ಶೀಘ್ರದಲ್ಲಿ ಪ್ರೇಕ್ಷಕರಿಗೆ ವಿದಾಯ ಹೇಳಲಿದೆ ಜನಮೆಚ್ಚಿದ ಜೋಡಿಯ ಬ್ಲಾಕ್ ಬಸ್ಟರ್ ಸೀರಿಯಲ್

Published : Oct 08, 2026, 09:54 PM IST

Kannada Serial Update: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯೊಂದು ಶೀಘ್ರದಲ್ಲೇ ಮುಕ್ತಾಯವಾಗಲಿದೆ. ವೀಕ್ಷಕರಿಗೆ ವಿದಾಯ ಹೇಳಲಿದೆ. ಹಾಗಿದ್ರೆ ಯಾವ ಧಾರಾವಾಹಿ ಮುಗಿಯಲಿದೆ ಹಾಗೂ ಯಾವ ಧಾರಾವಾಹಿ ಶುರುವಾಗಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

PREV
16
ಜನಪ್ರಿಯ ಧಾರಾವಾಹಿ ಮುಕ್ತಾಯ

ಕನ್ನಡ ಕಿರುತೆರೆಯಲ್ಲಿನ ಜನಪ್ರಿಯ ಧಾರಾವಾಹಿಯೊಂದು ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಇದು ಜನಮೆಚ್ಚಿದ ಜೋಡಿಯನ್ನು ಹೊಂದಿದ್ದ ಬ್ಲಾಕ್ ಬಸ್ಟರ್ ಧಾರಾವಾಹಿ. ಇನ್ನೇನು ಕಥೆಯು ಮುಕ್ತಾಯ ಹಂತಕ್ಕೆ ಬಂದು ನಿಂತಿದ್ದು, ಕೆಲವೇ ತಿಂಗಳಲ್ಲಿ ಧಾರಾವಾಹಿ ಮುಕ್ತಾಯವಾಗಲಿದೆ.

26
ಯಾವ ಧಾರಾವಾಹಿ ಗೊತ್ತಾ?

ಇದು ಬೇರೆ ಯಾವುದೂ ಅಲ್ಲ, ‘ಅಮೃತಧಾರೆ’ ಧಾರಾವಾಹಿ. ಹೌದು, ಅಮೃತಧಾರೆ ಧಾರಾವಾಹಿ ಶೀಘ್ರದಲ್ಲೇ ತನ್ನ ಕಥೆಯನ್ನು ಮುಕ್ತಾಯಗೊಳಿಸಲಿದೆ. ಹಾಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

36
ಸದ್ಯ ಧಾರಾವಾಹಿ ಕಥೆ ಏನಾಗಿದೆ?

ಧಾರಾವಾಹಿಯಲ್ಲಿ ಸದ್ಯ ಮನೆಗೆ ಭೂಮಿಕಾ ಬದಲಿಗೆ ದೀಪಿಕಾ ಬಂದಿದ್ದಾಳೆ. ಬರುವಂತೆ ಶಾಕುಂತಲಾ ಮತ್ತು ಜೈದೇವ್ ಮಾಡಿದ್ದಾರೆ. ಜೈ ದೇವ್ ಕೂಡ ಮನೆಗೆ ವಾಪಾಸ್ ಆಗಿದ್ದಾನೆ. ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿದ್ದ ಭೂಮಿಕಾ ಇದೀಗ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಮತ್ತೊಂದೆಡೆ ಭೂಮಿಕಾ ಅಪ್ಪ-ಅಮ್ಮನಿಗೆ ಹುಟ್ಟಿದ್ದು ಅವಳಿಜವಳಿ ಮಕ್ಕಳು ಎನ್ನುವ ಸತ್ಯ ರಿವೀಲ್ ಆಗಿದೆ. ಆ ಮಗುವೇ ದೀಪಿಕಾ ಅನ್ನೋದು ಈಗ ಕನ್ಫರ್ಮ್ ಆಗಿದೆ.

