ಯೂ ಹೆಚ್ಚಾಗುತ್ತೆ ಎಂದಿದ್ದರು.

89
ಸೌಂದರ್ಯದ ಬಗ್ಗೆ ನಟಿ ಸುಕೃತಾ ನಾಗ್​

ಸುಕೃತಾ ಅವರು ಸೀರಿಯಲ್​ಗಳಲ್ಲಿ ಸೀರೆ ಉಟ್ಟು ಬಂದರೂ ಹೈಸ್ಕೂಲ್​ ಹುಡುಗಿಯಂತೆಯೇ ಕಾಣುತ್ತಾರೆ. ಗೂಗಲ್​ ದಾಖಲೆಗಳ ಪ್ರಕಾರ ಅವರ ವಯಸ್ಸೀಗ 32. ಆದರೂ ಕೂಡ ಇಷ್ಟೊಂದು ಚಿಕ್ಕ ವಯಸ್ಸಿನವರಂತೆ ಕಾಣಲು ಕಾರಣವೇನು ಎಂಬುದು ಹಲವರ ಪ್ರಶ್ನೆಯಾಗಿತ್ತು. ಈಚೆಗಷ್ಟೇ ನಟಿ ಗುಟ್ಟನ್ನು ರಿವೀಲ್​ ಮಾಡಿದ್ದರು.

99
ಪೇರೆಂಟ್ಸ್​ ಗಿಫ್ಟ್​

ನಟಿ ಹೇಳಿದ್ದೇನೆಂದರೆ, ಇದು ಪೇರೆಂಟ್ಸ್​ ಗಿಫ್ಟ್​. ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕ ಎಲ್ಲರೂ ಹೀಗೇನೇ. ಚಿಕ್ಕವರಂತೆಯೇ ಇದ್ದಾರೆ. ಅದೇ ನನಗೆ ಬಂದಿರುವುದು ಎಂದಿದ್ದಾರೆ. ಇದೇ ವೇಳೆ ತಾವು ನಟನೆಗೆ ಬಂದದ್ದು ಅಚಾನಕ್​ ಆಗಿ. ಬಿಸಿಎ ಮುಗಿಸಿದ್ದೇನೆ. ನಮ್ಮ ಮನೆಯಲ್ಲಿ ಓದು ಮೊದಲು ಎಂದಿದ್ದರು. ನನಗೂ ಚಿಕ್ಕವಳಿರುವಾಗ ಬಹುತೇಕ ಮಂದಿಯಂತೆ ಡಾಕ್ಟರ್​, ಎಂಜಿನಿಯರ್​ ಆಗಬೇಕು ಎನ್ನುವ ಆಸೆ ಇತ್ತು. ಆದರೆ ಡೆಸ್ಟಿನಿ ಇಲ್ಲಿಯವರೆಗೆ ಕರೆದುಕೊಂಡು ಬಂತು ಎಂದಿದ್ದರು.

Read more Photos on
click me!

Recommended Stories