46
ಮಲ್ಲಿ ಕೈಯಲ್ಲಿ ಸಿಕ್ಕಿಬಿದ್ದ ದೀಪಿಕಾ

ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಭೂಮಿಕಾಳನ್ನು, ಜೀವಾ ಮತ್ತು ಮಲ್ಲಿ ರಕ್ಷಿಸಿದ್ದಾರೆ. ಈಗ ದೀಪಿಕಾಳನ್ನು ಕೂಡ ಮಲ್ಲಿ ವಶಕ್ಕೆ ಪಡೆದುಕೊಂಡಿದ್ದಾಳೆ. ಎಲ್ಲಾ ರೀತಿಯಲ್ಲೂ ದೀಪಿಕಾ ಲಾಕ್ ಆದಮೇಲೆ ಶೀಘ್ರದಲ್ಲೇ ಶಕುಂತಲಾ ಮತ್ತು ಜೈದೇವ್ ಆಟ ಕೊನೆಯಾಗುವ ಎಲ್ಲಾ ಲಕ್ಷಣಗಳೂ ಇವೆ. ಹಾಗಾಗಿ ಎಲ್ಲಾ ವಿಲನ್ ಗಳ ಆಟ ಕೊನೆಯಾದರೆ ಇನ್ನು ಮುಂದೆ ಧಾರಾವಾಹಿಯಲ್ಲಿ ಕಥೆ ಇರೋದಿಲ್ಲ.

56
ಗೌತಮ್ ದಿವಾನ್ ಎಲ್ಲಿ?

ಇನ್ನು ದೀಪಿಕಾ ಕಥೆ ಶುರುವಾದ ಮೇಲೆ ಗೌತಮ್ ದಿವಾನ್ ಅಂದ್ರೆ ಗುಂಡು ನಾಪತ್ತೆಯಾಗಿದ್ದಾರೆ. ಬ್ಯುಸಿನೆಸ್ ಮೀಟ್ ಎಂದು ಹೇಳಿದ್ದು, ಬಳಿಕ ಪಾತ್ರದ ಬಗ್ಗೆ ಹೆಚ್ಚಿನ ಅಪ್ಡೇಟ್ ಸಿಕ್ಕಿಲ್ಲ. ಹಾಗಾಗಿ, ಗೌತಮ್ ಮತ್ತೆ ಧಾರಾವಾಹಿಗೆ ಬರುತ್ತಾರೋ? ಅಥವಾ ಭೂಮಿಕಾ ಪಾತ್ರದ ಮೂಲಕವೇ ಮನೆಮಂದಿ ಎಲ್ಲಾ ಪ್ಂದಾಗುವ ಮೂಲಕ ಧಾರಾವಾಹಿ ಅಂತ್ಯವಾಗುತ್ತೋ ಕಾದು ನೋಡಬೇಕಿದೆ.

66
ಹೊಸ ಧಾರಾವಾಹಿ ಶುರು

ಇನ್ನು ಶೀಘ್ರದಲ್ಲೇ ಹೊಸ ಧಾರಾವಾಹಿ ‘ಗೌರಿ ಪುತ್ರ’ ಶುರುವಾಗಲಿದೆ ಎನ್ನಲಾಗಿದೆ. ಪ್ರೊಮೋ ಕೂಡ ರಿಲೀಸ್ ಆಗಿದೆ. ಧಾರಾವಾಹಿ ನಾಯಕನಾಗಿ 'ರಾಮಾಚಾರಿ’ಯ ರಿತ್ವಿಕ್ ನಟಿಸುತ್ತಿದ್ದಾರೆ. ನಾಯಕಿಯಾಗಿ ‘ಗಟ್ಟಿಮೇಳ’ ಖ್ಯಾತಿಯ ಮಹತಿ ವೈಷ್ಣವಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅನುಪ್ರಭಾಕರ್ ಮತ್ತು ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories